ಪಡುಬಿದ್ರಿ ಯುವವಾಹಿನಿಯಿಂದ ಬಿಲ್ಲವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಗೆ ಚಾಲನೆ
ಅಂತಾರಾಷ್ಟ್ರೀಯ ಕ್ರೀಡಾಪಟು ರಕ್ಷಾ ಪೂಜಾರಿಯವರಿಂದ ಕ್ರೀಡಾಕೂಟಕ್ಕೆ ಚಾಲನೆ
(Kaup) ಕಾಪು : ಯುವವಾಹಿನಿ ಪಡುಬಿದ್ರಿ ಘಟಕದ ಆಯೋಜನೆಯಲ್ಲಿ ಶನಿವಾರ ಹೆಜಮಾಡಿಯ ಬಸ್ತಿಪಡ್ಡು ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ ಬಿಲ್ಲವ ಪ್ರೀಮಿಯರ್ ಲೀಗ್-2026 ಮಹಿಳಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟು ರಕ್ಷಾ ಪೂಜಾರಿ ರೆಂಜಾಳರವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಭಾರತ್ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣರವರು ಟ್ರೋಫಿ ಅನಾವರಣಗೊಳಿಸಿ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ರಕ್ಷಾ ಪೂಜಾರಿಯವರನ್ನು ಯುವವಾಹಿನಿ ಪಡುಬಿದ್ರಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಾ ಮೆಂಡನ್, ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶರತ್ ಶೆಟ್ಟಿ, ಉದಯ ಪೂಜಾರಿ ಕಟಪಾಡಿ, ದಯಾನಂದ ಹೆಜ್ಮಾಡಿ, ಮನೋಜ್ ಕೆ ಸುವರ್ಣ, ಲಕ್ಷ್ಮಣ್ ಪೂಜಾರಿ, ಸೀನ ಪೂಜಾರಿ, ಭಾಸ್ಕರ್ ಕೆ ಅಂಚನ್, ಶ್ರವಣ್ ಕುಮಾರ್, ಮಮತಾ ಅಂಚನ್, ಪವಿತ್ರಾ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ದುಬೈ, ಕುವೈಟ್ 2, ಬೆಂಗಳೂರು, ಕೊಲ್ಯ, ಕಾರ್ಕಳ, ಪಡುಬಿದ್ರಿ ಮತ್ತು ಹೆಜಮಾಡಿಯ ಆಯ್ದ 8 ಮಹಿಳಾ ತಂಡಗಳು ಭಾಗವಹಿಸಿದ್ದು, ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿಯ ಪ್ರತಿಯೊಂದು ತಂಡದಲ್ಲೂ ಇತರ ಸಮಾಜದ ಐವರು ಮಹಿಳಾ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಮಹಿಳಾ ಕ್ರಿಕೆಟ್ ಪ್ರತಿಭೆಗಳಿಗೆ ಮುನ್ನೆಲೆಗೆ ಬರಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಲೀಗ್ ಮಾದರಿಯಲ್ಲಿ ತಲಾ 6 ಓವರ್ ಗಳ ಪಂದ್ಯ ನಡೆಯಲಿದ್ದು, ವಿಜೇತರಿಗೆ ಪ್ರಥಮ ಪ್ರಶಸ್ತಿ ಸಹಿತ ನಗದು 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ. ಜತೆಗೆ ಸರಣಿ ಶ್ರೇಷ್ಠರಿಗೆ ನಗದು 20 ಸಾವಿರ, ಅತ್ಯುತ್ತಮ ಬ್ಯಾಟರ್ ನಗದು 10 ಸಾವಿರ ರೂ., ಅತ್ಯುತ್ತಮ ಬೌಲರ್ ನಗದು 10 ಸಾವಿರ ವೈಯಕ್ತಿಕ ಬಹುಮಾನಗಳಿವೆ.

