
PHOTO CREDIT : RAVI DIGITALS PADUBIDRI
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ: “ವಿವಿಧ ಸಹಕಾರ ಸಂಘಗಳಿಗೆ ತರಬೇತಿ” ಕಾರ್ಯಕ್ರಮ

(Padubidri) ಪಡುಬಿದ್ರಿ: ಅಂತರಾಷ್ಟ್ರೀಯ ಸಹಕಾರಿ ವರ್ಷ-2025 ಸಲುವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕಾ ಸೊಸೈಟಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ “ವಿವಿಧ ಸಹಕಾರ ಸಂಘಗಳಿಗೆ ವ್ಯವಹಾರಿಕ ಪದ್ಧತಿಗಳ ಕುರಿತು ತರಬೇತಿ” ಕಾರ್ಯಕ್ರಮವು ಬುಧವಾರ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪ್ರಧಾನ ಕಛೇರಿ, ಸಹಕಾರ ಸಂಗಮದಲ್ಲಿ ನಡೆಯಿತು.
ಕಾರ್ಯಕ್ರಮವು “ಕಲಿಕೆ ನಿರಂತರ ಪ್ರಕ್ರಿಯೆ ತರಬೇತಿ ಅದರ ಪ್ರೇರಕ” ಎಂಬ ಧ್ಯೇಯದೊಂದಿಗೆ “ವಿವಿಧ ಸಹಕಾರ ಸಂಘಗಳಿಗೆ ವ್ಯವಹಾರಿಕ ಪದ್ಧತಿಗಳ ಕುರಿತು ತರಬೇತಿ” ಅಭಿಯಾನದಡಿ ನಡೆದಿದ್ದು, ನವಶಕ್ತಿ ಮಹಿಳಾ ಮಂಡಳಿ ಹಾಗೂ ನವಶಕ್ತಿ ವುಮೆನ್ಸ್ ವೆಲ್ ಫೇರ್ ಸೊಸೈಟಿ, ಪಡುಬಿದ್ರಿ ಇವರು ಸಹಕಾರ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ವಲಯ-XVರ ಪೂರ್ವ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಇನ್ನ ಉದ್ಘಾಟಿಸಿದರು.
ಅವರು ಮಾತನಾಡಿ, ಇಂದು ಬೆಳಗಿಸಿದ ದೀಪ ಈ ಸಂಸ್ಥೆಯ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೆ ಬೆಳಗಿಸುವ ಪ್ರಕಾಶಿಸುವ ದೀಪವಂತಾಗಲಿ. ಮಾಹಿತಿಯನ್ನು ಪಡೆಯಲು ಬಂದಿರುವ ಬಂಧುಗಳ ಜ್ಞಾನ ಶಕ್ತಿಯನ್ನು ಬೆಳಗಿಸುವ ದೀಪವಾಗಲಿ. ಎಲ್ಲರ ಜೀವನವನ್ನು ಬೆಳಗಿಸುವ ದೀಪವಾಗಲಿ ಎಂದು ಶುಭ ಕೋರುತ್ತಾ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಯ ಕಾರ್ಯ ವೈಖರಿಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿ, ಚಿಕ್ಕ ಮಟ್ಟದಲ್ಲಿ ಹುಟ್ಟಿ ಕೊಂಡ ಈ ಸಂಸ್ಥೆಯು ಈಗೀನ ಅಧ್ಯಕ್ಷರಿಂದಾಗ ರಾಜ್ಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದರು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕಾ ಸೊಸೈಟಿಯ ಅಧ್ಯಕ್ಷ ವೈ ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿನಂತೆ ಇರುವ ನಮ್ಮ ಸಹಕಾರಿ ಸೊಸೈಟಿಗಳ ಪದ್ಧತಿಯನ್ನು ಈಗಿನ ಪದ್ಧತಿಯ ಪ್ರಕಾರ ನೆಡೆಸಲು ತರಬೇತಿ ಅಗತ್ಯ ಇರುವ ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸೂಚನೆ ಮೇರೆಗೆ ಏಳು ದಿನಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇಂದು ವಿವಿಧ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ವ್ಯವಹಾರಿಕ ಪದ್ಧತಿಗಳ ಕುರಿತು ತರಬೇತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ರಾಜ್ಯ ಮಟ್ಟದ ಸಹಕಾರಿ ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಶ್ರೀಧರ್ ಪಿ.ಎಸ್‌ರವರು ಸಹಕಾರ ಸಂಘ, ಸಂಸ್ಥೆಗಳ ಪ್ರತಿನಿಧಿಗಳಿಗೆ ತರಬೇತಿ ನೀಡಿದರು.
ಈ ಸಂದರ್ಭ ಪಡುಬಿದ್ರಿ ಸಿ.ಎ. ಸೊಸೈಟಿ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ, ನಿರ್ದೇಶಕರಾದ ಗಿರೀಶ್ ಪಲಿಮಾರು, ಕೃಷ್ಣ ಬಂಗೇರ, ಮಾಧವ ಆಚಾರ್ಯ, ವಾಸು ದೇವಾಡಿಗ, ಕಾಂಚನಾ, ರೋಹಿಣಿ ಎ., ಕುಸುಮಾ ಕರ್ಕೇರ, ಶಿವರಾಮ ಎನ್ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್ ಮತ್ತು ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ನಿಖಿಲ್ ಪೂಜಾರಿ ನಿರೂಪಿಸಿ, ವಂದಿಸಿದರು.

