• Home  
  •   ರವಿ ಕಟಪಾಡಿಯಿಂದ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ 2 ಲಕ್ಷ ರೂ ಸಹಕಾರ (Ravi Katapady donates Rs 2 lakh for team member’s emergency medical treatment)
- help

  ರವಿ ಕಟಪಾಡಿಯಿಂದ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ 2 ಲಕ್ಷ ರೂ ಸಹಕಾರ (Ravi Katapady donates Rs 2 lakh for team member’s emergency medical treatment)

Share:   ರವಿ ಕಟಪಾಡಿಯಿಂದ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ 2 ಲಕ್ಷ ರೂ ಸಹಕಾರ   ತನಗೆ ಬಂದ ಸನ್ಮಾನ, ಇನ್ನಿತರ ಹಣದಿಂದ ಸಹಕಾರ ಕಟಪಾಡಿ : ರವಿ ಕಟಪಾಡಿ ಅವರಿಂದ ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ ಕಿನ್ನಿಮೂಲ್ಕಿ ಕನ್ನರ್ಪಾಡಿಯಲ್ಲಿ ತಾನು ಆರಾಧಿಸಿಕೊಂಡು ಬರುವ ಜೋಡು ಪಂಜುರ್ಲಿ ದೈವಸ್ಥಾನದಲ್ಲಿ 2 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.      ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ವಿಶೇಷ ರೀತಿಯ ಆಕರ್ಷಕ […]

ಕಟಪಾಡಿ : ರವಿ ಕಟಪಾಡಿ ಅವರಿಂದ ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸದಸ್ಯನ ವೈದ್ಯಕೀಯ ತುರ್ತು ಚಿಕಿತ್ಸೆಗೆ ಕಿನ್ನಿಮೂಲ್ಕಿ ಕನ್ನರ್ಪಾಡಿಯಲ್ಲಿ ತಾನು ಆರಾಧಿಸಿಕೊಂಡು ಬರುವ ಜೋಡು ಪಂಜುರ್ಲಿ ದೈವಸ್ಥಾನದಲ್ಲಿ 2 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.  

   ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ವಿಶೇಷ ರೀತಿಯ ಆಕರ್ಷಕ ವೇಷಧಾರಿಯಾಗಿ ಕಾಣಿಸಿಕೊಳ್ಳುವ ರವಿ ಕಟಪಾಡಿ ಅವರು ವೈದ್ಯರ ಸಲಹೆಯ ಮೇರೆಗೆ 2025ರ ಸಾಲಿನ ಅಷ್ಟಮಿ ವೇಷ ಧರಿಸಿರಲಿಲ್ಲ. ಕಳೆದ 14 ವರ್ಷಗಳಿಂದ ಅಷ್ಟಮಿಗೆ ವಿಭಿನ್ನ ಶೈಲಿಯ ವೇಷವನ್ನು ಧರಿಸಿ ಜನಾಕರ್ಷಣೆಯ ಕೇಂದ್ರವಾಗಿದ್ದ ರವಿ ಕಟಪಾಡಿ ಅವರು ಕಳೆದ 10 ವರ್ಷಗಳಿಂದ ವೇಷಧಾರಿಯಾಗಿ ಸಂಗ್ರಹಿಸಿದ ಮತ್ತು ಬಿಗ್‌ಬಿ  ನೇತ್ರತ್ವದ ಕೌನ್‌ ಬನೇಗಾ ಕರೋಡ್‌ ಪತಿ ಯಲ್ಲಿ ಗೆದ್ದ ಹಣವನ್ನೂ ಸೇರಿದಂತೆ 1 ಕೋಟಿ 70 ಲಕ್ಷ ರೂ. ಮೊತ್ತವನ್ನು 182 ಅನಾರೋಗ್ಯ ಪೀಡಿತ ಅಶಕ್ತ ಬಡಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿ ಆಶಾ ಕಿರಣವಾಗಿದ್ದರು.

ಸನ್ಮಾನ ಮತ್ತು ಸ್ವಂತ ಹಣ ತುರ್ತು ವೈದ್ಯಕೀಯ ಚಿಕಿತ್ಸೆಗೆ :

   ಈ ಬಾರಿ ಅಷ್ಟಮಿ ವೇಷ ಧರಿಸದಿದ್ದರೂ, ತನ್ನ ಸಾಧನೆಯನ್ನು ಗುರುತಿಸಿ ಪಡೆದಿರುವ ಸನ್ಮಾನದ ಸಂದರ್ಭ ಲಭಿಸಿದ ಗೌರವಧನದ ಹಣವನ್ನು ತನ್ನ ತಂಡದ ಯುವಕ ವಿದ್ಯಾರ್ಥಿ ಆದಿತ್ಯ ಕೋಟ್ಯಾನ್ ಕಟಪಾಡಿ ಅವರ ವೈದ್ಯಕೀಯ ಚಿಕಿತ್ಸೆಗೆ ನೀಡಿದ್ದಾರೆ. ಈ ಯುವಕ ಕಾರ್ಕಳ ಅತ್ತೂರು ಬಳಿ ಲಾರಿ- ಬೈಕ್ ರಸ್ತೆ ಅಪಘಾತಕ್ಕೊಳಗಾಗಿ ಮಣಿಪಾಲ ಕೆ.ಎಂಸಿ ಆಸ್ಪತ್ರೆಯಲ್ಲಿಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವಿ ಕಟಪಾಡಿ ಮಾತನಾಡಿ, ಅನಾರೋಗ್ಯ ಪೀಡಿತ ಅಶಕ್ತ ಬಡಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಅಷ್ಟಮಿ ವೇಷದಿಂದ ಸಂಗ್ರಹಿತ ಹಣವನ್ನು ನೀಡುತ್ತಾ ಬಂದಿರುತ್ತೇನೆ. ಆದರೆ ಈ ಬಾರಿ ವೇಷ ಹಾಕದಿದ್ದರೂ ಅನಿವಾರ್ಯವಾಗಿ ಮತ್ತು ರವಿ ಕಟಪಾಡಿ ತಂಡದ ಸದಸ್ಯರಾಗಿರುವ ಹಿನ್ನಲೆಯಲ್ಲಿ ಯುವಕ ಆದಿತ್ಯ ಕೋಟ್ಯಾನ್ ಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ನೀಡಲಾಗಿದೆ. ಯುವಕರು ಬೈಕ್ ನಲ್ಲಿ ಸಂಚರಿಸುವಾಗ ಬಹಳಷ್ಟು ಜಾಗರೂಕರಾಗಿರಿ. ನೀವು ಬೆಳೆದು ನಿಂತು ತಂದೆ ತಾಯಿಯನ್ನು ಆರೈಕೆ ಮಾಡ ಬೇಕಾಗಿದ್ದರೂ ಇದೀಗ ತಂದೆ – ತಾಯಿ ಬೆಳೆದು ನಿಂತ ಮಕ್ಕಳನ್ನು ಆರೈಕೆ ಮಾಡಬೇಕಾದ ಪರಿಸ್ಥಿತಿ ನೆಲೆಸಿದೆ ಎಂದೂ ರವಿ ಕಟಪಾಡಿ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.