• Home  
  • ಜ. 15: ಶೀರೂರು ಪರ್ಯಾಯ ಪ್ರಯುಕ್ತ ವಸ್ತು ಪ್ರದರ್ಶನ, ಮಾರಾಟ ಮೇಳ, ಅಮ್ಯುಸ್ಮೆಂಟ್ ಪಾರ್ಕ್ ಉದ್ಘಾಟನೆ (Jan. 15: Exhibition, sales fair, and amusement park inaugurated at Shiroor Paryaya)
- ಮನೋರಂಜನೆ

ಜ. 15: ಶೀರೂರು ಪರ್ಯಾಯ ಪ್ರಯುಕ್ತ ವಸ್ತು ಪ್ರದರ್ಶನ, ಮಾರಾಟ ಮೇಳ, ಅಮ್ಯುಸ್ಮೆಂಟ್ ಪಾರ್ಕ್ ಉದ್ಘಾಟನೆ (Jan. 15: Exhibition, sales fair, and amusement park inaugurated at Shiroor Paryaya)

Share: ಜ. 15: ಶೀರೂರು ಪರ್ಯಾಯ ಪ್ರಯುಕ್ತ ವಸ್ತು ಪ್ರದರ್ಶನ, ಮಾರಾಟ ಮೇಳ, ಅಮ್ಯುಸ್ಮೆಂಟ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಲಿರುವ ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು (Udupi) ಉಡುಪಿ: ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಉಗ್ರಾಣದ ಸಮೀಪದಲ್ಲಿ ಬೃಹತ್ ವಸ್ತು ಪ್ರದರ್ಶನ – ಮಾರಾಟ ಮೇಳ – ಅಮ್ಯುಸ್ಮೆಂಟ್ ಪಾರ್ಕನ್ನು ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಜನವರಿ 15ರಂದು ಸಂಜೆ 4:00 […]

(Udupi) ಉಡುಪಿ: ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಉಗ್ರಾಣದ ಸಮೀಪದಲ್ಲಿ ಬೃಹತ್ ವಸ್ತು ಪ್ರದರ್ಶನ – ಮಾರಾಟ ಮೇಳ – ಅಮ್ಯುಸ್ಮೆಂಟ್ ಪಾರ್ಕನ್ನು ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಜನವರಿ 15ರಂದು ಸಂಜೆ 4:00 ಗಂಟೆಗೆ ಉದ್ಘಾಟಿಸಲಿದ್ದಾರೆ.

   ಈ ಮೇಳದಲ್ಲಿ ಕೈಮಗ್ಗದ ಸೀರೆಗಳು, ಖಾದಿ ಬಟ್ಟೆಗಳು, ಕೃಷಿ, ಅಹಾರ, ಐಸದ ಕ್ರೀಂ, ಮಕ್ಕಳ ಆಟಿಕೆಗಳು, ಆಭರಣ, ನರ್ಸರಿ ಮುಂತಾದ ನೂರಾರು ವಿವಿಧ ಬಗೆಯ ಮಳಿಗೆಗಳಿವೆ.

   ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ ವಿಶೇಷ ಮನೋರಂಜನೆ ಆಟಗಳನ್ನು ಅಳವಡಿಸಲಾಗಿದೆ. ಬ್ರಹ್ಮಕುಮಾರಿ  ವಿಶ್ವವಿದ್ಯಾನಿಲಯದಿಂದ ವಿಶೇಷ ಚಿತ್ರ ಪ್ರದರ್ಶನ, ಮತ್ಸ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.

   ಊರ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,  ಶೀರೂರು ಪರ್ಯಾಯದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.