10 ವರ್ಷಗಳಿಂದ ಮನೋರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯದ ತಾಯಿ, ಮಕ್ಕಳ ರಕ್ಷಣೆ
ಮಂಜೇಶ್ವರ ದೈಗೊಳಿ ಶ್ರೀ ಸಾಯಿ ನಿಕೇತನ ಸೇವಾ ಆಶ್ರಮಕ್ಕೆ ದಾಖಲು
(Udupi): ಉಡುಪಿ : ಮನೋರೋಗಿ ಮಹಿಳೆ ತನ್ನ ಇಬ್ಬರು ಮಂದಮತಿಯರಾದ ಹೆಣ್ಣು ಮಕ್ಕಳೊಂದಿಗೆ ದೇವಸ್ಥಾನ, ಪೊಲೀಸ್ ಠಾಣೆ, ನ್ಯಾಯಾಲಯ, ಸಿಕ್ಕ ಸಿಕ್ಕಲ್ಲಿ ತಿರುಗಾಡುತ್ತಾ ಸಾರ್ವಜನಿಕರ ವಿರುದ್ಧ ಸುಳ್ಳು ದೂರು ದಾಖಲಿಸುವುದು. ನೆರೆಮನೆಯವರಿಗೆ ನಿರಂತರ ಅವಾಚ್ಯ ಶಬ್ದ ಬಳಸಿ ಬಯ್ಯುವುದರ ಜೊತೆಗೆ ಅನಾಗರಿಕ ಬದುಕು ಸಾಗಿಸುತ್ತಿದ್ದು, ವಿಶು ಶೆಟ್ಟಿ ಅಂಬಲಪಾಡಿಯವರು ಉಡುಪಿಯ ಸಖಿ ಸೆಂಟರಿನ ಸಿಬ್ಬಂದಿಗಳ ಸಹಾಯದಿಂದ ರಕ್ಷಿಸಿ ಮಂಜೇಶ್ವರ ದೈಗೋಳಿಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಉಡುಪಿ ಕಟಪಾಡಿ ಅಚ್ಚಡದ ನಿವಾಸಿ ಬ್ರಾಹ್ಮಣ ಮಹಿಳೆ ಶ್ಯಾಮಲ ಪುರಾಣಿಕ್ (65) ಹಾಗೂ ಮಕ್ಕಳಾದ ನಾಗಶ್ರೀ(33) ಜಯಶ್ರೀ(36) ರಕ್ಷಿಸಲ್ಪಟ್ಟವರು.
ಹೆಣ್ಣು ಮಕ್ಕಳಿಬ್ಬರು ಮಂದಮತಿಯವರಾದರೆ, ತಾಯಿ ಮನೋರೋಗಿ. ಕಳೆದ 10 ವರ್ಷಗಳಿಂದ ಈ ತಾಯಿ, ಮಕ್ಕಳು ನಾಗರಿಕ ಸಮಾಜದ ಮದ್ಯೆ ಅನಾಗರಿಕ ಬದುಕು ಸಾಗಿಸುತ್ತಿದ್ದಾರೆ.
ಮನೋರೋಗಿ ಮಹಿಳೆ ನೆರೆಹೊರೆಯವರಿಗೆ ಬಯ್ಯುವುದು, ದೂರು ದಾಖಲಿಸುವುದು, ಊರು ತಿರುಗುವುದು ನಿತ್ಯ ಕಸುಬು. ಬೇಸತ್ತ ಬಹಳಷ್ಟು ಜನರು ಸಹಕರಿಸುವಂತೆ ವಿವಿಧ ಜನ ಪ್ರತಿನಿದಿನಗಳಿಗೆ ಇಲಾಖೆಗೆ ಮೊರೆ ಇಟ್ಟರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಖಿ ಒನ್ ಸ್ಟಾಪ್ ಸೆಂಟರಿನ ಮುಖ್ಯಸ್ಥರಿಂದ ಮಾಹಿತಿ ಪಡೆದ ವಿಶು ಶೆಟ್ಟಿಯವರು, ಕೂಡಲೇ ಸ್ಪಂದಿಸಿ ದೈಗೋಳಿಯ ಆಶ್ರಮದ ಮುಖ್ಯಸ್ಥರಾದ ಡಾ. ಉದಯ ಕುಮಾರ್ ದಂಪತಿಯ ಅನುಮತಿ ಪಡೆದು ಖಾಸಗಿ ವಾಹನದ ಮೂಲಕ ಮಂಜೇಶ್ವರಕ್ಕೆ ದಾಖಲಿಸುವ ಮುಖಾಂತರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಕಾರ್ಯಚರಣೆಯಲ್ಲಿ ಮಹಿಳಾ ಪೋಲಿಸ್ ಠಾಣೆಯ HC ಮಲ್ಲಿಕಾ ಸಹಕರಿಸಿದರು.
ಈ ಕುಟುಂಬ ವಾಸಿಸುವ ಮನೆ.. ಕಸದ ರಾಶಿ, ಬಟ್ಟೆಗಳ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಾತ್ರೆಗಳು.
ಕಳೆದ 10 ವರ್ಷಗಳಲ್ಲಿ ಜನ ಪ್ರತಿನಿಧಿ ಗಳಾಗಲಿ, ಸಮಾಜದ ಮುಖ್ಯಸ್ಥರಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸದೇ ಇರುವುದು ದುರಂತ. ಈ ಕುಟುಂಬಕ್ಕೆ ನಾಗರಿಕ ಸಮಾಜದ ಕೊಂಡಿ ಕಳಚಿರುವುದೇ ಈ ರೀತಿಯ ಘೋರ ಪರಿಸ್ಥಿತಿಗೆ ಕಾರಣ.
ಸರಿಯಾದ ಆರೈಕೆ ಹಾಗೂ ಚಿಕಿತ್ಸೆಯಿಲ್ಲದೆ ಈ ಕುಟುಂಬ ದುರಂತಕ್ಕಿಡಾಗಿದೆ. ಇಂತಹ ಪರಿಸ್ಥಿತಿಯ ಮಹಿಳೆಯನ್ನು ರಕ್ಷಿಸಬೇಕಾದವರು ಕಂಡೂ ಕಾಣದ ಹಾಗೆ ಇರುವುದು ಕರ್ತವ್ಯ ಲೋಪ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಸ್ಪಂದಿಸಿದ ಸಖಿ ಒನ್ ಸೆಂಟರಿನ ಸಿಬ್ಬಂದಿಗಳು ಶ್ಲಾಘನೀಯರು

