• Home  
  • ವಿಶ್ವಬ್ರಾಹ್ಮಣ ಯುವ ಸಂಘಟನೆ ಆಯೋಜನೆಯಲ್ಲಿ 12 ಜೋಡಿ ವಧು ವರರ ಸಾಮೂಹಿಕ ವಿವಾಹ (Mass wedding of 12 couples organized by Vishwa Brahmin Youth Organization)
- social service

ವಿಶ್ವಬ್ರಾಹ್ಮಣ ಯುವ ಸಂಘಟನೆ ಆಯೋಜನೆಯಲ್ಲಿ 12 ಜೋಡಿ ವಧು ವರರ ಸಾಮೂಹಿಕ ವಿವಾಹ (Mass wedding of 12 couples organized by Vishwa Brahmin Youth Organization)

Share: ವಿಶ್ವಬ್ರಾಹ್ಮಣ ಯುವ ಸಂಘಟನೆ ಆಯೋಜನೆಯಲ್ಲಿ 12 ಜೋಡಿ ವಧು ವರರ ಸಾಮೂಹಿಕ ವಿವಾಹ  ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆದ ವಿವಾಹ ಕಾರ್ಯಕ್ರಮ (Katapady) ಕಟಪಾಡಿ : ವಿಶ್ವ ಬ್ರಾಹ್ಮಣ  ಯುವ  ಸಂಘಟನೆ ಕಾಪು ವಿಧಾನಸಭಾ ಕ್ಷೇತ್ರ ಇದರ ಚತುರ್ಥ ಬಾರಿಯ ಸಾಮೂಹಿಕ   ವಿವಾಹವು ವಿಜೃಂಭಣೆಯಿಂದ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜರಗಿತು. ಸಂಘಟನೆಯು ವಧುವಿಗೆ ಸೀರೆ, ಚಿನ್ನದ ತಾಳಿಗುಂಡು, ಬೆಳ್ಳಿಯ  ಕರಿಮಣಿ, ಕಾಲುಂಗುರ, ವರನಿಗೆ ಪಂಚೆ, ಶಾಲು, ಪೇಟ, ಬಾಸಿಂಗವನ್ನು ಒದಗಿಸಲಾಗಿದ್ದು, ಪ್ರತ್ಯೇಕ ಮಂಟಪಗಳಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ಪುರೋಹಿತ್ ರವಿ ಆಚಾರ್ಯ ಬಂಟಕಲ್ಲು ಹಾಗೂ ಸುದರ್ಶನ್ ಪುರೋಹಿತ್ ಪಡುಬಿದ್ರೆ ಸಹಿತ ಸಮಾಜದ ಶ್ರೇಷ್ಠ ವೈದಿಕ ಮಹಾಶಯರ ಆಚಾರ್ಯತ್ವದಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿನೆರವೇರಿಸಲಾಯಿತು.ʼ  ಉಡುಪಿ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ವಿಶ್ವಕರ್ಮ ಸಮಾಜದ 12 ಜೋಡಿ ವಧು-ವರರು  ಹಸೆಮಣೆಯನ್ನು  ಏರಿ   ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 5000 ಕ್ಕೂ ಅಧಿಕ ಸಮಾಜ ಬಾಂಧವರು ಉಪಸ್ಥಿತರಿದ್ದರು.  ಕಟಪಾಡಿ ಪಡು ಕುತ್ಯಾರು ಶ್ರೀಮತ್  ಜಗದ್ಗುರು  ಆನೆಗುಂದಿ  ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಹಾಸನ ಅರೆಮಾದನಹಳ್ಳಿ ಶ್ರೀ ಸುಜ್ಞಾನಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವ ಸುಜ್ಞಾನತೀರ್ಥ ಮಹಾ ಸ್ವಾಮೀಜಿಯವರು ನವ ದಂಪತಿಗಳಿಗೆ ಹರಸಿದರು. ಈ ಸಂದರ್ಭ ಸಂಘಟನೆಯ ಮಹಾಪೋಷಕರಾದ ಅಲೆವೂರು  ಯೋಗೀಶ್ ಆಚಾರ್ಯ, ವಿಶ್ವನಾಥ ಆಚಾರ್ಯ ಕರಂಬಳ್ಳಿ, ಗೌರವ  ಅಧ್ಯಕ್ಷ ಸದಾಶಿವ ಆಚಾರ್ಯ ಪಡುಕುತ್ಯಾರು, ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು, ಜತೆ ಕಾರ್ಯದರ್ಶಿ ರಾಜೇಶ ಆಚಾರ್ಯ ಬಿಳಿಯಾರು, ಕೋಶಾಧಿಕಾರಿ  ಗಣೇಶ ಆಚಾರ್ಯ ಹೆಜಮಾಡಿ, ಸಂಚಾಲಕ ಮುರಳೀಧರ ಆಚಾರ್ಯ   ಇನ್ನಂಜೆ, ಉಪಾಧ್ಯಕ್ಷರುಗಳಾದ ವಿಜಯ ಆಚಾರ್ಯ ಪಡುಬಿದ್ರಿ,  ರಾಜೇಶ್ ಆಚಾರ್ಯ ಮಂಚಕಲ್ಲು, ಯಜ್ನನಾಥ ಆಚಾರ್ಯ  ಬಾಳ್ಕಟ್ಟ, ಹರೀಶ್ ಆಚಾರ್ಯ ಕಳತ್ತೂರು, ಸತೀಶ್ ಆಚಾರ್ಯ ಪಡುಬಿದ್ರಿ, ವಲಯ ಅಧ್ಯಕ್ಷರುಗಳಾದ ರತ್ನಾಕರ ಆಚಾರ್ಯ ಪಲಿಮಾರು,  ದಿನೇಶ್ ಆಚಾರ್ಯ ಕಾಪು, ರತ್ನಾಕರ ಆಚಾರ್ಯ ಬೊಮ್ಮರಬೆಟ್ಟು,  ಗಣೇಶ್ ಆಚಾರ್ಯ ಮಂಚಕಲ್ಲು, ಕಾರ್ಯದರ್ಶಿಗಳಾದ ದಿನೇಶ್  ಆಚಾರ್ಯ ಎಮಾಳು, ಪ್ರಕಾಶ್ ಆಚಾರ್ಯ ಪಡುಬಿದ್ರಿ, ಪ್ರದೀಪ್  ಆಚಾರ್ಯ ಹಿರೇಬೆಟ್ಟು, ಪ್ರಶಾಂತ್ ಆಚಾರ್ಯ ಕುತ್ಯಾರು, ಸಂಘಟನೆಯ, ಪದಾಧಿಕಾರಿಗಳು ಸದಸ್ಯರು, ದಾನಿಗಳು, ಗಣ್ಯರು ಉಪಸ್ಥಿತರಿದ್ದರು. Share:

