• Home  
  • ಕಾಪು ಪ್ರವಾಸಿ ತಾಣ ಅಭಿವೃದ್ಧಿಗೆ ಹಣ ಒದಗಿಸಿ : ವಿಧಾನ ಸಭೆಯಲ್ಲಿ ಶಾಸಕ ಗುರ್ಮೆ ಆಗ್ರಹ (Provide funds for the development of Kaup tourist spot: MLA Gurme demands in the Legislative Assembly)
- ರಾಜಕೀಯ

ಕಾಪು ಪ್ರವಾಸಿ ತಾಣ ಅಭಿವೃದ್ಧಿಗೆ ಹಣ ಒದಗಿಸಿ : ವಿಧಾನ ಸಭೆಯಲ್ಲಿ ಶಾಸಕ ಗುರ್ಮೆ ಆಗ್ರಹ (Provide funds for the development of Kaup tourist spot: MLA Gurme demands in the Legislative Assembly)

Share:  ಕಾಪು ಪ್ರವಾಸಿ ತಾಣ ಅಭಿವೃದ್ಧಿಗೆ ಹಣ ಒದಗಿಸಿ : ವಿಧಾನ ಸಭೆಯಲ್ಲಿ ಶಾಸಕ ಗುರ್ಮೆ ಆಗ್ರಹ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನದ ಚುಕ್ಕೆ ಗುರುತಿನ ಸಂಖ್ಯೆ 380ರಡಿ ಸರಕಾರಕ್ಕೆ ಮನವಿ (Belgaum) ಬೆಳಗಾವಿ: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, 1 ಜಿಲ್ಲೆ 1 ತಾಣ ಅಭಿವೃದ್ಧಿಯಡಿ ಕಾಪು ಕ್ಷೇತ್ರದ ಪ್ರವಾಸಿ ತಾಣದ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಬೇಕು ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಬೆಳಗಾವಿ ಸುವರ್ಣ ಸೌಧದಲ್ಲಿ […]

ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನದ ಚುಕ್ಕೆ ಗುರುತಿನ ಸಂಖ್ಯೆ 380ರಡಿ ಸರಕಾರಕ್ಕೆ ಮನವಿ

(Belgaum) ಬೆಳಗಾವಿ: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, 1 ಜಿಲ್ಲೆ 1 ತಾಣ ಅಭಿವೃದ್ಧಿಯಡಿ ಕಾಪು ಕ್ಷೇತ್ರದ ಪ್ರವಾಸಿ ತಾಣದ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಬೇಕು ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

    ಕರ್ನಾಟಕ ವಿಧಾನಸಭೆ ಅಧಿವೇಶನದ ಚುಕ್ಕೆ ಗುರುತಿನ ಸಂಖ್ಯೆ 380ರಡಿ ಈ ಕುರಿತು ರಾಜ್ಯ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರ ಗಳು ಹಾಗೂ ಶಾಸನ ರಚನಾ ಶಾಸ್ತ್ರ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಮನವಿ ಮಾಡಿದ ಅವರು, ಸತತ 3ನೇ ಬಾರಿಗೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಕಾಪು ಕ್ಷೇತ್ರದಲ್ಲಿ ಶ್ರೀ ಮಾರಿಗುಡಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನಕಾಪು ದೀಪಸ್ಥಂಭ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಬೀಚ್ ಇದೆ. ಇಲ್ಲಿಗೆ ಪ್ರತಿನಿತ್ಯ 20 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ. 1 ಜಿಲ್ಲೆ 1 ತಾಣ ಯೋಜನೆಯಡಿ ಕಾಪು ಕ್ಷೇತ್ರವನ್ನು ನಿಗದಿಗೊಳಿಸಿ, ಪ್ರವಾಸಿ ತಾಣದ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದೀರಿ. ಇದುವರೆಗೆ ಹಣ ಬಿಡುಗಡೆ ಆಗಿಲ್ಲ. ಹಣ ಬಿಡುಗಡೆ ಮಾಡಿದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.

    ಈ ಕುರಿತು ಕೇಂದ್ರ ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾವೂ ಕೂಡ ಪ್ರವಾಸೋದ್ಯಮ ಅಭಿವೃದ್ಧಿಗೆ ಭರವಸೆ ನೀಡಿದ್ದೀರಿ ಎಂದು ಸಚಿವರಿಗೆ ನೆನಪಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್‌. ಕೆ. ಪಾಟೀಲ್, ಕಾಪು ಪ್ರವಾಸಿ ತಾಣವೆಂದು ಘೋಷಣೆ ಮಾಡಿದ್ದೇವೆ. 75 ಲಕ್ಷ ರೂ. ವಚ್ಚದಲ್ಲಿ ಸಂಪರ್ಕ ಸೇತುವೆ ಪೂರ್ಣ ಗೊಳಿಸಿದ್ದೇವೆ. 5 ಕೋಟಿ ರೂ. ಬಿಡುಗಡೆ ಮಾಡುವ ಘೋಷಣೆ ಮಾಡಿದ್ದೆವು. ಖಂಡಿತವಾಗಿ ಮುಂದಿನ ಆರ್ಥಿಕ ವರ್ಷದೊಳಗೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.