ಹೊಸಬೆಳಕು ಆಶ್ರಮದಲ್ಲಿ ಕುಟೀರ ಲೋಕಾರ್ಪಣೆ
ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಕುಟೀರ ಲೋಕಾರ್ಪಣೆ ಗೈದರು
(Udupi) ಉಡುಪಿ: ಉಡುಪಿಯ ಹೊಸಬೆಳಕು ಸಂಸ್ಥೆಯ ಎರಡನೇ ಯೋಜನೆಯ ಕನಸಿನ ಕೂಸಾದ ವಿನೂತನ ಕಟ್ಟಡ ಕುಟೀರ ಇದರ ಲೋಕಾರ್ಪಣೆ ಕಾರ್ಯಕ್ರಮವು ಸಂಪನ್ನಗೊಂಡಿತು.
ಉದ್ಘಾಟನೆಯನ್ನು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ರವರು ಕುಟೀರ ಲೋಕಾರ್ಪಣೆ ಗೈದರು.
ಕುಟೀರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯ ಅತಿಥಿಗಳು ಮಕ್ಕಳಲ್ಲಿ ಸಾಮಾಜಿಕ ಹಾಗೂ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಕುಟೀರದ ಒಳಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಮಣ್ಣಿನ ಕಲಾಕೃತಿಗಳು ಅಂತಾರಾಷ್ಟ್ರೀಯ ಕಲಾವಿದರಾದ ವೆಂಕಿ ಪಲಿಮಾರು ಇವರ ಕೈಚಳಕದಲ್ಲಿ ಮೂಡಿಬಂದಿದೆ.
ಕಾರ್ಯಕ್ರಮದಲ್ಲಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ಶ್ರೀಮತಿ ತನುಲಾ, ಕಾರ್ಯಕ್ರಮದಲ್ಲಿ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕ್ರಿಯೇಟಿವ್ ಕಾಲೇಜ್ ನ ಸ್ಥಾಪಕರಾದ ಗಣಪತಿ ಭಟ್, ರಂಗಪ್ಪ ಕಿಣಿ, ಮುಂಬೈ ಉದ್ಯಮಿ ವಿಕ್ರಮ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಿರಣ್ ಆಚಾರ್, ಜಗದೀಶ್ ತೆಂಡೂಲ್ಕರ್, ಬಲರಾಮ ಭಟ್, ಶ್ರೀನಾಥ್ ಮಣಿಪಾಲ, ಯತೀಶ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ಶ್ರೀಮತಿ ತನಿಕ ಕಾರ್ಯಕ್ರಮ ನಿರೂಪಿಸಿದರು. ಗೌರೀಶ್ ವಂದಿಸಿದರು.

