• Home  
  • ಮಂಚಿ ಗ್ರಾಮ ಪಂಚಾಯತ್ ನಲ್ಲಿ‌ “ಆಟಿಡೊಂಜಿ ಕೂಟ” (“Atidonji koota” in Manchi Gram Panchayat)
- social service - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಮಂಚಿ ಗ್ರಾಮ ಪಂಚಾಯತ್ ನಲ್ಲಿ‌ “ಆಟಿಡೊಂಜಿ ಕೂಟ” (“Atidonji koota” in Manchi Gram Panchayat)

Share: ಮಂಚಿ ಗ್ರಾಮ ಪಂಚಾಯತ್ ನಲ್ಲಿ‌ “ಆಟಿಡೊಂಜಿ ಕೂಟ“ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ  ಜಿ.ಯಂ. ಇಬ್ರಾಹಿಂ ವಹಿಸಿದ್ದರು.  (Bantwala) ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ಮತ್ತು ಚಿಲುಮೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಆಶ್ರಯದಲ್ಲಿ “ಆಟಿಡೊಂಜಿ ಕೂಟ” ಮಂಚಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಯಂ. ಇಬ್ರಾಹಿಂ ವಹಿಸಿದ್ದರು.    ಚಿಲುಮೆ ಸಂಜೀವಿನಿ ಒಕ್ಕೂಟದ  ಅಧ್ಯಕ್ಷರಾದ ಆಸ್ಯಮ್ಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿ. ಗೀತಾ, ಗ್ರಾಮ ಪಂಚಾಯತ್ ಸದಸ್ಯರು, […]

(Bantwala) ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ಮತ್ತು ಚಿಲುಮೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಆಶ್ರಯದಲ್ಲಿ “ಆಟಿಡೊಂಜಿ ಕೂಟ” ಮಂಚಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ನಡೆಯಿತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಯಂ. ಇಬ್ರಾಹಿಂ ವಹಿಸಿದ್ದರು. 

  ಚಿಲುಮೆ ಸಂಜೀವಿನಿ ಒಕ್ಕೂಟದ  ಅಧ್ಯಕ್ಷರಾದ ಆಸ್ಯಮ್ಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿ. ಗೀತಾ, ಗ್ರಾಮ ಪಂಚಾಯತ್ ಸದಸ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಶಾರದ, ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ, ಗ್ರಾಮ ಆಡಳಿತ ಅಧಿಕಾರಿ ನಾಗರಾಜ್‌, ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕಿ ದೀಕ್ಷಿತಾ, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಪೂರ್ಣಿಮಾ, ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ಸುಗ್ರಾಮ ಜಿಲ್ಲಾ ಸಂಯೋಜಕರಾದ ಚೇತನ್‌ ಕುಮಾರ್, ಗ್ರಾಮ ಸಂಪನ್ಮೂಲ ವ್ಯಕ್ತಿಯಾಗಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ‌  ಪುಷ್ಪರಾಜ್‌  ಅವರು ಉಪಸ್ಥಿತರಿದ್ದರು.
 ಸಂಪನ್ಮೂಲ ವ್ಯಕ್ತಿಗಳು ಆಟಿ ತಿಂಗಳ ಮಹತ್ವವನ್ನು  ತಿಳಿಸಿದರು.

ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಆಯೋಜಿಸಲಾದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಂಚಿ ಗ್ರಾಮದ ಹಿರಿಯ ಪ್ರಸೂತಿ ತಜ್ಞೆ  ಎಂದು ಪ್ರಸಿದ್ಧಿ ಪಡೆದ ಬೀಪಾತುಮ್ಮ ಅವರನ್ನು ಸನ್ಮಾನಿಸಲಾಯಿತು. 

Leave a comment

Your email address will not be published. Required fields are marked *

eMedia Kannada  @2025. All Rights Reserved.