• Home  
  • ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆ (Kaup: Inauguration of extracurricular activities at Dandatirtha Educational Institution)
- ಶಾಲಾ ಕಾಲೇಜು

ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆ (Kaup: Inauguration of extracurricular activities at Dandatirtha Educational Institution)

Share: ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆ (Kaup)ಕಾಪು: ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆಯನ್ನು ಸ್ಕೌಟ್ ರಾಷ್ಟ್ರಪತಿ ಪುರಸ್ಕಾರ ಪಡೆದ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಕಾಪು ಲಯನ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಕಟಪಾಡಿ ಲಕ್ಷ್ಮೀ ಶ್ಯಾಮ್ ಡೆವಲಪರ್ಸ್ ನ ನಿರ್ದೇಶಕ ಲ. ವರುಣ್ ಶೆಟ್ಟಿ ನೆರವೇರಿಸಿದರು.  ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮುಂದಿನ ದಿನಗಳಲ್ಲಿ ಶಿಸ್ತಿನ ಹಾಗೂ ಯಶಸ್ಸಿನ ವ್ಯಕ್ತಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ […]

(Kaup)ಕಾಪು: ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪಾಠೇತರ ಚಟುವಟಿಕೆಗಳ ಉದ್ಘಾಟನೆಯನ್ನು ಸ್ಕೌಟ್ ರಾಷ್ಟ್ರಪತಿ ಪುರಸ್ಕಾರ ಪಡೆದ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ, ಕಾಪು ಲಯನ್ಸ್ ಕ್ಲಬ್ ನ ಅಧ್ಯಕ್ಷ ಹಾಗೂ ಕಟಪಾಡಿ ಲಕ್ಷ್ಮೀ ಶ್ಯಾಮ್ ಡೆವಲಪರ್ಸ್ ನ ನಿರ್ದೇಶಕ ಲ. ವರುಣ್ ಶೆಟ್ಟಿ ನೆರವೇರಿಸಿದರು.

 ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಮುಂದಿನ ದಿನಗಳಲ್ಲಿ ಶಿಸ್ತಿನ ಹಾಗೂ ಯಶಸ್ಸಿನ ವ್ಯಕ್ತಿಯಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡಾ ನಾಯಕತ್ವ ಗುಣಗಳನ್ನು ಬೆಳೆಸಿ ರಾಷ್ಟ್ರಪ್ರೇಮಿ ವ್ಯಕ್ತಿಗಳಾಗಿ ಮೂಡಿಬನ್ನಿ ಎಂಬ ಸಂದೇಶ ನೀಡಿದರು.

 ಸಂಸ್ಥೆಯ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿ, ಮುಖ್ಯ ಅತಿಥಿಯನ್ನು ಸನ್ಮಾನಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹ ಸ್ ಪರಿಚಯ ಪತ್ರ ವಾಚಿಸಿದರು.

 ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್, ಬುಲ್ ಬುಲ್ ಶಿಕ್ಷಕಿ ಅನುಪಮಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

 ವಿದ್ಯಾರ್ಥಿಗಳಾದ ದೃತಿ ಸ್ವಾಗತಿಸಿದರು. ಆರ್ಯನ್ ಮತ್ತು ಸಾದಿಯಾ ನಿರೂಪಿಸಿದರು. ಅಭಿಷೇಕ್ ಸಿಂಗ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.