• Home  
  • ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ (38th Anniversary of the Karkada Friends Association)
- ಸಂಘ, ಸಂಸ್ಥೆಗಳು

ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ (38th Anniversary of the Karkada Friends Association)

Share: ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ  ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು.    (Udupi) ಉಡುಪಿ: ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ , ವಿಕಲಚೇತನ ಸಹಾಯ ನಿಧಿ ವಿತರಣೆ , ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪ ದಲ್ಲಿ ನೆರವೇರಿತು.  ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. […]

   (Udupi) ಉಡುಪಿ: ಕಾರ್ಕಡ ಗೆಳೆಯರ ಬಳಗದ 38 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ , ವಿಕಲಚೇತನ ಸಹಾಯ ನಿಧಿ ವಿತರಣೆ , ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪ ದಲ್ಲಿ ನೆರವೇರಿತು.

 ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು.

 ಈ ಸಂದರ್ಭ ಯಕ್ಷಗಾನ ಕಲಾವಿದ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ ಬಂಗೇರ, ವಿವೇಕ ಬಾಲಕಿಯರ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಜಗದೀಶ ಹೊಳ್ಳ, ನ್ಯೂ ಕಾರ್ಕಡ ಶಾಲಾ ಮುಖ್ಯೋಧ್ಯಾಯರಾದ ಎನ್. ಪ್ರ್ರಭಾಕರ ಕಾಮತ್, ನಿವೃತ್ತ ಅಧ್ಯಾಪಕರಾದ ಕೆ. ನಾರಾಯಣ ಆಚಾರ್ಯ, ಹವ್ಯಾಸಿ ಯಕ್ಷಗಾನ ಕಲಾವಿದರಾಗದ ಕೆ. ಐತ  ಮತ್ತು ಅಶಕ್ತ ಹಾಗೂ ವಿಕಲ ಚೇತನ ಸಹಾಯ ನಿಧಿ ಮಹಾ  ಪೋಷಕರಾದ ವಿಘ್ನರಾಜ ಭಟ್ಟ ಇವರುಗಳಿಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು.

    ಹೊಸ ಬದುಕು ಆಶ್ರಮಕ್ಕೆ ನೀಡಿದ ಧನ ಸಹಾಯ ಪರಿಕರವನ್ನು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿಯವರು ಆಶ್ರಮದ ರುವಾರಿ ವಿನಯ ಚಂದ್ರರವರಿಗೆ ಹಸ್ತಾಂತರಿಸಿದರು.

  ಬಳಗದ ವಿದ್ಯಾನಿಧಿ ದತ್ತಿ ನಿಧಿಯನ್ನು ಎಚ್ ನಾಗರಾಜ ಹಂದೆ ವಿತರಿಸಿ ಬಳಗದ 38 ವರ್ಷದ ಸಾಧನೆಯನ್ನು ಶ್ಲಾಘಿಸಿದರು.

  ಅಶಕ್ತರ ಸಹಾಯ ನಿಧಿಯನ್ನು  ಪಿ. ಸದಾಶಿವ ಮಧ್ಯಸ್ಥರು  ಹಾಗೂ ರಾಜು ಪೂಜಾರಿಯವರು 8 ಜನರಿಗೆ ವಿತರಿಸಿದರು.

 ವಿಕಲಚೇತನ ರ ಸಹಾಯ ನಿಧಿಯನ್ನು ಉಡುಪಿ ಜಿಲ್ಲಾ ಕ ಸಾ ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ವಿತರಿಸಿದರು.

ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಸ್ವಾಗತಿಸಿದರು.   ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಸಭಾ ಕಾರ್ಯಕ್ರಮ ಮತ್ತು ಕೆ. ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

  ಸ್ಥಳೀಯ ಅಂಗನವಾಡಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತುನೃತ್ಯ ವೈವಿದ್ಯ ಹಾಗೂ ಕಲಾ ಚಂದನ, ಬೀಜಾಡಿ, ಹವ್ಯಾಸಿ ತಂಡದವರ “ನೆಮ್ಮದಿಗಾಗಿ ಬದಲಾಗಿ” ಹಾಸ್ಯಮಯ ನಗೆ ನಾಟಕ  ಜನಮನ ರಂಜಿಸಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.