• Home  
  • ಕೋಟ : ಆಸಾಡಿ ಒಡ್ರ್ – ಸಾಧಕ ಪುರಸ್ಕಾರಕ್ಕೆ ಸಾಂಸ್ಕೃತಿಕ ಚಿಂತಕಿ ಭಾರತಿ ವಿ. ಮೈಯ್ಯ ಆಯ್ಕೆ (Kota: Cultural thinker Bharathi V. for the Asadi odar – meritorious award)
- CONGARTULATIONS - Uncategorised - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಕೋಟ : ಆಸಾಡಿ ಒಡ್ರ್ – ಸಾಧಕ ಪುರಸ್ಕಾರಕ್ಕೆ ಸಾಂಸ್ಕೃತಿಕ ಚಿಂತಕಿ ಭಾರತಿ ವಿ. ಮೈಯ್ಯ ಆಯ್ಕೆ (Kota: Cultural thinker Bharathi V. for the Asadi odar – meritorious award)

Share: ಕೋಟ : ಆಸಾಡಿ ಒಡ್ರ್ – ಸಾಧಕ ಪುರಸ್ಕಾರಕ್ಕೆ ಸಾಂಸ್ಕೃತಿಕ ಚಿಂತಕಿ ಭಾರತಿ ವಿ. ಮೈಯ್ಯ ಆಯ್ಕೆ  (Kota) ಕೋಟ:  ಕೋಟ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ “ಆಸಾಡಿ ಒಡ್ರ್” ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮೈಯ್ಯಯವರನ್ನು ಆಯ್ಕೆ ಗೊಳಿಸಲಾಗಿದೆ.    ಅಗಸ್ಟ್ 10 ರ ಭಾನುವಾರ ಬೆಳಿಗ್ಗೆ 9 ರಿಂದ ಹಂದಟ್ಟು ಗೆಳೆಯರ ಬಳಗ […]

 (Kota) ಕೋಟ:  ಕೋಟ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ “ಆಸಾಡಿ ಒಡ್ರ್” ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮೈಯ್ಯಯವರನ್ನು ಆಯ್ಕೆ ಗೊಳಿಸಲಾಗಿದೆ.

   ಅಗಸ್ಟ್ 10 ರ ಭಾನುವಾರ ಬೆಳಿಗ್ಗೆ 9 ರಿಂದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ “ಆಸಾಡಿ ಒಡ್ರ್” ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು.

 ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಹಾಗೂ ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಭಾಗವಹಿಸಲಿದ್ದಾರೆ.

 ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ, ಅನಾಥಾಶ್ರಮಕ್ಕೆ ನೆರವು, ಸ್ನೇಹಕೂಟ ಮಣೂರು  ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

 ಗೆಳೆಯರ ಬಳಗ ಹಂದಟ್ಟು ಹಾಗೂ ಹಂದಟ್ಟು ಮಹಿಳಾ ಬಳಗ ಕೋಟ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.