ಉಚ್ಚಿಲ : ಉಡುಪಿ – ಉಚ್ಚಿಲ ದಸರಾ-2025 ಪೂರ್ವಭಾವಿ ಸಭೆ
ದಿನಾಂಕ: 06.07.2025 ಅಪರಾಹ್ನ 3.00ಕ್ಕೆ, ಸ್ಥಳ: ಮೊಗವೀರ ಭವನ ಉಚ್ಚಿಲ.
(Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ನೇತೃತ್ವದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಹೃದಯಿ ಭಕ್ತಾಭಿಮಾನಿಗಳ ಸಹಕಾರ-ಸಹಯೋಗದೊಂದಿಗೆ ಕಳೆದ ಬಾರಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ “ಉಡುಪಿ ಉಚ್ಚಿಲ ದಸರಾ-“ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದೆ.
ಈ ಬಾರಿ 4 ನೇ ವರ್ಷದ ಉಡುಪಿ ಉಚ್ಚಿಲ ದಸರಾ ಉತ್ಸವವು ಸೆ. ೨೨ರಿಂದ ಅ. 02 ರವರೆಗೆ ನಡೆಯಲ್ಲಿದ್ದು, ಉತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲು ದಿನಾಂಕ: 06-07-2025,ಆದಿತ್ಯವಾರ, ಅಪರಾಹ್ನ 3.00ಕ್ಕೆ ಉಚ್ಚಿಲದ ಮೊಗವೀರ ಭವನದಲ್ಲಿ ಸಭೆ ನಡೆಸಲು ನಿರ್ಣಯಿಸಲಾಗಿದೆ.
ಈ ಪ್ರಯುಕ್ತ ಎಲ್ಲಾ ಸಹೃದಯಿ ಭಕ್ತರು, ಸಮಿತಿಯ ಸರ್ವ ಸದಸ್ಯರು, ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಮೀನುಗಾರಿಕಾ ಸಂಘಟನೆಯ ಸದಸ್ಯರು, ಮಹಿಳೆಯರು, ಸೇರಿದಂತೆ ಎಲ್ಲಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಸದ್ರಿ ಸಭೆಯಲ್ಲಿ ಭಾಗವಹಿಸಿ ಈ ಬಾರಿಯ “ಉಡುಪಿ ಉಚ್ಚಿಲ ದಸರಾ-2025 ಉತ್ಸವವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ವಿನಂತಿಸಿದೆ.

