• Home  
  • ದೀಪಾವಳಿ ಹಬ್ಬ ಸೌಹಾರ್ಧತೆಯ ಸಂಕೇತ : ಅನ್ವರ್ ಅಲಿ ಕಾಪು(Diwali festival is a symbol of harmony : Anwar Ali Kaup)
- fastival

ದೀಪಾವಳಿ ಹಬ್ಬ ಸೌಹಾರ್ಧತೆಯ ಸಂಕೇತ : ಅನ್ವರ್ ಅಲಿ ಕಾಪು(Diwali festival is a symbol of harmony : Anwar Ali Kaup)

Share: ದೀಪಾವಳಿ ಹಬ್ಬ ಸೌಹಾರ್ಧತೆಯ ಸಂಕೇತ : ಅನ್ವರ್ ಅಲಿ ಕಾಪು. ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸುವ ಒಂದು ಅಪೂರ್ವ ಅವಕಾಶ (Kaup) ಕಾಪು: ಭಾರತವು ಹಬ್ಬಗಳ ನಾಡು. ಇಲ್ಲಿ ಪ್ರತಿಯೊಂದು ಹಬ್ಬವು ಕೇವಲ ಸಂಪ್ರದಾಯ ಅಥವಾ ಆಚರಣೆಯಲ್ಲ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸುವ ಒಂದು ಅಪೂರ್ವ ಅವಕಾಶ.     ಬೆಳಕಿನ ಹಬ್ಬವೆಂದು ಪ್ರಸಿದ್ಧಿ ಪಡೆದ ದೀಪಾವಳಿ, ಕತ್ತಲನ್ನು ದೂರಮಾಡಿ ಬೆಳಕಿನ ವಿಜಯವನ್ನು ಸಾರುವುದರೊಂದಿಗೆ ಸೌಹಾರ್ಧತೆ, ಶಾಂತಿ ಮತ್ತು ಒಗ್ಗಟ್ಟಿನ  ಸಂಕೇತ ವಾಗಿದೆ.     ದೀಪಾವಳಿಯ ಪುರಾಣ ಕಥೆಗಳು […]

(Kaup) ಕಾಪು: ಭಾರತವು ಹಬ್ಬಗಳ ನಾಡು. ಇಲ್ಲಿ ಪ್ರತಿಯೊಂದು ಹಬ್ಬವು ಕೇವಲ ಸಂಪ್ರದಾಯ ಅಥವಾ ಆಚರಣೆಯಲ್ಲ. ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸುವ ಒಂದು ಅಪೂರ್ವ ಅವಕಾಶ.

    ಬೆಳಕಿನ ಹಬ್ಬವೆಂದು ಪ್ರಸಿದ್ಧಿ ಪಡೆದ ದೀಪಾವಳಿ, ಕತ್ತಲನ್ನು ದೂರಮಾಡಿ ಬೆಳಕಿನ ವಿಜಯವನ್ನು ಸಾರುವುದರೊಂದಿಗೆ ಸೌಹಾರ್ಧತೆ, ಶಾಂತಿ ಮತ್ತು ಒಗ್ಗಟ್ಟಿನ  ಸಂಕೇತ ವಾಗಿದೆ.

    ದೀಪಾವಳಿಯ ಪುರಾಣ ಕಥೆಗಳು ಅನೇಕ. ರಾಮಾಯಣದ ಪ್ರಕಾರ ಶ್ರೀರಾಮನು ಲಂಕೆಯಿಂದ ಹಿಂದಿರುಗಿದಾಗ ಪ್ರಜೆಗಳು ಆನಂದದಿಂದ ದೀಪ ಹಚ್ಚಿ ಸ್ವಾಗತ ಮಾಡಿದ್ದರು.  ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನವನ್ನೂ ದೀಪಾವಳಿ ಎಂದು ಆಚರಿಸಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಆರಾಧಿಸುವುದು ಈ ಹಬ್ಬದ ಪ್ರಮುಖ ಅಂಗ.

 ದೀಪ ಹಚ್ಚುವುದು ಕೇವಲ ಮನೆಯ ಅಲಂಕಾರಕ್ಕಲ್ಲ, ಅದು ಮನಸ್ಸಿನ ಕತ್ತಲನ್ನು ದೂರ ಮಾಡುವ ಸಂಕೇತಕ್ಕಾಗಿ. ಅಂಧಕಾರದಿಂದ ಬೆಳಕಿಗೆ, ದ್ವೇಷದಿಂದ ಪ್ರೀತಿಗೆ, ಭಯದಿಂದ ಧೈರ್ಯಕ್ಕೆ, ಸ್ವಾರ್ಥದಿಂದ ಪರೋಪಕಾರಕ್ಕೆ ಸಾಗುವ ದಾರಿಯೇ ದೀಪಾವಳಿಯ ಸಂದೇಶ.

