• Home  
  • ಹೆಜಮಾಡಿ : ಅಕ್ರಮ ಮರಳುಗಾರಿಕೆ ಟೆಂಪೋವಶ (Hejamadi: Illegal sand mining rampant)
- Crime

ಹೆಜಮಾಡಿ : ಅಕ್ರಮ ಮರಳುಗಾರಿಕೆ ಟೆಂಪೋವಶ (Hejamadi: Illegal sand mining rampant)

Share: ಹೆಜಮಾಡಿ : ಅಕ್ರಮ ಮರಳುಗಾರಿಕೆ ಟೆಂಪೋವಶ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲು (Padubidri) ಪಡುಬಿದ್ರಿ : ಹೆಜಮಾಡಿ ಗ್ರಾಮದ ಕೊಕ್ರಾಣಿ ಎಂಬಲ್ಲಿ ಅಕ್ರಮವಾಗಿ ನದಿಯಿಂದ ಟೆಂಪೋಗೆ ಮರಳು ತುಂಬಿಸುತ್ತಿದ್ದ ವ್ಯಕ್ತಿ ಮತ್ತು ಟೆಂಪೋವನ್ನು ವಶಪಡಿಸಿಕೊಂಡ ಘಟನೆ ಬುಧವಾರ ಘಟಿಸಿದೆ.    ಪಡುಬಿದ್ರಿ ಪೋಲಿಸರಿಗೆ ಬಂದ ಗುಪ್ತ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ದಿವಾಕರ ಎಂಬಾತ ಮುಲ್ಕಿ ಕಡೆಯಿಂದ ಅವರಾಲು ಮಟ್ಟು ಕಡೆಗೆ ಹಾದು ಹೋಗಿರುವ ಕಾಂಕ್ರೀಟ್‌ ರಸ್ತೆಯ ಪಶ್ಚಿಮ ದಿಕ್ಕಿನ ಹೊಳೆಬದಿಯಲ್ಲಿ […]

(Padubidri) ಪಡುಬಿದ್ರಿ : ಹೆಜಮಾಡಿ ಗ್ರಾಮದ ಕೊಕ್ರಾಣಿ ಎಂಬಲ್ಲಿ ಅಕ್ರಮವಾಗಿ ನದಿಯಿಂದ ಟೆಂಪೋಗೆ ಮರಳು ತುಂಬಿಸುತ್ತಿದ್ದ ವ್ಯಕ್ತಿ ಮತ್ತು ಟೆಂಪೋವನ್ನು ವಶಪಡಿಸಿಕೊಂಡ ಘಟನೆ ಬುಧವಾರ ಘಟಿಸಿದೆ.

   ಪಡುಬಿದ್ರಿ ಪೋಲಿಸರಿಗೆ ಬಂದ ಗುಪ್ತ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ದಿವಾಕರ ಎಂಬಾತ ಮುಲ್ಕಿ ಕಡೆಯಿಂದ ಅವರಾಲು ಮಟ್ಟು ಕಡೆಗೆ ಹಾದು ಹೋಗಿರುವ ಕಾಂಕ್ರೀಟ್‌ ರಸ್ತೆಯ ಪಶ್ಚಿಮ ದಿಕ್ಕಿನ ಹೊಳೆಬದಿಯಲ್ಲಿ ಒಂದು ಟೆಂಪೋವನ್ನು ನಿಲ್ಲಿಸಿಕೊಂಡು ಹೊಳೆಯಿಂದ ಪ್ಲಾಸ್ಟಿಕ್‌ ಬುಟ್ಟಿಗೆ ಮರಳನ್ನು ತುಂಬಿಕೊಂಡು ಟೆಂಪೋಗೆ ತುಂಬಿಸುತ್ತಿದ್ದನು.

    ಯಾವುದೇ ಪರವಾನಿಗೆ ಇರದೆ, ಹಣ ಗಳಿಸುವ ಉದ್ದೇಶದಿಂದ ಶಾಂಭವಿ ನದಿಯಿಂದ ಮರಳನ್ನು ಕಳ್ಳತನ ಮಾಡಿ ಮುಲ್ಕಿ ಪರಿಸರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದನು.

  ಸುಮಾರು 2000 ರೂಪಾಯಿಯ ಅರ್ಧ ಯುನಿಟ್‌ನಷ್ಟು ಮರಳು ಟೆಂಪೋದಲ್ಲಿ ತುಂಬಿಸಲಾಗಿತ್ತು.

  ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.