• Home  
  • ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವ (33rd school anniversary of Kaup Vidyaniketan Public School)
- ಶಾಲಾ ಕಾಲೇಜು

ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವ (33rd school anniversary of Kaup Vidyaniketan Public School)

Share:  ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವ  ಶಿಕ್ಷಣದೊಂದಿಗೆ ಸಂಸ್ಕಾರ ಅನಿವಾರ್ಯ : ಶ್ರೀನಿವಾಸ ಯಾನೆ ಅಪ್ಪು ಪೂಜಾರಿ (Kaup) ಕಾಪು : ಶಿಕ್ಷಣದೊಂದಿಗೆ ಸಂಸ್ಕಾರ ಅನಿವಾರ್ಯ. ಸಂಸ್ಕಾರವು ತಂದೆ ತಾಯಿಯರ ಮತ್ತು ಗುರು ಹಿರಿಯರ ಮಾರ್ಗದರ್ಶನದಲ್ಲಿ ಬರಬೇಕು ಎಂದು ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಹೇಳಿದರು.  ಅವರು ಭಾನುವಾರ ಸಂಜೆ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಕಾಪು ಇದರ 33ನೇ ಶಾಲಾ ವಾರ್ಷಿಕೋತ್ಸವ  […]

(Kaup) ಕಾಪು : ಶಿಕ್ಷಣದೊಂದಿಗೆ ಸಂಸ್ಕಾರ ಅನಿವಾರ್ಯ. ಸಂಸ್ಕಾರವು ತಂದೆ ತಾಯಿಯರ ಮತ್ತು ಗುರು ಹಿರಿಯರ ಮಾರ್ಗದರ್ಶನದಲ್ಲಿ ಬರಬೇಕು ಎಂದು ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಹೇಳಿದರು.

 ಅವರು ಭಾನುವಾರ ಸಂಜೆ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಕಾಪು ಇದರ 33ನೇ ಶಾಲಾ ವಾರ್ಷಿಕೋತ್ಸವ  “ವಿದ್ಯೋತ್ಸವ” ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

  ಮುಖ್ಯ ಅತಿಥಿ ಚಲನಚಿತ್ರ ನಟ ಅರವಿಂದ ಬೋಳಾರ್ ಮಾತನಾಡಿ, ಕಲಿಕೆಗೆ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ. ಸಣ್ಣವರಿರುವಾಗಲೇ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದಲ್ಲಿ ದೊಡ್ಡವರಾದಾಗ ಸಾಧಕರಾಗಲು ಸಾಧ್ಯ. ಶಾಲೆಯ ಶಿಕ್ಷಕರಿಂದ ಬಂದ ಹುಚ್ಚನೆಂಬ ಮಾತು ಪ್ರತಿಭಾ ಕಾರ್ಯಕ್ರಮದಲ್ಲಿ ಅದೇ ಪಾತ್ರ ಮಾಡಿ ಪ್ರಥಮ ಬಹುಮಾನ ಪಡೆದ ಕ್ಷಣವನ್ನು ನೆನಪಿಸಿಕೊಂಡರು.

    ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದೊಂದಿಗೆ ಕಲಿಕೆ ಸಾಗಬೇಕು. ಮಕ್ಕಳನ್ನು ಅವಮಾನ ಮಾಡದೆ, ಅವರ ಕಲಿಕೆಗೆ ಪ್ರೋತ್ಸಾಹದಾತರಾಗಬೇಕು. ಕೆ. ಪಿ ಆಚಾರ್ಯರ ದಿಟ್ಟತನದಿಂದ ಮೂಡಿದ ಸಂಸ್ಥೆ ವಿದ್ಯಾನಿಕೇತನ ಸಂಸ್ಥೆ ಇಂದು ಹೆಮ್ಮರವಾಗಿದೆ ಎಂದರು.

  ಕಾಪುವಿನ ಚಿತ್ರಕಲಾ ಪ್ರತಿಭೆ ಕುಮಾರಿ ರಕ್ಷಾ ಆರ್ ಪೂಜಾರಿಯವರಿಗೆ “ವಿದ್ಯಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

   ವೇದಿಕೆಯಲ್ಲಿ ಮಣಿಪಾಲ ಜ್ಞಾನಸುಧ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಮುಳಿಹಿತ್ಲು ಇದರ ಆಡಳಿತ ಮೊಕ್ತೇಸರ ಉಮಾನಾಥ ಕಾಪು, ಪತ್ರಕರ್ತ ರಾಕೇಶ್ ಕುಂಜೂರು, ಹಳೆ ವಿದ್ಯಾರ್ಥಿ ಸಕ್ಷತ್ ಶೆಟ್ಟಿ, ಚಿತ್ರಕಲಾವಿದೆ ರಕ್ಷಾ ಆರ್ ಪೂಜಾರಿ, ಸಂಚಾಲಕರಾದ ಕೆ.ಪಿ. ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಆಚಾರ್ಯ, ಪ್ರಾಂಶುಪಾಲ ಸಾಕ್ಷತ್ ಯುಕೆ, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಚಾಲಕರಾದ ಶೋಭಾ, ಆಶಿತಾ ಉಪಸ್ಥಿತರಿದ್ದರು.

    ಆಶಿತಾ ಸ್ವಾಗತಿಸಿದರು. ಸಾಕ್ಷತ್ ಯು ಕೆ ವರದಿ ವಾಚಿಸಿದರು. ಶಿಕ್ಷಕಿಯರಾದ ಶೋಭಾ, ಆಶಿತಾ ಬಹುಮಾನಿತರ ಪಟ್ಟಿ ವಾಚಿಸಿದರು.

ವಿದ್ಯಾರ್ಥಿಗಳಾದ ಸಾತ್ವಿಕಾ ಮತ್ತು ರಾನಿಯಾ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.