ಪಡುಬಿದ್ರಿ : ಕಾರು ಪಲ್ಟಿ, ಚಾಲಕ ಪಾರು
ಪಡುಬಿದ್ರಿ ಬೀಡು ಬದಿ ರಾಹೆ 66 ರಲ್ಲಿ ನಡೆದ ಘಟನೆ
(Padubidri) ಪಡುಬಿದ್ರಿ: ಮಂಗಳೂರು ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಶುಕ್ರವಾರ ಪಡುಬಿದ್ರಿ ನಡ್ಸಾಲುವಿನ ಅಲಂಗಾರು ರಾಹೆ 66ರಲ್ಲಿ ಘಟಿಸಿದೆ.
ಘಟನೆಯಲ್ಲಿ ಕಾರಿನ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗಿತ್ತದ್ದ ಕಾರಿನ ಟಯರ್ ಒಮ್ಮೇಲೆ ಸ್ಫೋಟಗೊಂಡು ಕಾರು ಚಾಲಕನ ನಿಯಂತ್ರಣ ತಪ್ಪಿ ವಿಭಾಜಕ ಏರಿ ಮತ್ತೊಂದು ಪಾಶ್ವಕ್ಕೆ ಬಿದ್ದು ಪಲ್ಟಿಯಾಗಿದೆ.
ಆ ಸಂದರ್ಭ ಹೆದ್ದಾರಿಯಲ್ಲಿ ವಾಹನ ಸಂಚಾರವಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಪೊಲೀಸರು ಆಗಮಿಸಿ, ಹೆದ್ದಾರು ಸಂಚಾರ ಸುಗಮ ಆಗುವಂತೆ ನೋಡಿ ಕೊಂಡಿದ್ದಾರೆ.
ಹೆಜಮಾಡಿ ಟೋಲ್ ಪ್ಲಾಜಾದ ಸಿಬ್ಬಂದಿ ಕ್ರೇನ್ ಮೂಲಕ ಕಾರನ್ನು ತೆರವು ಮಾಡಿದ್ದಾರೆ.

