ಕಟಪಾಡಿ ಸಿ.ಎ. ಬ್ಯಾಂಕ್ ಎಜಿಎಂ ಅವರ ಮನೆಯಂಗಳದಲ್ಲಿ ಚಾಪೆ ನೇಜಿ ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿಯವರಿಂದ 6 ಎಕರೆ ಗದ್ದೆಯಲ್ಲಿ ಚಾಪೆ ನೇಜಿಯ ಕೃಷಿ (Katapady) ಕಟಪಾಡಿ : ಪ್ರಸ್ತುತ ಕಟಪಾಡಿ ಸಿ.ಎ. ಬ್ಯಾಂಕ್ ಇದರ ಎ.ಜಿ.ಎಂ. (ಸಹಾಯಕ ಕಾರ್ಯನಿರ್ವಹಣಾಧಿಕಾರಿ) ಇನ್ನಂಜೆ ಅಜಿಲಕಾಡುವಿನ ರಮೇಶ್ ಪೂಜಾರಿ ಅವರು ಹಡೀಲು ಭೂಮಿ ಸಹಿತ ಸುಮಾರು 6 ಎಕರೆ ಗದ್ದೆಯಲ್ಲಿ ಯಂತ್ರದ ಮೂಲಕ ಚಾಪೆ ನೇಜಿ ನಾಟಿಯ ಕೃಷಿ ಮಾಡುವ ಮೂಲಕ ಅವರ ಕೃಷಿ ಪ್ರೇಮವು ಗಮನ ಸೆಳೆದಿದೆ. […]
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಅನಿಶಾ ಆಚಾರ್ಯ ಉಚ್ಚಿಲರಿಗೆ ಅಭಿನಂದನೆ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ ಅನಿಶಾ ಆಚಾರ್ಯ (Bengaluru) ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ವತಿಯಿಂದ ರಾಜ್ಯಾಧ್ಯಕ್ಷ ಕೆ ಪಿ. ನಂಜುಂಡಿ ವಿಶ್ವಕರ್ಮ ಅವರ ಸಾರಥ್ಯದಲ್ಲಿ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಹಭಾಗಿತ್ವದಲ್ಲಿ ಬೆಂಗಳೂರಿನ ಟೌನ್ ಹಾಲ್ (ಪುಟ್ಟಣ್ಣ ಚಟ್ಟಿ) ಭವನದಲ್ಲಿ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರದಡಿ ಎಸ್ ಎಸ್ ಎಲ್ ಸಿ ಸಾಧಕಿ […]
ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ ನಿಧನ ಉಚ್ಚಿಲದಲ್ಲಿ 6 ದಶಕಗಳಿಗೂ ಹೆಚ್ಚಿನ ಕಾಲ ಚಿನ್ನಾಭರಣ ತಯಾರಿಯ ಮಳಿಗೆ ಹೊಂದಿದ್ದರು. (Padubidri) ಪಡುಬಿದ್ರಿ : ಖ್ಯಾತ ಸ್ವರ್ಣಶಿಲ್ಪಿ ವೈ. ರಾಘವೇಂದ್ರ ಆಚಾರ್ಯ (90) ಅಲ್ಪಕಾಲದ ಅಸೌಖ್ಯದಿಂದ ಪಣಿಯೂರಿನ ಮನೆಯಲ್ಲಿ ಬುಧವಾರ ನಿಧನ ಹೊಂದಿದರು. ಮೃತರು ವೈದ್ಯರಾದ ಡಾ. ವೈ. ಯಶವಂತ ಆಚಾರ್ಯ ದಾವಣಗೆರೆ ಸಹಿತ ಮೂವರು ಪುತ್ರರು, ಓರ್ವ ಪುತ್ರಿಯನ್ನು ಆಗಲಿದ್ದಾರೆ. ಸುಮಾರು 6 ದಶಕಗಳಿಗೂ ಹೆಚ್ಚಿನ ಕಾಲ ಉಚ್ಚಿಲದಲ್ಲಿ ಚಿನ್ನಾಭರಣ ತಯಾರಿಯ ಜ್ಯುವೆಲ್ಲರ್ಸ್ ಹೊಂದಿದ್ದರು. […]
