• Home  
  • ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಯ ತಾಮ್ರದ ಹೊದಿಕೆ ಕಳವು (Karkala: Copper roofing on the roof of Parashurama Theme Park building stolen)
- ಅಪರಾಧ

ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಯ ತಾಮ್ರದ ಹೊದಿಕೆ ಕಳವು (Karkala: Copper roofing on the roof of Parashurama Theme Park building stolen)

Share: ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಯ ತಾಮ್ರದ ಹೊದಿಕೆ ಕಳವು ಕಾರ್ಕಳ ಠಾಣೆಗೆ ದೂರು ನೀಡಿದ ಯೋಜನಾ ನಿರ್ದೇಶಕ ಅರುಣ್ ಕುಮಾರ್ (Karkala) ಕಾರ್ಕಳ: ಬೈಲೂರಿನ  ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಅಪಾರ ಪ್ರಮಾಣದ ತಾಮ್ರದ ಹೊದಿಕೆ ಕಳವಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕ ಅರುಣ್ ಕುಮಾರ್ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      ಕಳ್ಳರು ಯಾವುದೇ ಆಯುಧದಿಂದ ಪಾರ್ಕನ ಮುಖ್ಯ ದ್ವಾರದ  ಬಾಗಿಲನ್ನುಒಡೆದು […]

(Karkala) ಕಾರ್ಕಳ: ಬೈಲೂರಿನ  ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಅಪಾರ ಪ್ರಮಾಣದ ತಾಮ್ರದ ಹೊದಿಕೆ ಕಳವಾಗಿದ್ದು, ಉಡುಪಿ ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕ ಅರುಣ್ ಕುಮಾರ್ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     ಕಳ್ಳರು ಯಾವುದೇ ಆಯುಧದಿಂದ ಪಾರ್ಕನ ಮುಖ್ಯ ದ್ವಾರದ  ಬಾಗಿಲನ್ನುಒಡೆದು ಒಳ ಪ್ರವೇಶಿಸಿ ಮೇಲ್ಚಾವಣಿಯಲ್ಲಿದ್ದ ತಾಮ್ರದ ಹೊದಿಕೆ ಕಿತ್ತು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

    ಕಾರ್ಕಳ ನಗರ ಠಾಣೆಯ ಉಪನಿರೀಕ್ಷಕ ಶಿವಕುಮಾರ್ ಎಸ್ಆರ್ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರ ತಂಡ ಶ್ವಾನದಳ ತಂಡಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿವೆ. ಸ್ಥಳದಿಂದ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಕಟಣೆಯಲ್ಲಿ ತಿಳಿಸುತ್ತಾರೆ.

    ಘಟನೆಯನ್ನು ಶಾಸಕ ವಿ ಸುನಿಲ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಇದು ದ್ವೇಷದ ರಾಜಕಾರಣದ ಫಲವಾಗಿದ್ದು, ಕಾಂಗ್ರೆಸ್ ಸರಕಾರವು ಉದ್ದೇಶ ಪೂರ್ವಕವಾಗಿ ಅನುದಾನ ತಡೆಹಿಡಿದು ಯೋಜನೆಯನ್ನು ಪಾಳು ಬೀಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ.

  ಜಿಲ್ಲಾಡಳಿತ ವೈಫಲ್ಯದಿಂದಾಗಿ ಇಂದು ಕಳ್ಳರು ನುಗ್ಗಿ ಧ್ವಂಸ  ಮಾಡುವಂತಾಗಿದೆ. ಎಂದು ಅವರು ಆರೋಪಿಸಿದ್ದಾರೆ.

     ಆಕ್ರಮವಾಗಿ ಒಳ ನುಗ್ಗಿ ವಿಡಿಯೋ ಮಾಡಿದವರನ್ನು ಹಾಗೂ ಕಳ್ಳತನ ನಡೆಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.