ಯೋಗಬಾಲೆ ತನುಶ್ರೀ ಪಿತ್ರೋಡಿಯಿಂದ ಐವತ್ತು ನಿಮಿಷದಲ್ಲಿ 333 ಆಸನ ಪ್ರದರ್ಶನ, ವಿಶ್ವದಾಖಲೆ
ಬೆಹರಿನ್ ಕನ್ನಡ ಸಂಘದ ಸಭಾಂಗಣದಲ್ಲಿ ನಡೆದ ಗೋಲ್ಡನ್ ಬುಕ್ ಆಫ್ ರೆಕಾರ್ಡ್
(Beharin) ಬೆಹರಿನ್; ಉಡುಪಿಯ ಯೋಗಬಾಲೆ ತನುಶ್ರೀ ಪಿತ್ರೋಡಿಯವರು ಐವತ್ತು ನಿಮಿಷದಲ್ಲಿ 333 ಆಸನಗಳನ್ನು ಮಾಡುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ.
ಬೆಹರಿನ್ ಕನ್ನಡ ಸಂಘ ಆಯೋಜಿಸಿದ ಕಾರ್ಯಕ್ರಮವನ್ನು ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದು, ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾದಳು.
ಈ ಹಿಂದೆ ಅದಮಾರು ಪರ್ಯಾಯ ಸಂದರ್ಭ 45 ನಿಮಿಷದಲ್ಲಿ 245 ಆಸನಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಳು. ಇದೀಗ ತನ್ನ ದಾಖಲೆಯನ್ನು ತಾನೇ ಮುರಿಯುವ ಮೂಲಕ ಹತ್ತನೇ ವಿಶ್ವದಾಖಲೆ ಮಾಡಿದ್ದಾಳೆ.
ಬೆಹರಿನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬೆಹರಿನ್ ಯೋಗ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮಾ ಅಲ್ ಮನ್ಸೂರಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ ಮನೀಶ್ ಬಿಷ್ಣೋಯಿ, ಬೆಹರಿನ್ ಇಂಡಿಯನ್ ಸ್ಕೂಲ್ ಚಯರ್ ಮನ್ ಬಿನು ಮನ್ನಿಲ್ ವರ್ಗಿಸ್, ಬೆಹರಿನ್ ಕೇರಳೀಯ ಸಮಾಜಮ್ ಅಧ್ಯಕ್ಷ ಪಿ ವಿ ರಾಧಾಕೃಷ್ಣ ಪಿಳ್ಳೆ, ಬೆಹರಿನ್ ಇಂಡಿಯನ್ ಕ್ಲಬ್ ಅಧ್ಯಕ್ಷ ಜೊಸೆಫ್ ಜಾಯ್, ಯುನಿಕೋ ಗ್ರೂಪ್ ಬೆಹರಿನ್ ಸಿ ಇ ಒ ಜಯಶಂಕರ್ ವಿಶ್ವನಾಥನ್, ಸಂಧ್ಯಾ ಉದಯ್ ದಂಪತಿಗಳು, ರಾಘವೇಂದ್ರ ದೇವಾಡಿಗ, ರೀತು ಶ್ರೀ, ಬೆಹರಿನ್ ಕನ್ನಡ ಸಂಘದ ರಾಮ್ ಪ್ರಸಾದ್ ಅಮ್ಮೆನಡ್ಕ, ನಿತಿನ್ ಶೆಟ್ಟಿ, ಈಶ್ವರ್ ಅಂಚನ್, ಹರಿನಾಥ್ ಸುವರ್ಣ , ಹರಿಣಿ ಶೆಟ್ಟಿ, ಪುಲಕೇಶಿ, ಹರೀಶ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

