ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ
ಇಂಗ್ಲೆಂಡ್ನ ಸರೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ರಿಚರ್ಡ್ ಗ್ರೀನ್ ರವರಿಂದ ಉಪನ್ಯಾಸ
(udupi,Bantakal) ಉಡುಪಿ, ಬಂಟಕಲ್ : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ಅಲಾರ್ ಇನ್ನೋವೇಶನ್ ನ ಸೆಂಟರ್ ಆಫ್ ಎಕ್ಸಲೆನ್ಸ್, ಸಹಯೋಗದೊಂದಿಗೆ ಸಂಕೀರ್ಣ ಸಾಮಾಜಿಕ ವ್ಯವಸ್ಥೆಗಳಿಗಾಗಿ ಎಐ ಮತ್ತು ಸಂಶೋಧನೆಯ ಗುಣಾತ್ಮಕ ವಿಧಾನಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಗ್ಲೆಂಡ್ನ ಸರೇ ವಿಶ್ವವಿದ್ಯಾನಿಲಯದ ಇನ್ಸಿ ಟ್ಯೂಟ್ ಫಾರ್ ಪೀಪಲ್ – ಸೆಂಟರ್ಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಕೂಲ್ ಆಫ್ ಹೆಲ್ತ್ ಸೈನ್ಸಸ್ ನ ಪ್ರಾಧ್ಯಾಪಕರಾದ ಡಾ. ರಿಚರ್ಡ್ ಜಾನ್ ಗ್ರೀನ್ ಭಾಗವಹಿಸಿದ್ದರು.
ಇವರು ಮಾತನಾಡಿ, ಕೃತಕ ಬುದ್ಧಿಮತ್ತೆ, ವ್ಯವಸ್ಥಾತ್ಮಕ ಚಿಂತನೆ ಮತ್ತು ಅನುಕರಣೆಗಳನ್ನು ಬಳಸಿಕೊಂಡು ಆರೋಗ್ಯ ಮತ್ತು ಸಾಮಾಜಿಕ ಆರೈಕೆಯಲ್ಲಿ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಹಾಗೂ ಪರಿಹರಿಸುವ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದರು.
ಇವರ ಸಂಶೋಧನಾ ಆಸಕ್ತಿಗಳು ವೃದ್ದಾಪ್ಯದಲ್ಲಿ ಆರೋಗ್ಯಪಾಲನೆ, ದೀರ್ಘಕಾಲಿಕ ರೋಗಗಳು, ಹಿರಿಯ ನಾಗರಿಕರ ಆರೈಕೆಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ, ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆಗಳ ಮೇಲೆ ಕೇಂದ್ರೀಕೃತವಾಗಿವೆ.
ಈ ಕಾರ್ಯಕ್ರಮವನ್ನು ಡಾ. ಸಚಿನ್ ಭಟ್ ಡೀನ್ (ಸಂಶೋಧನೆ ಮತ್ತು ಅಭಿವೃದ್ಧಿ),ಯವರು ಸಂಯೋಜಿಸಿದರು.
ಈ ಕಾರ್ಯಕ್ರಮದಲ್ಲಿ ನಿರಾಮಯ ಹೆಲ್ತ್ ಸೈನ್ಸ್ ಹಾಗೂ ಎಸ್ ಎಮ್ ವಿಐಟಿಮ್ ವಿವಿಧ ವಿಭಾಗದ ಪ್ರಾಧ್ಯಾಪಕರು ಭಾಗವಹಿಸಿದ್ದರು.

