• Home  
  • ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೃಷ್ಣಮೂರ್ತಿ ಕವತ್ತಾರ್ ಆಯ್ಕೆ (Krishnamurthy Kawattar was elected as the President of Mulki Taluk Kannada Sahitya Sammelan
- fastival

ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೃಷ್ಣಮೂರ್ತಿ ಕವತ್ತಾರ್ ಆಯ್ಕೆ (Krishnamurthy Kawattar was elected as the President of Mulki Taluk Kannada Sahitya Sammelan

Share:  ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೃಷ್ಣಮೂರ್ತಿ ಕವತ್ತಾರ್ ಆಯ್ಕೆ   ಮಾ. 1ರಂದು ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ನಡೆಯಲಿದೆ ಸಾಹಿತ್ಯ ಸಮ್ಮೇಳನ (Mulki) ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ತಿಳಿಸಿದ್ದಾರೆ. […]

  ನಿನಾಸಂ ಸಂಸ್ಥೆಯಲ್ಲಿ ರಂಗಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಮೂನ್ನೂರಕ್ಕೂ ಹೆಚ್ಚು ತುಳು ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕ ಶಾಕುಂತಲ, ಶಸ್ತ್ರಪರ್ವ, ಹಯವದನ, ದರ್ಮೆತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ, ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥಾ ಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ.

   ಅನೇಕ ರಂಗಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯುವವನೇ ಚಿರಂಜೀವಿ ಏಕವ್ಯಕ್ತಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ನಾಡಿನ ಖ್ಯಾತ ನಟ, ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.

   ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಕುಕ್ಕೆ ಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು ಕಾಲೇಜುಗಳಲ್ಲಿ ರಂಗ ತರಬೇತಿ ನೀಡಿದ್ದು, ಮೂವತ್ತಕ್ಕೂ  ಹೆಚ್ಚು ಮಕ್ಕಳ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ.
   ಮನ್ವಂತರ, ಅಶ್ವಿನಿ ನಕ್ಷತ್ರ, ಗಾಂಧಾರಿ, ಪಲ್ಲವಿ ಅನುಪಲ್ಲವಿ, ನಾ ನಿನ್ನ ಬಿಡಲಾರೆ, ಭಾರತಿ ಹೀಗೆ ಇಪ್ಪತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬೇರು, ಆವೇಶದಂತಹ ಅನೇಕ ನಾಟಕಗಳನ್ನು ಆಕಾಶವಾಣಿಗೆ ಬರೆದು, ನಿರ್ದೇಶಿಸಿದ್ದಾರೆ. ಗೌಡ್ರ ಸೈಕಲ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಕರ್ನಾಟಕ ನಾಟಕ ಅಕಾಡಮಿ, ಶಂಕರ್‌ನಾಗ್ ಪ್ರಶಸ್ತಿ, ರಂಗನಿರಂತರ ಮೊದಲಾದ ಪ್ರಶಸ್ತಿಗಳಿಂದ ಅಲಂಕೃತರು, ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯರಾಗಿದ್ದರು. ಇವರ ರಂಗಭೂಮಿ ಕುರಿತಾದ ಕೃತಿಯನ್ನು ಡಾ. ಪದ್ಮನಿ ನಾಗರಾಜ್ ರಚಿಸಿದ್ದಾರೆ.

  ಮಾರ್ಚ್ 1 ರ ಭಾನುವಾರ ಕಟೀಲಿನ ನಂದಿನಿ ನದಿಯ ಕುದ್ರುವಿನಲ್ಲಿ ದೇಗುಲದ ಸಹಕಾರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಡಾ. ಎಂ. ಪಿ. ಶ್ರೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.