ಬಡಾದಿಂದ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯರವರಿಗೆ ಬೀಳ್ಕೊಡುಗೆ ಬೆಳಪು ಗ್ರಾ.ಪಂ ಕಾರ್ಯದರ್ಶಿಯಾಗಿ ಪದೋನ್ನತಿ (Padubidri) ಪಡುಬಿದ್ರಿ : 31 ವರ್ಷಗಳ ಕಾಲ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಎಟೆಂಡರ್, ಕ್ಲರ್ಕ್ ಆಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾಮ ಪಂಚಾಯತಿಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿಜಯ ಆಚಾರ್ಯ ಅವರನ್ನು ಸೋಮವಾರ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯಲ್ಲಿ ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್, ಉಪಾಧ್ಯಕ್ಷ […]
ವಿಶ್ವಬ್ರಾಹ್ಮಣ ಯುವ ಸಂಘಟನೆ ಆಯೋಜನೆಯಲ್ಲಿ 12 ಜೋಡಿ ವಧು ವರರ ಸಾಮೂಹಿಕ ವಿವಾಹ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆದ ವಿವಾಹ ಕಾರ್ಯಕ್ರಮ (Katapady) ಕಟಪಾಡಿ : ವಿಶ್ವ ಬ್ರಾಹ್ಮಣ ಯುವ ಸಂಘಟನೆ ಕಾಪು ವಿಧಾನಸಭಾ ಕ್ಷೇತ್ರ ಇದರ ಚತುರ್ಥ ಬಾರಿಯ ಸಾಮೂಹಿಕ ವಿವಾಹವು ವಿಜೃಂಭಣೆಯಿಂದ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಜರಗಿತು. ಸಂಘಟನೆಯು ವಧುವಿಗೆ ಸೀರೆ, ಚಿನ್ನದ ತಾಳಿಗುಂಡು, ಬೆಳ್ಳಿಯ ಕರಿಮಣಿ, ಕಾಲುಂಗುರ, ವರನಿಗೆ ಪಂಚೆ, ಶಾಲು, ಪೇಟ, ಬಾಸಿಂಗವನ್ನು ಒದಗಿಸಲಾಗಿದ್ದು, ಪ್ರತ್ಯೇಕ ಮಂಟಪಗಳಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ಪುರೋಹಿತ್ ರವಿ ಆಚಾರ್ಯ ಬಂಟಕಲ್ಲು ಹಾಗೂ ಸುದರ್ಶನ್ ಪುರೋಹಿತ್ ಪಡುಬಿದ್ರೆ ಸಹಿತ ಸಮಾಜದ ಶ್ರೇಷ್ಠ ವೈದಿಕ ಮಹಾಶಯರ ಆಚಾರ್ಯತ್ವದಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿನೆರವೇರಿಸಲಾಯಿತು.ʼ ಉಡುಪಿ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳ ವಿಶ್ವಕರ್ಮ ಸಮಾಜದ 12 ಜೋಡಿ ವಧು-ವರರು ಹಸೆಮಣೆಯನ್ನು ಏರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 5000 ಕ್ಕೂ ಅಧಿಕ ಸಮಾಜ ಬಾಂಧವರು ಉಪಸ್ಥಿತರಿದ್ದರು. ಕಟಪಾಡಿ ಪಡು ಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಹಾಸನ ಅರೆಮಾದನಹಳ್ಳಿ ಶ್ರೀ ಸುಜ್ಞಾನಪ್ರಭು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ಶಿವ ಸುಜ್ಞಾನತೀರ್ಥ ಮಹಾ ಸ್ವಾಮೀಜಿಯವರು ನವ ದಂಪತಿಗಳಿಗೆ ಹರಸಿದರು. ಈ ಸಂದರ್ಭ ಸಂಘಟನೆಯ ಮಹಾಪೋಷಕರಾದ ಅಲೆವೂರು ಯೋಗೀಶ್ ಆಚಾರ್ಯ, ವಿಶ್ವನಾಥ ಆಚಾರ್ಯ ಕರಂಬಳ್ಳಿ, ಗೌರವ ಅಧ್ಯಕ್ಷ ಸದಾಶಿವ ಆಚಾರ್ಯ ಪಡುಕುತ್ಯಾರು, ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು, ಜತೆ ಕಾರ್ಯದರ್ಶಿ ರಾಜೇಶ ಆಚಾರ್ಯ ಬಿಳಿಯಾರು, ಕೋಶಾಧಿಕಾರಿ ಗಣೇಶ ಆಚಾರ್ಯ ಹೆಜಮಾಡಿ, ಸಂಚಾಲಕ ಮುರಳೀಧರ ಆಚಾರ್ಯ ಇನ್ನಂಜೆ, ಉಪಾಧ್ಯಕ್ಷರುಗಳಾದ ವಿಜಯ ಆಚಾರ್ಯ ಪಡುಬಿದ್ರಿ, ರಾಜೇಶ್ ಆಚಾರ್ಯ ಮಂಚಕಲ್ಲು, ಯಜ್ನನಾಥ ಆಚಾರ್ಯ ಬಾಳ್ಕಟ್ಟ, ಹರೀಶ್ ಆಚಾರ್ಯ ಕಳತ್ತೂರು, ಸತೀಶ್ ಆಚಾರ್ಯ ಪಡುಬಿದ್ರಿ, ವಲಯ ಅಧ್ಯಕ್ಷರುಗಳಾದ ರತ್ನಾಕರ ಆಚಾರ್ಯ ಪಲಿಮಾರು, ದಿನೇಶ್ ಆಚಾರ್ಯ ಕಾಪು, ರತ್ನಾಕರ ಆಚಾರ್ಯ ಬೊಮ್ಮರಬೆಟ್ಟು, ಗಣೇಶ್ ಆಚಾರ್ಯ ಮಂಚಕಲ್ಲು, ಕಾರ್ಯದರ್ಶಿಗಳಾದ ದಿನೇಶ್ ಆಚಾರ್ಯ ಎಮಾಳು, ಪ್ರಕಾಶ್ ಆಚಾರ್ಯ ಪಡುಬಿದ್ರಿ, ಪ್ರದೀಪ್ ಆಚಾರ್ಯ ಹಿರೇಬೆಟ್ಟು, ಪ್ರಶಾಂತ್ ಆಚಾರ್ಯ ಕುತ್ಯಾರು, ಸಂಘಟನೆಯ, ಪದಾಧಿಕಾರಿಗಳು ಸದಸ್ಯರು, ದಾನಿಗಳು, ಗಣ್ಯರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿಯಲ್ಲಿ ಕಾಪುವಿನ ಮೂವರಿಗೆ ಸ್ಥಾನ ಕಾರ್ಯದರ್ಶಿಯಾಗಿ ಸುರೇಶ್ ಎರ್ಮಾಳು, ಸದಸ್ಯರಾಗಿ ವಿಜಯ, ಪ್ರಮೋದ್ ಆಯ್ಕೆ (Kaup) ಕಾಪು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಕಾಪು ತಾಲೂಕಿನಿಂದ ಮೂವರು ಪತ್ರಕರ್ತರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಕರಾವಳಿ ಅಲೆ ಪತ್ರಿಕೆಯ ಕಾಪು ತಾಲೂಕು ವರದಿಗಾರ ಸುರೇಶ್ ಎರ್ಮಾಳುರವರು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಕರಾಟೆ […]
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾಗೃತ ಚಿಂತನ ಮಂಥನ ಸಮಾಗಮ (Kaup) ಕಾಪು : ವಿಶ್ವಕರ್ಮ ಸಮಾಜವನ್ನು ಒಗ್ಗೂಡಿಸಿಕೊಂಡು ಆಸರೆಯಾಗಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿಯು ಬೆಳೆದು ನಿಲ್ಲಲಿ ಎಂದು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಗಣೇಶ ಆಚಾರ್ಯ ಹೇಳಿದರು. ಅವರು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವಬ್ರಾಹ್ಮಣ ಸಮುದಾಯ ಸಾಮರ್ಥ್ಯಾಭಿವೃದ್ಧಿ ಸಮಿತಿ ಕಾಪು ವತಿಯಿಂದ ನಡೆದ ಜಾಗೃತ ಚಿಂತನ ಮಂಥನ ಸಮಾಗಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿ, ಪತ್ರಕರ್ತ ಚಂದ್ರಶೇಖರ […]
