ಉಚ್ಚಿಲ : ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ, ಪಾದಚಾರಿ ಸಹಿತ ಮೂವರಿಗೆ ಗಾಯ
(Uchila) ಉಚ್ಚಿಲ : ಉಚ್ಚಿಲ ರಾಹೆ 66ರ ವೇಗಧೂತ ಬಸ್ಸು ನಿಲ್ದಾಣದ ಬಳಿ ಬೈಕೊಂದು ಪಾದಚಾರಿಗೆ ಡಿಕ್ಕಿಹೊಡೆದ ಪರಿಣಾಮ ಪಾದಚಾರಿ ತೀವ್ರ ಗಾಗೊಂಡಿದ್ದು, ಬೈಕಿನಲ್ಲಿದ್ದ ಇಬ್ಬರೂ ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಗಾಯಾಳುಗಳನ್ನು ಉಚ್ಚಿಲದ ಎರಡು ಎಸ್ಡಿಪಿಐ ಅಂಬಲೆನ್ಸ್ ನಲ್ಲಿ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೈಕಿನಲ್ಲಿದ್ದ ದಾಖಲೆಯ ಪ್ರಕಾರ ಮಂಗಳೂರಿನ ಜೆಪ್ಪು ಕಂಕನಾಡಿಯ ಜನಾರ್ಧನ ಭಜನಾ ಮಂದಿರ ಬಳಿಯ ನಿವಾಸಿ ಸುನೀಲ್ ಕುಮಾರ್ ಎಂದು ತಿಳಿದು ಬಂದಿದೆ. ಬೈಕಿನಲ್ಲಿ ಮಹಿಳೆ ಮತ್ತು ಪುರುಷ ಇದ್ದು, ಬೈಕ್ ಸವಾರ ತೀವ್ರ ಗಾಯಗೊಂಡಿದ್ದು, ಮಹಿಳೆಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಮಾಹಿತಿ ಪೊಲಿಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

