• Home  
  •  ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ (Kannadiga Journalists Association Maharashtra elects new office bearers)
- ಸಂಘ, ಸಂಸ್ಥೆಗಳು

 ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ (Kannadiga Journalists Association Maharashtra elects new office bearers)

Share: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಡಾ. ಜಿ.ಪಿ ಕುಸುಮಾ, ಕಾರ್ಯದರ್ಶಿಯಾಗಿ ಸವಿತಾ ಎಸ್.ಶೆಟ್ಟಿ ಆಯ್ಕೆ   (Mumbai) ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ 2025-28 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಘಾಟ್‌ಕೋಪರ್‌ ಪಶ್ಚಿಮದಲ್ಲಿನ ಮನಿಫೋಲ್ಡ್ ಸಮಾಲೋಚನಾ ಸಭಾಗೃಹದಲ್ಲಿ ನಡೆದಿದ್ದು, ಹಿರಿಯ ಪತ್ರಕರ್ತೆ, ಮೊಗವೀರ ಮಾಸಿಕದ ಮಾಜಿ ಸಂಪಾದಕಿ, ಸಾಫಲ್ಯ ತ್ರೈಮಾಸಿಕದ ಸಂಪಾದಕಿ ಡಾ. ಜಿ.ಪಿ ಕುಸುಮಾ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಗೊಂಡರು.  ವಿಶ್ವನಾಥ್ ಪೂಜಾರಿ […]

(Mumbai) ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ 2025-28 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಘಾಟ್‌ಕೋಪರ್‌ ಪಶ್ಚಿಮದಲ್ಲಿನ ಮನಿಫೋಲ್ಡ್ ಸಮಾಲೋಚನಾ ಸಭಾಗೃಹದಲ್ಲಿ ನಡೆದಿದ್ದು, ಹಿರಿಯ ಪತ್ರಕರ್ತೆ, ಮೊಗವೀರ ಮಾಸಿಕದ ಮಾಜಿ ಸಂಪಾದಕಿ, ಸಾಫಲ್ಯ ತ್ರೈಮಾಸಿಕದ ಸಂಪಾದಕಿ ಡಾ. ಜಿ.ಪಿ ಕುಸುಮಾ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಗೊಂಡರು.

 ವಿಶ್ವನಾಥ್ ಪೂಜಾರಿ ನಿಡ್ಡೋಡಿ (ಉಪಾಧ್ಯಕ್ಷ), ಶ್ರೀಮತಿ ಸವಿತಾ ಸುರೇಶ್ ಶೆಟ್ಟಿ ಗೌರವ ಪ್ರಧಾನ ಕಾರ್ಯದರ್ಶಿ, ಸುರೇಶ್ ಎನ್.ಮೂಲ್ಯ ಗೌರವ ಕೋಶಾಧಿಕಾರಿ, ಶ್ಯಾಮ್ ಎಂ. ಹಂಧೆ ಜೊತೆ ಕಾರ್ಯದರ್ಶಿ, ಡಾ. ದುರ್ಗಪ್ಪ ವೈ. ಕೋಟ್ಯಾನ್‌ ಕೋಟಿಯವರ್ ಜೊತೆ ಕೋಶಾಧಿಕಾರಿಯಾಗಿ   ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.

 ಸಂಘದ ಸಲಹಾ ಸಮಿತಿ ಸದಸ್ಯ, ನಿಯೋಜಿತ ಚುನಾವಣಾಧಿಕಾರಿ ಸಿಎ. ಜಗದೀಶ್ ಬಿ.ಶೆಟ್ಟಿ ಅವರು  ಪತ್ರಕರ್ತರ ಸಂಘದ ಆಯ್ಕೆ ಪ್ರಕ್ರಿಯೆ ನಡೆಸಿದ್ದು ಕಾರ್ಯಕಾರಿ ಸಮಿತಿಗೆ ೧೬ ಸದಸ್ಯರ ಆಯ್ಕೆ ಆಗಿದ್ದಾರೆ.

