ಬಸ್ಸು ಚಾಲಕ, ನಿರ್ವಾಹಕ, ಟೈಮ್ ಕೀಪರ್ ನಡುವೆ ವಾಗ್ವಾದ ; ಮೂವರು ಪೋಲಿಸ್ ವಶ
ಕಾಪು ಪೇಟೆ ಬಸ್ಸು ನಿಲ್ದಾಣದಲ್ಲಿ ನಡೆದ ಘಟನೆ
(Kaup) ಕಾಪು : ಕಾಪು ಬಸ್ಸು ತಂಗುದಾಣದ ಬಳಿ ಬಸ್ ಅಡ್ಡ ಇಟ್ಟು ವಾಗ್ವಾದ ನಡೆಸಿದ ಚಾಲಕ, ನಿರ್ವಾಹಕ ಹಾಗೂ ಟೈಮ್ ಕೀಪರ್ ನ್ನು ಕಾಪು ಪೋಲಿಸರು ವಶಕ್ಕೆ ಪಡೆದ ಘಟನೆ ಕಾಪು ಪೇಟೆಯಲ್ಲಿರುವ ಕಾಪು-ಉಡುಪಿ ಬಸ್ಸು ನಿಲ್ದಾಣದ ಬಳಿ ಘಟಿಸಿದೆ.
ಕಾಪು ಠಾಣಾ ಎ.ಎಸ್.ಐ ಉಮೇಶ್ ನಾಯ್ಕ್ ರವರು ಕರ್ತವ್ಯದಲ್ಲಿರುವಾಗ ಕಾಪು ತಾಲೂಕು ಪಡು ಗ್ರಾಮದ ಕಾಪು ಪೇಟೆಯಲ್ಲಿರುವ ಕಾಪು-ಉಡುಪಿ ಬಸ್ಸು ನಿಲ್ದಾಣದ ಬಳಿ ಬಸ್ಸು ಚಾಲಕನು ತನ್ನ ಬಸ್ಸನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ಅದರ ನಿರ್ವಾಹಕ ಹಾಗೂ ಟೈಮ್ ಕೀಪರ್ ನಡುವೆ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಬೈದಾಡಿಕೊಂಡು ಜಗಳವಾಡುತ್ತಿದ್ದರು.
ಗಲಾಟೆ ಮಾಡಿದವರ ವಿಡಿಯೋ ರೆಕಾರ್ಡನ್ನು ಗಮನಿಸಿ ಬಸ್ಸಿನ ಚಾಲಕನಾದ ನಿಜಾಮುದ್ದೀನ್ ಹಾಗೂ ಬಸ್ಸಿನ ನಿರ್ವಾಹಕ ಶೇಖ್ ಅಹಮ್ಮದ್ ಹಾಗೂ ಟೈಮ್ ಕೀಪರ್ ಆದ ಚೇತನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿದವರ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

