ಕುಂದಾಪುರ ದನ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
(Kundapura) ಕುಂದಾಪುರ: ಕಾಳಾವರ ಜಂಕ್ಷನ್‌ನಲ್ಲಿ ಕಳೆದ ಜುಲೈ 28ರಂದು ರಾತ್ರಿವೇಳೆ ದನ ಕಳ್ಳತನ ಮಾಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಗುಲ್ವಾಡಿ ಗ್ರಾಮದ ಅಬೂಬಕ್ಕರ್, ಮೊಹಮ್ಮದ್ ರಫೀಕ್, ಯಾಕೂಬ್, ಹಾಗೂ ಸುನಿಲ್ ಬಂಧಿತ ಆರೋಪಿಗಳು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಜು. 28ರಂದು ರಾತ್ರಿ ಈ ಆರೋಪಿಗಳು ಬೇಕರಿಯೊಂದರ ಪಕ್ಕದಲ್ಲಿ ಮಲಗಿದ್ದ ದನಗಳನ್ನು ವಾಹನದಲ್ಲಿ ಕಳ್ಳತನ ಮಾಡಿ, ವಧೆ ಮಾಡಲು ಕೊಂಡೊಯ್ದಿರುವುದು ಅಲ್ಲಿನ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರ ತಂಡವನ್ನು ರಚಿಸಲಾಗಿತ್ತು.