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಆರ್. ಪೂಜಾರಿ ಆಯ್ಕೆ (Uchila) ಪಡುಬಿದ್ರಿ: 37ನೇ ವರ್ಷದ ಉಚ್ಚಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಲಕೃಷ್ಣ ಆರ್. ಪೂಜಾರಿ ಸರ್ವಾನುಮತಮತದಿಂದ ಆಯ್ಕೆಗೊಂಡಿದ್ದಾರೆ.ಅಧ್ಯಕ್ಷ ಕಿಶೋರ್ ಶೆಟ್ಟಿ ಎರ್ಮಾಳುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಆರ್ಚಕರಾಗಿ ವೇ. ಮೂ. ಕೆ.ವಿ. ರಾಘವೇಂದ್ರ ಉಪಾಧ್ಯಾಯ ಗೌರವ ಅಧ್ಯಕ್ಷರಾಗಿ ಎರ್ಮಾಳು ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾಗಿ ಕೆ. ವಿಶ್ವನಾಥ, ಕೆ. ವಾಸುದೇವ ರಾವ್, ದಿನೇಶ್ […]
ಶಂಕರಪುರ: ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಪತ್ರಿಕಾ ದಿನಾಚರಣೆ, ಗೌರವಾರ್ಪಣೆ (Shankarapura) ಶಂಕರಪುರ ಜು.೨:ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರವಲ್ಲಿ ದಿಟ್ಟ ವರದಿಯನ್ನು ನೀಡಲು ರಿಸ್ಕ್ ಎದುರಿಸಿಕೊಂಡು ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸುವ ಪತ್ರಕರ್ತರ ಶ್ರಮ ಬೆಲೆ ಕಟ್ಟಲಾಗದ್ದು. ಅಂತಹ ಪತ್ರಕರ್ತರ ಶ್ರೇಯೋಭಿವೃದ್ಧಿಯಾಗಲಿ ಎಂದು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು. ಅವರು ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ದೇವಸ್ಥಾನದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭ ಪತ್ರಕರ್ತರ […]
ಎಲ್ಲೂರು ಪರಿಸರದಲ್ಲಿ ಸಾಮೂಹಿಕ ಭತ್ತದ ಕೃಷಿ, ಸಾರ್ವತ್ರಿಕ ಶ್ಲಾಘನೆ CREDIT : VIJJU, UCHILA ಎಲ್ಲೂರು, ಕಂಚಿನಡ್ಕ, ಪಿಲಾರುಕಾನ, ಮುದರಂಗಡಿ, ಕಳತ್ತೂರು, ಪೆಜತ್ತಕಟ್ಟೆ, ಬೆಳಪು ಮಲಂಗೋಳಿ ಪರಿಸರದಲ್ಲಿ ಹರೀಶ ಪೂಜಾರಿ ತಂಡದಿಂದ “ಬತ್ತದ” ಭತ್ತದ ಕೃಷಿ (Yelluru) ಎಲ್ಲೂರು: ಎಲ್ಲೂರು ಗ್ರಾಮದ ಅರಂತಡೆಯ ಹರೀಶ್ ಪೂಜಾರಿ ನೇತೃತ್ವದಲ್ಲಿ ಹಲವಾರು ಮಂದಿ ಜತೆಗೂಡಿ ಭತ್ತದ ಕೃಷಿಯನ್ನು ಮುಂದುವರಿಸುತ್ತಿದ್ದು, ಇದು ಇತರರಿಗೂ ಮಾದರಿ ಆಗಿದೆ. ಸಾಮೂಹಿಕವಾಗಿ ಮಾಡುತ್ತಿರುವ ಭತ್ತದ ಕೃಷಿಯಿಂದಾಗಿ ಕೃಷಿ ಕೂಲಿ ಕಾರ್ಮಿಕರು ಕೆಲಸ ಪಡೆಯುವ ಜೊತೆಗೆ ಸುಮಾರು […]