   ಮನೆ, ಮನೆಗಳಲ್ಲಿ ಸ್ವಚ್ಛತೆ, ಅಲಂಕಾರ, ದೀಪ ಹಚ್ಚುವುದು ಇಷ್ಟು ಹೊರಗಿನ ಶುದ್ಧತೆ ಮಾತ್ರವಲ್ಲ, ಮನಸ್ಸಿನ ಸ್ವಚ್ಛತೆ ಮತ್ತು ಹೃದಯದ ಪಾವಿತ್ರ್ಯವನ್ನೂ ನೆನಪಿಗೆ ತರುತ್ತವೆ.

   ದೀಪಾವಳಿಯ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆಯವರು ಸೇರಿ ಸಂತೋಷ ಹಂಚಿ ಕೊಳ್ಳುತ್ತಾರೆ. ಸಿಹಿ ತಿಂಡ್ಡಿ ಹಂಚುವುದು, ಉಡುಗೊರೆ ವಿನಿಮಯ ಮಾಡಿಕೊಳ್ಳುವುದು, ಬಡವರಿಗೆ ಸಹಾಯ ಮಾಡುವುದು, ತಾನು ಮಾಡಿರುವ ಎಲ್ಲಾ ಸಾಲವನ್ನು ತೀರಿಸುವುದು. ಇವೆಲ್ಲವೂ ಸಮಾಜದಲ್ಲಿ ಸೌಹಾರ್ಧತೆಯ ಮತ್ತು ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ.

     ಇಂದಿನ ಕಾಲದಲ್ಲಿ ಜಾತಿ, ಧರ್ಮ, ಭಾಷೆ, ಆರ್ಥಿಕ ಅಸಮಾನತೆಗಳಿಂದ ಸಮಾಜದಲ್ಲಿ ವಿಭಜನೆ ಉ0ಟಾಗುತ್ತಿರುವುದು ನೋವು ತರುತ್ತದೆ. ಇಂತಹ ಸಂದರ್ಭದಲ್ಲಿ ದೀಪಾವಳಿ ಒಗ್ಗಟ್ಟಿನ ಪಾಠ ಕಲಿಸುತ್ತದೆ. ದೀಪ ಹಚ್ಚುವುದು ಅಂದರೆ ಕೇವಲ ಮನೆಯ ಒಳಗಿನ ಬೆಳಕಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಸಹಿಷ್ಣುತೆ, ಪ್ರೀತಿ, ಸಹಕಾರದ ಬೆಳಕನ್ನು ಹಚ್ಚುವುದು.

     ದೀಪಾವಳಿಯ ನಿಜವಾದ ಆಚರಣೆ ಪಟಾಕಿ ಸಿಡಿಸುವುದಲ್ಲ. ಸಡಗರದಲ್ಲಿ ಹಣ ವ್ಯಯಿಸುವುದಲ್ಲ. ಬದಲಿಗೆ ಬಡವರಿಗೆ ನೆರವು ನೀಡುವುದು. ಒಂಟಿಯಾಗಿದ್ದವರನ್ನು ನೆನಪಿಸುವುದು. ಅನಾಥರಿಗೆ ಪ್ರೀತಿ ತೋರಿಸುವುದು ಇದೇ ಹಬ್ಬದ ನಿಜವಾದ ಅರ್ಥ. ದೀಪಾವಳಿ ಜೀವನದ ತತ್ವವನ್ನು ನೆನಪಿಸುತ್ತದೆ.

    ಜೀವನದಲ್ಲಿ ಎಷ್ಟೇ ಕತ್ತಲು ಬಂದರೂ, ಒಂದು ದೀಪದ ಬೆಳಕು ಸಾಕು ಅದನ್ನು ದೂರ ಮಾಡಲು. ಆ ದೀಪವೇ ಜ್ಞಾನ, ಪ್ರೀತಿ ಮತ್ತು ಸೌಹಾರ್ಧತೆ. ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಾರುತ್ತದೆ.

   ಆದ್ದರಿಂದ, ದೀಪಾವಳಿ ಕೇವಲ ಹಬ್ಬವಲ್ಲ. ಅದು ಸಮಾಜದಲ್ಲಿ ಸೌಹಾರ್ಧತೆ, ಪ್ರೀತಿ ಮತ್ತು ಒಗ್ಗಟ್ಟಿನ ಸಂಕೇತ ಬೆಳಕಿನ ಹಬ್ಬವು ಎಲ್ಲರ ಬದುಕಿಗೂ ಬೆಳಕು ತಂದು ಕೊಡಲಿ. ಸಮಾಜವು ಶಾಂತಿ ಮತ್ತು ಸೌಹಾರ್ಧತೆಯ ಮಾರ್ಗದಲ್ಲಿ ಸಾಗಲಿ ಎಂಬುವುದೇ ಇದರ ಸಂದೇಶವೆಂದು ಸಾರುವ ಕೆಲಸ ಆಗಲಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.