• Home  
  •   ರಿತನ್ಯ ಎಸ್. ಆಚಾರ್ಯಗೆ “ಸೂಪರ್ ಟ್ಯಾಲೆಂಟೆಡ್ ಕಿಡ್“ ಪುರಸ್ಕಾರ (Rithanya S. Acharya receives “Super Talented Kid” award)
- ಸನ್ಮಾನ, ಅಭಿನಂದನೆ

  ರಿತನ್ಯ ಎಸ್. ಆಚಾರ್ಯಗೆ “ಸೂಪರ್ ಟ್ಯಾಲೆಂಟೆಡ್ ಕಿಡ್“ ಪುರಸ್ಕಾರ (Rithanya S. Acharya receives “Super Talented Kid” award)

Share:   ರಿತನ್ಯ ಎಸ್. ಆಚಾರ್ಯಗೆ “ಸೂಪರ್ ಟ್ಯಾಲೆಂಟೆಡ್ ಕಿಡ್“ ಪುರಸ್ಕಾರ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪಡೆದ ಬಾಲೆ (Udupi) ಉಡುಪಿ : ಉಡುಪಿ ಜಿಲ್ಲೆಯ ಕಮಲಶಿಲೆ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಗಳ ಪುತ್ರಿ ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್”ಎಂಬ ಬಿರುದನ್ನು ಪಡೆದು “ಒನ್ ಇನ್ ಎ ಮಿಲಿಯನ್”ಗೌರವವನ್ನು ಪಡೆದಿದ್ದಾಳೆ.   ರಿತನ್ಯ 21 […]

(Udupi) ಉಡುಪಿ : ಉಡುಪಿ ಜಿಲ್ಲೆಯ ಕಮಲಶಿಲೆ ನಿವಾಸಿ ಸುಧಾಕರ ಆಚಾರ್ಯ ಹಾಗೂ ಸುಚೇತಾ ದಂಪತಿಗಳ ಪುತ್ರಿ ರಿತನ್ಯ ಎಸ್. ಆಚಾರ್ಯ (1 ವರ್ಷ 4 ತಿಂಗಳು) ತನ್ನ ಅಪರೂಪದ ಪ್ರತಿಭೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “ಸೂಪರ್ ಟ್ಯಾಲೆಂಟೆಡ್ ಕಿಡ್”ಎಂಬ ಬಿರುದನ್ನು ಪಡೆದು “ಒನ್ ಇನ್ ಎ ಮಿಲಿಯನ್”ಗೌರವವನ್ನು ಪಡೆದಿದ್ದಾಳೆ.

  ರಿತನ್ಯ 21 ಪಕ್ಷಿಗಳು, 28 ಪ್ರಾಣಿಗಳು, 15 ದೇಹಭಾಗಗಳು, 20 ಹಣ್ಣುಗಳು, 10 ಜಲಚರ ಪ್ರಾಣಿಗಳು, 6 ಕೀಟಗಳು, 23 ತರಕಾರಿಗಳು, 65 ಕ್ಕೂ ಹೆಚ್ಚು ಗೃಹೋಪಯೋಗಿ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ತೋರಿದಷ್ಟೇ ಅಲ್ಲದೆ, 30 ವಸ್ತುಗಳನ್ನು ಹುಡುಕಿ ತರುವುದು, ಹೇಳಿದ ಆಜ್ಞೆಗಳನ್ನು ಪಾಲಿಸಿ ಮಾಡುವುದು, 8 ಕ್ಕೂ ಹೆಚ್ಚು ಸಾಕುಪ್ರಾಣಿಗಳ ಧ್ವನಿಯನ್ನು ಅನುಕರಿಸುವುದು ಮತ್ತು ಕೇವಲ 2 ನಿಮಿಷ 40 ಸೆಕೆಂಡ್‌ಗಳಲ್ಲಿ 35 ಮೆಟ್ಟಿಲುಗಳನ್ನು ಸಹಾಯವಿಲ್ಲದೆ ಏರಿರುವ ಮೂಲಕ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.

  ಪೋಷಕರು ಪ್ರೋತ್ಸಾಹ ನೀಡಿದ್ದು, ಈ ಸಾಧನೆಗೆ ಸಮಾಜದಲ್ಲಿ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.