• Home  
  • ಹೆಜಮಾಡಿ : ಅಟೋ ರಿಕ್ಷಾಗೆ ಗುದ್ದಿದ ಲಾರಿ, ಅಟೋ ಚಾಲಕ ಸಾವು (Hejamadi: Lorry hits auto-rickshaw, auto driver dies)
- Crime - ಅಪಘಾತ

ಹೆಜಮಾಡಿ : ಅಟೋ ರಿಕ್ಷಾಗೆ ಗುದ್ದಿದ ಲಾರಿ, ಅಟೋ ಚಾಲಕ ಸಾವು (Hejamadi: Lorry hits auto-rickshaw, auto driver dies)

Share: ಹೆಜಮಾಡಿ : ಅಟೋ ರಿಕ್ಷಾಗೆ ಗುದ್ದಿದ ಲಾರಿ, ಅಟೋ ಚಾಲಕ ಸಾವು ಅಟೋ ಚಾಲಕ ರಫೀಕ್ ಕನ್ನಂಗಾರ್ ಮೃತರು (Hejamadi) ಹೆಜಮಾಡಿ: ಗೂಡ್ಸ್‌ ಲಾರಿಯೊಂದು ಅಟೋ ರಿಕ್ಷಾಗೆ ಗುದ್ದಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಹೆಜಮಾಡಿ ಅರಫಾ ಹೊಟೇಲು ಎದುರು ರಾಹೆ 66ರಲ್ಲಿ ಗುರುವಾರ ರಾತ್ರಿ ಘಟಿಸಿದೆ.  ಮೃತ ಅಟೋ ರಿಕ್ಷಾ ಚಾಲಕನನ್ನು ರಫೀಕ್ ಕನ್ನಂಗಾರ್(52) ಎಂದು ಗುರುತಿಸಲಾಗಿದೆ. ಈತ ಮುಲ್ಕಿ ಕಾರ್ನಾಡಿನ ಅಟೋ ನಿಲ್ದಾಣದ ಸದಸ್ಯ ಎಂದು ತಿಳಿದು ಬಂದಿದೆ. ಮೈಸೂರಿನಿಂದ ಉಡುಪಿಗೆ […]

(Hejamadi) ಹೆಜಮಾಡಿ: ಗೂಡ್ಸ್‌ ಲಾರಿಯೊಂದು ಅಟೋ ರಿಕ್ಷಾಗೆ ಗುದ್ದಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಹೆಜಮಾಡಿ ಅರಫಾ ಹೊಟೇಲು ಎದುರು ರಾಹೆ 66ರಲ್ಲಿ ಗುರುವಾರ ರಾತ್ರಿ ಘಟಿಸಿದೆ.

 ಮೃತ ಅಟೋ ರಿಕ್ಷಾ ಚಾಲಕನನ್ನು ರಫೀಕ್ ಕನ್ನಂಗಾರ್(52) ಎಂದು ಗುರುತಿಸಲಾಗಿದೆ. ಈತ ಮುಲ್ಕಿ ಕಾರ್ನಾಡಿನ ಅಟೋ ನಿಲ್ದಾಣದ ಸದಸ್ಯ ಎಂದು ತಿಳಿದು ಬಂದಿದೆ.

ಮೈಸೂರಿನಿಂದ ಉಡುಪಿಗೆ ಶರಾಬು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

 ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.