ಎರ್ಮಾಳು : ಕಾರು ಡಿಕ್ಕಿಯಾಗಿ ಪಾದಾಚಾರಿ ಗಂಭೀರ
(Padubidri) ಪಡುಬಿದ್ರಿ : ಕಾರೊಂದು ಪಾದಾಚಾರಿಗೆ ಡಿಕ್ಕಿಯಾಗಿ ಆತ ಗಂಭೀರ ಗಾಯಗೊಂಡ ಘಟನೆ ಎರ್ಮಾಳು ತೆಂಕ ಕಲ್ಯಾಣಿ ಪೆಟ್ರೋಲ್ ಬಂಕ್ ಎದುರು ರಾ.ಹೆ.66ರಲ್ಲಿ ಗುರುವಾರ ಸಂಜೆ ಘಟಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಹಳೆಯಂಗಡಿ ಇಂದಿರಾನಗರ ನಿವಾಸಿ ಸಂಶುದ್ದೀನ್ ಎಂದು ಗುರುತಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಶಂಶುದ್ದೀನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸ್ಥಳೀಯರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ವಿಭಜಕ ಏರಿ ನಿಂತಿದೆ.
ಅಪಘಾತದ ಸಂದರ್ಭ ಸಂಚಾರವ್ಯತ್ಯಯ ಉಂಟಾಗಿದ್ದು, ಕಾರನ್ನು ಹೆಜಮಾಡಿ ಟೋಲ್ ಸಿಬ್ಬಂದಿಗಳು, ಸ್ಥಳೀಯರು, ಪಡುಬಿದ್ರಿ ಪೊಲೀಸರು ತೆರವುಗೊಳಿಸಿ ಹೆದ್ದಾರಿ ಸಂಚಾರ ಸುಗಮ ಗೊಳಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

