• Home  
  • ಮಲ್ಪೆ ಬಳಿಯ ಕೋಡಿ ಬೇಂಗ್ರೆ ಬೀಚ್‌ ಬಳಿ ದೋಣ ದುರಂತ : ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ (Boat accident near Kodi Bengre Beach near Malpe: Two dead, two in critical condition)
- ಅಪಘಾತ

ಮಲ್ಪೆ ಬಳಿಯ ಕೋಡಿ ಬೇಂಗ್ರೆ ಬೀಚ್‌ ಬಳಿ ದೋಣ ದುರಂತ : ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ (Boat accident near Kodi Bengre Beach near Malpe: Two dead, two in critical condition)

Share: ಮಲ್ಪೆ ಬಳಿಯ ಕೋಡಿ ಬೇಂಗ್ರೆ ಬೀಚ್‌ ಬಳಿ ದೋಣ ದುರಂತ : ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ ಮೃತರು ಮೈಸೂರು ಮೂಲದ ಶಂಕರಪ್ಪ (22) ಹಾಗೂ ಸಿಂಧು(23)     (Malpe) ಮಲ್ಪೆ, ಜ.26: ಕೋಡಿಬೆಂಗ್ರೆ ಬೀಚ್ ಬಳಿ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಸೋಮವಾರ ಮದ್ಯಾಹ್ನ ಸಂಭವಿಸಿದೆ.  ಮೃತರನ್ನು ಶಂಕರಪ್ಪ(22) ಹಾಗೂ ಸಿಂಧು(23) ಎಂದು ಗುರುತಿಸಲಾಗಿದೆ. ದೀಶಾ(26) ಎಂಬವರು ಸ್ಥಿತಿ ಗಂಭೀರವಾಗಿದ್ದು, ಧರ್ಮರಾಜ(26) ಎಂಬವರ ಸ್ಥಿತಿ […]

  (Malpe) ಮಲ್ಪೆ, ಜ.26: ಕೋಡಿಬೆಂಗ್ರೆ ಬೀಚ್ ಬಳಿ ಮಧ್ಯಾಹ್ನ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಸೋಮವಾರ ಮದ್ಯಾಹ್ನ ಸಂಭವಿಸಿದೆ.
  ಮೃತರನ್ನು ಶಂಕರಪ್ಪ(22) ಹಾಗೂ ಸಿಂಧು(23) ಎಂದು ಗುರುತಿಸಲಾಗಿದೆ. ದೀಶಾ(26) ಎಂಬವರು ಸ್ಥಿತಿ ಗಂಭೀರವಾಗಿದ್ದು, ಧರ್ಮರಾಜ(26) ಎಂಬವರ ಸ್ಥಿತಿ ಸ್ಥಿರವಾಗಿದೆ.

   ಇವರು ಮೈಸೂರು ಜಿಲ್ಲೆಯ ಸರಸ್ವತೀಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
  ಒಟ್ಟು 14 ಮಂದಿಯ ತಂಡ ಉಡುಪಿಗೆ ಪ್ರವಾಸಕ್ಕೆ ಆಗಮಿಸಿದ್ದು, ಇವರು ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿ ಸಮುದ್ರದಲ್ಲಿ ವಿಹಾರಕ್ಕೆ ಹೊರಟಿದ್ದರು. ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಸಮೀಪ ನದಿ -ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಅಕಸ್ಮಿಕವಾಗಿ ಪಲ್ಟಿಯಾಗಿದೆ.
  ದೋಣಿ 14 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲೂರು ಸಮುದ್ರಕ್ಕೆ ಬಿದ್ದಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಲೈಫ್‌ಜಾಕೆಟ್ ಧರಿಸಿದ್ದರೆನ್ನಲಾಗಿದೆ.

   ಕೂಡಲೇ ಇತರ ದೋಣಿಯವರು ನೀರಿಗೆ ಬಿದ್ದವರನ್ನು ರಕ್ಷಿಸಿ ತೀರಕ್ಕೆ ಕರೆದುಕೊಂಡು ಬಂದಿದ್ದು, ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಇವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
 
 
 

Leave a comment

Your email address will not be published. Required fields are marked *

eMedia Kannada  @2025. All Rights Reserved.