• Home  
  • ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ 12 ಸಾವಿರಕ್ಕೂ ಅಧಿಕ ಭಕ್ತರಿಗೆ ಸೀರೆ ವಿತರಣೆ (Sarees distributed to over 12,000 devotees at Polali Sri Rajarajeshwari Temple)
- ಧಾರ್ಮಿಕ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ 12 ಸಾವಿರಕ್ಕೂ ಅಧಿಕ ಭಕ್ತರಿಗೆ ಸೀರೆ ವಿತರಣೆ (Sarees distributed to over 12,000 devotees at Polali Sri Rajarajeshwari Temple)

Share: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ 12 ಸಾವಿರಕ್ಕೂ ಅಧಿಕ ಭಕ್ತರಿಗೆ ಸೀರೆ ವಿತರಣೆ  18 ವರ್ಷ ಮೇಲ್ಪಟ್ಟ ಯುವತಿಯರು, ಸ್ತ್ರೀಯರಿಗೆ ಹರಕೆ ರೂಪದಲ್ಲಿ ಬಂದ ಸೀರೆ ವಿತರಣೆ (Bantwala) ಬಂಟ್ವಾಳ: ನವರಾತ್ರಿಯ ಲಲಿತಪಂಚಮಿ ಸಂದರ್ಭದಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೇವಿಗೆ ಹರಕೆ ರೂಪದಲ್ಲಿ ಬಂದ ಸುಮಾರು 12  ಸಾವಿರಕ್ಕೂ ಅಧಿಕ ಸೀರೆಗಳನ್ನು ಶುಕ್ರವಾರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.      ಶುಕ್ರವಾರ ರಾತ್ರಿ ನವರಾತ್ರಿ ಪೂಜೆಯ ಬಳಿಕ‌ 18 ವರ್ಷ ಮೇಲ್ಪಟ್ಟ […]

(Bantwala) ಬಂಟ್ವಾಳ: ನವರಾತ್ರಿಯ ಲಲಿತಪಂಚಮಿ ಸಂದರ್ಭದಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ದೇವಿಗೆ ಹರಕೆ ರೂಪದಲ್ಲಿ ಬಂದ ಸುಮಾರು 12  ಸಾವಿರಕ್ಕೂ ಅಧಿಕ ಸೀರೆಗಳನ್ನು ಶುಕ್ರವಾರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

     ಶುಕ್ರವಾರ ರಾತ್ರಿ ನವರಾತ್ರಿ ಪೂಜೆಯ ಬಳಿಕ‌ 18 ವರ್ಷ ಮೇಲ್ಪಟ್ಟ ಯುವತಿಯರು, ಸ್ತ್ರೀಯರಿಗೆ ದೇವಿಗೆ ಹರಕೆ ರೂಪದಲ್ಲಿ ಸಂದಾಯವಾಗಿದ್ದ ಸೀರೆಯನ್ನು ಪ್ರಸಾದ ರೂಪದಲ್ಲಿ ವಿತರಿಸುವ ಕಾರ್ಯ ನಡೆಯಿತು.

  ರಾಜರಾಜೇಶ್ವರಿ ದೇವಿಗೆ ಸೀರೆಯ ಹರಕೆ ನೆನೆದರೆ ಇಷ್ಟಾರ್ಥಗಳು ಈಡೇರುತ್ತವೆ. ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಇಷ್ಟಾರ್ಥ ಈಡೇರಿದ ಬಳಿಕ ಭಕ್ತರು ಸೀರೆಯನ್ನು ಹರಕೆ ರೂಪದಲ್ಲಿ ಸಮರ್ಪಿಸುವುದು ಹಲವಾರು ದಶಕಗಳ ಸಂಪ್ರದಾಯ. ಹೀಗೆ ಪ್ರತಿ ವರ್ಷವೂ ಸಹಸ್ರಾರು ಸಂಖ್ಯೆಯ ಸೀರೆಗಳು ಅರ್ಪಣೆಯಾಗುತ್ತಿದ್ದವು. ಆದರೆ, ಒಂದು ಕಾಲದಲ್ಲಿ ಪೊಳಲಿಗೆ ಅರ್ಪಣೆಯಾದ ಸೀರೆಗಳನ್ನು ಉಡುವಂತಿಲ್ಲ ಎಂಬ ನಂಬಿಕೆ ಇತ್ತು. ಕ್ಷೇತ್ರದ ಬ್ರಹ್ಮಕಲಶದ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಕಳೆದ 4 ವರ್ಷಗಳಿಂದ ಲಲಿತಾ ಪಂಚಮಿಯ ದಿನ ಹರಕೆಯ ಸೀರೆಗಳನ್ನು ವಿತರಿಸಲಾಗುತ್ತಿದೆ.

    ದೇವಳದ ಪ್ರ.ಅರ್ಚಕರಾದ ಮಾಧವ ಭಟ್, ಕೆ.ರಾಮ್ ಭಟ್, ನಾರಾಯಣಭಟ್, ಪರಮೇಶ್ವರ ಭಟ್, ಅನಂತಪದ್ಮನಾಭ ಭಟ್, ದೇವಳದ ಆಡಳಿತ ಮೊಕ್ತೇಸರ, ಡಾ. ಮಂಜಯ್ಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸ್ಥಳೀಯ ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ, ಅಮ್ಮುಂಜೆ ಗುತ್ತು ಶಿವಪ್ರಸಾದ್ ಶೆಟ್ಟಿ, ಕೃಷ್ಣ ಕುಮಾರ್ ಪೂಂಜಾ ಫರಂಗಿಪೇಟೆ, ಚೇರ ರಮೇಶ್ ರಾವ್, ಸುಬ್ರಾಯ ಕಾರಂತ, ಅಮ್ಮುಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಮೊಗರು ಗುತ್ತಿನವರು, ಸಾವಿರ ಸೀಮೆಯ ಭಕ್ತಾಧಿಗಳು ಈ ಸಂದರ್ಭ ಉಪಸ್ಥಿತರಿದ್ದು, ಸೀರೆ ವಿತರಣೆಯಲ್ಲಿ ಸಹಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.