• Home  
  • ಬೇಲೂರು ಮಠದ ಸ್ವಾಮೀಜಿಗಳ ಸಹಿತ ಸಂತರು ರಾಮಕೃಷ್ಣ ಆಶ್ರಮ, ಪೊಳಲಿ ಕ್ಷೇತ್ರಕ್ಕೆ ಭೇಟಿ (Saints along with Swamiji of Belur Math visit Ramakrishna Ashram, Polali Kshetra)
- ಧಾರ್ಮಿಕ

ಬೇಲೂರು ಮಠದ ಸ್ವಾಮೀಜಿಗಳ ಸಹಿತ ಸಂತರು ರಾಮಕೃಷ್ಣ ಆಶ್ರಮ, ಪೊಳಲಿ ಕ್ಷೇತ್ರಕ್ಕೆ ಭೇಟಿ (Saints along with Swamiji of Belur Math visit Ramakrishna Ashram, Polali Kshetra)

Share: ಬೇಲೂರು ಮಠದ ಸ್ವಾಮೀಜಿಗಳ ಸಹಿತ ಸಂತರು ರಾಮಕೃಷ್ಣ ಆಶ್ರಮ, ಪೊಳಲಿ ಕ್ಷೇತ್ರಕ್ಕೆ ಭೇಟಿ  (Bantwala) ಬಂಟ್ವಾಳ: ಪೊಳಲಿ ರಾಮಕೃಷ್ಣ ತಪೋವನಕ್ಕೆ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್, ಬೇಲೂರು ಮಠ ಇದರ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಭೇಟಿ ನೀಡಿದರು.    ಇವರೊಂದಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ರಾಮಕೃಷ್ಣ ಮಠ ಅಲ್ಸೂರು ಇದರ ಅಧ್ಯಕ್ಷರಾದ  ಸ್ವಾಮಿ ಬೋಧಸ್ವರೂಪನಂದಜಿ ಮಹರಾಜ್ ಮತ್ತು […]

   ಇವರೊಂದಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ರಾಮಕೃಷ್ಣ ಮಠ ಅಲ್ಸೂರು ಇದರ ಅಧ್ಯಕ್ಷರಾದ  ಸ್ವಾಮಿ ಬೋಧಸ್ವರೂಪನಂದಜಿ ಮಹರಾಜ್ ಮತ್ತು ರಾಮಕೃಷ್ಣ ಮಠದ ಇತರ ಸ್ವಾಮೀಜಿಗಳನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಸ್ವಾಗತಿಸಿದರು.  

    ಈ ಸಂದರ್ಭ ಆಶೀರ್ವಚನಗೈದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ಪೊಳಲಿ ರಾಮಕೃಷ್ಣ ಮಠದ ಈ ಭೇಟಿ, ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ  ವಿಶೇಷ ಘಳಿಗೆಯಾಗಿರುತ್ತದೆ ಎಂದರು.

  ಸ್ವಾಮೀಜಿಯವರು ಇದೇ ವೇಳೆ  ಭಕ್ತಾಧಿಗಳನ್ನು ಹಾಗೂ ಆಶ್ರಮದ ವಿದ್ಯಾರ್ಥಿಗಳನ್ನು ಆರ್ಶೀವದಿಸಿದರು.

   ಪೊಳಲಿ ರಾಮಕೃಷ್ಣರ ತಪೋವನಕ್ಕೆ  ಸಂತರ ಭೇಟಿ ಸಂತಸವನ್ನು ತಂದಿದೆ ಎಂದು ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.

   ಬಳಿಕ  ಎಲ್ಲಾ ಸಂತರು ಐತಿಹಾಸಿಕ ಹಿನ್ನಲೆಯ  ಪೊಳಲಿ ಶ್ರೀ ರಾಜರಾಜೇಶ್ವರಿಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 

Leave a comment

Your email address will not be published. Required fields are marked *

eMedia Kannada  @2025. All Rights Reserved.