• Home  
  • ಕಾಪು: ಕೊಪ್ಪಲಂಗಡಿಯಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ, ಮೂವರಿಗೆ ಗಾಯ (Kaup: Scooty hits pedestrian in Koppalangady, three injured)
- ಅಪಘಾತ

ಕಾಪು: ಕೊಪ್ಪಲಂಗಡಿಯಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ, ಮೂವರಿಗೆ ಗಾಯ (Kaup: Scooty hits pedestrian in Koppalangady, three injured)

Share: ಕಾಪು: ಕೊಪ್ಪಲಂಗಡಿಯಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ, ಮೂವರಿಗೆ ಗಾಯ ಬಾಗಲಕೋಟೆಯ ಮಂಜುನಾಥ್ ಮತ್ತು ಮುಝಮ್ಮಿಲ್ ತೀವ್ರ ಗಾಯಗೊಂಡವರು (Kaup) ಕಾಪು: ಕೊಪ್ಪಲಂಗಡಿ ರಾಹೆ ೬೬ ರಲ್ಲಿ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಸ್ಕೂಟಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ, ಮತ್ತು ಸ್ಕೂಟಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.  ಪಾದಾಚಾರಿಯನ್ನು ಬಾಗಲಕೋಟೆ ಮೂಲದ  ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರ ಕಾಲಿಗೆ ತೀವ್ರ ಗಾಯವಾಗಿದೆ.  ಸ್ಕೂಟಿ ಸವಾರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆತನ ತಲೆಗೆ ತೀವ್ರ ಗಾಯವಾಗಿದ್ದು, […]

(Kaup) ಕಾಪು: ಕೊಪ್ಪಲಂಗಡಿ ರಾಹೆ ೬೬ ರಲ್ಲಿ ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಸ್ಕೂಟಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ, ಮತ್ತು ಸ್ಕೂಟಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

 ಪಾದಾಚಾರಿಯನ್ನು ಬಾಗಲಕೋಟೆ ಮೂಲದ  ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರ ಕಾಲಿಗೆ ತೀವ್ರ ಗಾಯವಾಗಿದೆ.

 ಸ್ಕೂಟಿ ಸವಾರನನ್ನು ಮುಝಮ್ಮಿಲ್ ಎಂದು ಗುರುತಿಸಲಾಗಿದ್ದು, ಆತನ ತಲೆಗೆ ತೀವ್ರ ಗಾಯವಾಗಿದ್ದು, ತುರ್ತುನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಸಹ ಸವಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.

 ಮೂವರು ಗಾಯಾಳುಗಳನ್ನು ಮೂಳೂರಿನ ಆಪತ್ಭಾಂಧವ ಎಸ್‌ಡಿಪಿಐ ಆ್ಯಂಬುಲೆನ್ಸ್ ಮೂಲಕ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ್ಯಂಬುಲೆನ್ಸ್ ಚಾಲಕ ಹಮೀದ್‌ ಮತ್ತು ಉಚ್ಚಿಲದ ಜಲಾಲುದ್ದೀನ್‌ ಸಹಕರಿಸಿದರು.

ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.