• Home  
  • ಪಡುಬಿದ್ರಿ ಬಂಟರ ಸಂಘದ ವತಿಯಿಂದ ರಕ್ಷಿತಾ ಶೆಟ್ಟಿಯವರಿಗೆ ಸನ್ಮಾನ (Padubidri Buntara Sangha felicitates Rakshita Shetty)
- ವಿಡಿಯೋ - ಸನ್ಮಾನ, ಅಭಿನಂದನೆ

ಪಡುಬಿದ್ರಿ ಬಂಟರ ಸಂಘದ ವತಿಯಿಂದ ರಕ್ಷಿತಾ ಶೆಟ್ಟಿಯವರಿಗೆ ಸನ್ಮಾನ (Padubidri Buntara Sangha felicitates Rakshita Shetty)

Share: ಪಡುಬಿದ್ರಿ ಬಂಟರ ಸಂಘದ ವತಿಯಿಂದ ರಕ್ಷಿತಾ ಶೆಟ್ಟಿಯವರಿಗೆ ಸನ್ಮಾನ    ಬಿಗ್‌ಬಾಸ್‌ ರಿಯಾಲಿಟಿ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್‌ ಪಡೆದ ಸ್ಪರ್ಧಿ ರಕ್ಷಿತಾ (Padubidri) ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕಲರ್ಸ್‌ ಕನ್ನಡ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಪ್ರಥಮ ರನ್ನರ್ ಆಪ್ ರಕ್ಷಿತ ಶೆಟ್ಟಿಯವರಿಗೆ ಸನ್ಮಾನ ಸಮಾರಂಭವು ಶನಿವಾರ ಸಂಜೆ ಸಂಘದ ಸಭಾಭವನದಲ್ಲಿ ಜರಗಿತು.    ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, […]

(Padubidri) ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವತಿಯಿಂದ ಕಲರ್ಸ್‌ ಕನ್ನಡ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ಪ್ರಥಮ ರನ್ನರ್ ಆಪ್ ರಕ್ಷಿತ ಶೆಟ್ಟಿಯವರಿಗೆ ಸನ್ಮಾನ ಸಮಾರಂಭವು ಶನಿವಾರ ಸಂಜೆ ಸಂಘದ ಸಭಾಭವನದಲ್ಲಿ ಜರಗಿತು.

   ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬಂಟ್ಸ್‌ ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷ ಡಾ. ವೈ ಎನ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. 

  ರಕ್ಷಿತಾ ಶೆಟ್ಟಿಯವರು ಬಿಗ್ ಬಾಸ್ ಮನೆಯಲ್ಲಿ ಇದ್ದ ನೆನಪುಗಳನ್ನು ಮೆಲುಕು ಹಾಕಿ, ಪದ್ಯವನ್ನೂ ಹಾಡಿ ಜನರನ್ನು ರಂಜಿಸಿದರು.

   ಈ ಸಂದರ್ಭ ಪಡುಬಿದ್ರಿ ಬಂಟರ ಸಂಘದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಪಲ್ಲವಿ, ಸಿರಿಮುಡಿ ದತ್ತಿನಿಧಿಯ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಸುಜಿತ್ ಶೆಟ್ಟಿ, ಮಹಿಳಾ ಘಟಕದ ಉಪಾಧ್ಯಕ್ಷೆ ಶಾಲಿನಿ ಶೆಟ್ಟಿ, ಬಂಟ್ಸ್‌ ವೆಲ್ಫೇರ್‌ ಟ್ರಸ್ಟ್‌ ಮಾಜಿ ಅಧ್ಯಕ್ಷ ಎರ್ಮಾಳು ಶಶಿಧರ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ ಹೆಗ್ಡೆ, ಸುರೇಶ್ ಶೆಟ್ಟಿ, ಕಾಪು ಬಂಟರ ಸಂಘದ ಮಹಿಳಾ ಘಟಕಾಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ರಕ್ಷಿತಾರವರ ತಂದೆ ರವೀಂದ್ರ ಶೆಟ್ಟಿ, ತಾಯಿ  ಹರಿಣಿ ಶೆಟ್ಟಿ, ಅಜ್ಜಿ ರತ್ನ ಶೆಟ್ಟಿ ಸಹೋದರಿ ಅಕ್ಷತಾ ಶೆಟ್ಟಿ ಉಪಸ್ಥಿತರಿದ್ದರು.

  ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮತ್ತು ವಿಧಿಶಾ ಹರೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ದೇವಿಪ್ರಸಾದ್ ಶೆಟ್ಟಿ  ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.