• Home  
  •  ಕೂಲಿ ಕಾರ್ಮಿಕೆ ಮಹಿಳೆಗೆ ಮೋಸ ; ಚಿನ್ನದ ಒಡವೆಯೆಂದು ನಂಬಿಸಿ ನಕಲಿ ಚಿನ್ನ ನೀಡಿ ಪರಾರಿ (Woman, a wage laborer, was cheated; she was given fake gold, believing it to be gold jewelry, and fled.)
- Crime

 ಕೂಲಿ ಕಾರ್ಮಿಕೆ ಮಹಿಳೆಗೆ ಮೋಸ ; ಚಿನ್ನದ ಒಡವೆಯೆಂದು ನಂಬಿಸಿ ನಕಲಿ ಚಿನ್ನ ನೀಡಿ ಪರಾರಿ (Woman, a wage laborer, was cheated; she was given fake gold, believing it to be gold jewelry, and fled.)

Share:   ಕೂಲಿ ಕಾರ್ಮಿಕೆ ಮಹಿಳೆಗೆ ಮೋಸ ; ಚಿನ್ನದ ಒಡವೆಯೆಂದು ನಂಬಿಸಿ ನಕಲಿ ಚಿನ್ನ ನೀಡಿ ಪರಾರಿ ವಿಜಯಪುರ ಮೂಲದ ಸರೂರು ಗ್ರಾಮದ ಮಾಂತೇಶ್‌ ರವರ ಪತ್ನಿ ಬಸಮ್ಮ ಮೋಸ ಹೋದ ಮಹಿಳೆ (Padubidri) ಪಡುಬಿದ್ರಿ : ಇಲ್ಲಿಯ ಠಾಣಾ ವ್ಯಾಪ್ತಿಯ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಓರ್ವ ಪುರುಷ ಮತ್ತು ಮಹಿಳೆ ಕೂಲಿ ಕಾರ್ಮಿಕೆ ಮಹಿಳೆಯೊಬ್ಬರಿಗೆ ಹೆಚ್ಚಿನ ಮೌಲ್ಯದ ಚಿನ್ನವೆಂದು ನಕಲಿ ಚಿನ್ನದ ಸರ ನೀಡಿ ಆಕೆಯಿಂದ 2 ಪವನ್ ಚಿನ್ನದ ಒಡವೆಗಳನ್ನು ಮತ್ತು […]

(Padubidri) ಪಡುಬಿದ್ರಿ : ಇಲ್ಲಿಯ ಠಾಣಾ ವ್ಯಾಪ್ತಿಯ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಓರ್ವ ಪುರುಷ ಮತ್ತು ಮಹಿಳೆ ಕೂಲಿ ಕಾರ್ಮಿಕೆ ಮಹಿಳೆಯೊಬ್ಬರಿಗೆ ಹೆಚ್ಚಿನ ಮೌಲ್ಯದ ಚಿನ್ನವೆಂದು ನಕಲಿ ಚಿನ್ನದ ಸರ ನೀಡಿ ಆಕೆಯಿಂದ 2 ಪವನ್ ಚಿನ್ನದ ಒಡವೆಗಳನ್ನು ಮತ್ತು ರೂ.6 ಸಾವಿರ ನಗದನ್ನು ದೋಚಿದ ಪ್ರಕರಣ ಮಂಗಳವಾರ ಸಂಜೆ ಘಟಿಸಿದೆ.

 ಘಟನೆಯ ವಿವರ : ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ವಾಸವಾಗಿರುವ ವಿಜಯಪುರ ಮೂಲದ ಸರೂರು ಗ್ರಾಮದ ಮಾಂತೇಶ್‌ ರವರ ಪತ್ನಿ ಬಸಮ್ಮರವರು ಕೂಲಿಕಾರ್ಮಿಕೆಯಾಗಿದ್ದು, ಪಡುಬಿದ್ರಿ ಹಳೆ ಆಂಚೆ ಕಚೇರಿ ಬಳಿ ಹೋಗುತ್ತಿದ್ದಾಗ ಓರ್ವ ಮಹಿಳೆ ಹಾಗೂ ಪುರುಷ ಬಸಮ್ಮರವರಿಗೆ ಕಪ್ಪು ದಾರದಲ್ಲಿ ಕಪ್ಪು ಮಣಿಗಳಿಂದ ಕೂಡಿದ ಮಧ್ಯದಲ್ಲಿ ತಾಳಿ ಇರುವ ಹಾಗೂ 9 ಲಕ್ಷ್ಮೀ ಪೆಂಟೆಂಟ್ ಇರುವ ಚಿನ್ನದಂತೆ ತೋರುವ ಸರವನ್ನು ತೋರಿಸಿ ಇದರಲ್ಲಿ ಇದರಲ್ಲಿ 6 ಪವನ್ ಚಿನ್ನ ಇದೆ, ಹಣದ ತುರ್ತು ಅವಶ್ಯಕತೆ ಇದೆ ಎಂದು ನಂಬಿಸಿ, ಬಸಮ್ಮನವರಿಗೆ ಅದನ್ನು ನೀಡಿ ಅವರಲ್ಲಿದ್ದ 2 ಪವನ್ ತೂಕದ ಸುಮಾರು 1 ಲಕ್ಷ 50 ಸಾವಿರ ಮೌಲ್ಯದ ಬಂಗಾರದ ಒಡವೆ ಸಹಿತ ರೂ.6 ಸಾವಿರ ಪಡೆದು ಪರಾರಿಯಾಗಿದ್ದಾರೆ.

  ಬಸಮ್ಮನವರು ತಾನು ಪಡೆದ ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಸಾಬೀತಾಗಿದೆ.

   ಬಸಮ್ಮನವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.