 ನೂತನ ಸದಸ್ಯರಲ್ಲಿ ಡಾ. ಶಿವ ಮೂಡಿಗೆರೆ, ರೋನ್ಸ್ ಬಂಟ್ವಾಳ್, ಸಾ. ದಯಾ (ದಯಾನಂದ್), ರಂಗ ಎಸ್.ಪೂಜಾರಿ, ಗೋಪಾಲ ಪೂಜಾರಿ ತ್ರಾಸಿ, ಸದರಾಮ ಎನ್. ಶೆಟ್ಟಿ, ಜಯರಾಮ ಜಿ. ನಾಯಕ್, ಹರೀಶ್ ಪೂಜಾರಿ ಕೊಕ್ಕರ್ಣೆ, ಶ್ರೀಮತಿ ಲತಾ ಶೆಟ್ಟಿ ಮುದ್ದುಮನೆ, ವಿಶ್ವನಾಥ ಹೆಗಡೆ ದೊಡ್ಮನೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮತ್ತು ಚಂದ್ರಶೇಖರ್ ಆರ್. ಬೆಳ್ಚಡ, ಶ್ರೀಮತಿ ಸುಸನ್ಹಾ ಎಲ್. ಕುವೆಲ್ಲೋ, ಲಕ್ಷ್ಮಣ ಪೂಜಾರಿ ಕೊಡೇರಿ (ಸಮಿತಿ ಸಹ ಸದಸ್ಯರುಗಳಾಗಿ) ಆಯ್ಕೆಯಾಗಿರುವರು.

ಸಲಹಾ ಸಮಿತಿ ಸದಸ್ಯರಾಗಿ ಡಾ. ಸುನೀತಾ ಎಂ.ಶೆಟ್ಟಿ, ನ್ಯಾ. ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಸಿಎ. ಐ.ಆರ್ ಶೆಟ್ಟಿ, ನ್ಯಾ. ಬಿ. ಮೋಹಿದ್ಧೀನ್ ಮುಂಡ್ಕೂರು, ಡಾ. ಆರ್.ಕೆ. ಶೆಟ್ಟಿ, ಡಾ. ಸುರೇಶ್ ಎಸ್. ರಾವ್ ಕಟೀಲು, ಕಡಂದಲೆ ಸುರೇಶ್ ಎಸ್. ಭಂಡಾರಿ, ಸುರೇಂದ್ರ ಎ. ಪೂಜಾರಿ, ಸಿಎ. ಜಗದೀಶ್ ಬಿ .ಶೆಟ್ಟಿ, ಲಲಕ್ಷ್ಮಣ ಸಿ. ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ಶಶಿಧರ್ ಬಿ. ಶೆಟ್ಟಿ ಬರೋಡ, ಡಾ. ಸದಾನಂದ ಆರ್. ಶೆಟ್ಟಿ, ಡಾ. ಸತ್ಯಪ್ರಕಾಶ್ ಶೆಟ್ಟಿ ಹಾಗೂ ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ಡಾ. ಶಿವರಾಮ ಕೆ. ಭಂಡಾರಿ, ಸದಾನಂದ ಡಿ. ನಾಯಕ್, ಗುರುದತ್ತ್ ಎಸ್. ಪೂಂಜ, ಸುಧಾಕರ್ ಉಚ್ಚಿಲ್, ನ್ಯಾ. ಅಮಿತಾ ಎಸ್. ಭಾಗ್ವತ್, ಶಿವರಾಜ್ ಜಿ. ಶೆಟ್ಟಿ, ಮಾಣಿಕ್‌ರಾವ್ ಎನ್. ಹಾಗರ್ಗಿ, ಜೋನ್ ವಿಲ್ಸವ್ ಲೋಬೊ ಇವರನ್ನು ಸಭೆಯು ಆಯ್ಕೆ ಗೊಳಿಸಿತು.

 ಸಂಘವು ಹದಿನೆಂಟರ ಸೇವೆಯಲ್ಲಿ ಸಾಗುತ್ತಿದ್ದು ಏಳನೇ ಬಾರಿಯ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ಇದಾಗಿದೆ.

 ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವನೆ ಗೈದು,  ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಅಭಿವಂದಿಸಿದರು.

 ಸಾ. ದಯಾ (ದಯಾನಂದ್) ಸಭಾ ಕಲಾಪ ನಡೆಸಿದರು. ಸವಿತಾ ಸುರೇಶ್ ಶೆಟ್ಟಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.