(Katapady) ಕಟಪಾಡಿ : ವಿಶ್ವ ಬ್ರಾಹ್ಮಣ  ಯುವ  ಸಂಘಟನೆ ಕಾಪು ವಿಧಾನಸಭಾ ಕ್ಷೇತ್ರ ಇದರ ಚತುರ್ಥ ಬಾರಿಯ ಸಾಮೂಹಿಕ   ವಿವಾಹವು ವಿಜೃಂಭಣೆಯಿಂದ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜರಗಿತು.

 ಉಡುಪಿ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ವಿಶ್ವಕರ್ಮ ಸಮಾಜದ 12 ಜೋಡಿ ವಧು-ವರರು  ಹಸೆಮಣೆಯನ್ನು  ಏರಿ   ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

5000 ಕ್ಕೂ ಅಧಿಕ ಸಮಾಜ ಬಾಂಧವರು ಉಪಸ್ಥಿತರಿದ್ದರು.

 ಕಟಪಾಡಿ ಪಡು ಕುತ್ಯಾರು ಶ್ರೀಮತ್  ಜಗದ್ಗುರು  ಆನೆಗುಂದಿ  ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಹಾಸನ ಅರೆಮಾದನಹಳ್ಳಿ ಶ್ರೀ ಸುಜ್ಞಾನಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವ ಸುಜ್ಞಾನತೀರ್ಥ ಮಹಾ ಸ್ವಾಮೀಜಿಯವರು ನವ ದಂಪತಿಗಳಿಗೆ ಹರಸಿದರು.

ಈ ಸಂದರ್ಭ ಸಂಘಟನೆಯ ಮಹಾಪೋಷಕರಾದ ಅಲೆವೂರು  ಯೋಗೀಶ್ ಆಚಾರ್ಯ, ವಿಶ್ವನಾಥ ಆಚಾರ್ಯ ಕರಂಬಳ್ಳಿ, ಗೌರವ  ಅಧ್ಯಕ್ಷ ಸದಾಶಿವ ಆಚಾರ್ಯ ಪಡುಕುತ್ಯಾರು, ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು, ಜತೆ ಕಾರ್ಯದರ್ಶಿ ರಾಜೇಶ ಆಚಾರ್ಯ ಬಿಳಿಯಾರು, ಕೋಶಾಧಿಕಾರಿ  ಗಣೇಶ ಆಚಾರ್ಯ ಹೆಜಮಾಡಿ, ಸಂಚಾಲಕ ಮುರಳೀಧರ ಆಚಾರ್ಯ   ಇನ್ನಂಜೆ, ಉಪಾಧ್ಯಕ್ಷರುಗಳಾದ ವಿಜಯ ಆಚಾರ್ಯ ಪಡುಬಿದ್ರಿ,  ರಾಜೇಶ್ ಆಚಾರ್ಯ ಮಂಚಕಲ್ಲು, ಯಜ್ನನಾಥ ಆಚಾರ್ಯ  ಬಾಳ್ಕಟ್ಟ, ಹರೀಶ್ ಆಚಾರ್ಯ ಕಳತ್ತೂರು, ಸತೀಶ್ ಆಚಾರ್ಯ ಪಡುಬಿದ್ರಿ, ವಲಯ ಅಧ್ಯಕ್ಷರುಗಳಾದ ರತ್ನಾಕರ ಆಚಾರ್ಯ ಪಲಿಮಾರು,  ದಿನೇಶ್ ಆಚಾರ್ಯ ಕಾಪು, ರತ್ನಾಕರ ಆಚಾರ್ಯ ಬೊಮ್ಮರಬೆಟ್ಟು,  ಗಣೇಶ್ ಆಚಾರ್ಯ ಮಂಚಕಲ್ಲು, ಕಾರ್ಯದರ್ಶಿಗಳಾದ ದಿನೇಶ್  ಆಚಾರ್ಯ ಎಮಾಳು, ಪ್ರಕಾಶ್ ಆಚಾರ್ಯ ಪಡುಬಿದ್ರಿ, ಪ್ರದೀಪ್  ಆಚಾರ್ಯ ಹಿರೇಬೆಟ್ಟು, ಪ್ರಶಾಂತ್ ಆಚಾರ್ಯ ಕುತ್ಯಾರು, ಸಂಘಟನೆಯ, ಪದಾಧಿಕಾರಿಗಳು ಸದಸ್ಯರು, ದಾನಿಗಳು, ಗಣ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.