• Home  
  • ಫೆ.28 ಕ್ಕೆ ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ (Yermal Tenka-Bada Jodukare Kambala on Feb. 28)
- ಕ್ರೀಡೆ

ಫೆ.28 ಕ್ಕೆ ಎರ್ಮಾಳು ತೆಂಕ-ಬಡಾ ಜೋಡುಕರೆ ಕಂಬಳ (Yermal Tenka-Bada Jodukare Kambala on Feb. 28)

Share: ಫೆ.28 ಕ್ಕೆ ಎರ್ಮಾಳು ತೆಂಕ–ಬಡಾ ಜೋಡುಕರೆ ಕಂಬಳ  ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆ  (Yermal) ಎರ್ಮಾಳು: ಎರ್ಮಾಳಿನಲ್ಲಿ ಫೆ. 28 ರಂದು ನಿಗದಿ ಪಡಿಸಲಾದ ತೆಂಕ – ಬಡಾ ಜೋಡುಕರೆ ಕಂಬಳಕ್ಕಾಗಿ ಬಹಳಷ್ಟು ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದ್ದು, ಎರ್ಮಾಳು ರೋಹಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿರುವ ಕಂಬಳೋತ್ಸವದ  ಪೂರ್ವಬಾವಿ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಹೆಚ್ಚಿನ‌ ಮಹಿಳಾ ಮಂಡಳಿಗಳ‌ ಸದಸ್ಯರು ಭಾಗವಹಿಸಿದ್ದರು.     ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳದ […]

 ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆ

 (Yermal) ಎರ್ಮಾಳು: ಎರ್ಮಾಳಿನಲ್ಲಿ ಫೆ. 28 ರಂದು ನಿಗದಿ ಪಡಿಸಲಾದ ತೆಂಕ – ಬಡಾ ಜೋಡುಕರೆ ಕಂಬಳಕ್ಕಾಗಿ ಬಹಳಷ್ಟು ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದ್ದು, ಎರ್ಮಾಳು ರೋಹಿತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿರುವ ಕಂಬಳೋತ್ಸವದ  ಪೂರ್ವಬಾವಿ ಸಭೆ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಹೆಚ್ಚಿನ‌ ಮಹಿಳಾ ಮಂಡಳಿಗಳ‌ ಸದಸ್ಯರು ಭಾಗವಹಿಸಿದ್ದರು.   

 ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳದ ರೂವಾರಿಯೂ ಕಂಬಳ ಸಮಿತಿಯ ಅಧ್ಯಕ್ಷರೂ ಆದ ಎರ್ಮಾಳು ರೋಹಿತ್ ಹೆಗ್ಡೆ, ಗ್ರಾಮದ ಜಾತಿ ಧರ್ಮಗಳೆಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ನಡೆಸುವ ಈ ಕಂಬಳ ಯಶಸ್ವಿಗೆ ನಾವು ಎಲ್ಲರೊಂದಾಗಿ ಹಲವು ತಿಂಗಳುಗಳಿಂದ ಶ್ರಮಿಸುತ್ತಿದ್ದೇವೆ. ಈ ಪ್ರದೇಶದ ಸುತ್ತಲೂ ದೈವ ದೇವರುಗಳು ನೆಲೆ ನಿಂತಿದ್ದಾರೆ.

  ನಾವು ದಾಖಲೆಯ ಎಲ್ಲೂ ಇಲ್ಲದ 151ಮೀಟರ್ ಉದ್ದದ ಕರೆ ನಿರ್ಮಾಣ ಮಾಡಿದ್ದೇವೆ. ಫೆ. 28 ರ ಬೆಳಗ್ಗೆ 8-30ಕ್ಕೆ ಗ್ರಾಮ ದೇಗುಲವಾದ ಶ್ರೀ ಲಕ್ಷ್ಮೀ ಜನಾರ್ದನ ದೇವಳದಿಂದ ಕ್ರೀಡಾ ಜ್ಯೋತಿ ತಂದು ಬಹಳ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ.

 ಆರಂಭದ ದಿನ ಪುಚೊಟ್ಟು ಬೀಡು ಸೀತಾರಾಮ ಶೆಟ್ಟಿ ಕುಟುಂಬಿಕರಿಂದ  ಸುಮಾರು ಐದು ಸಾವಿರ ಮಂದಿಗೆ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

  ದೇಶ ವಿದೇಶಗಳಲ್ಲೂ ಈ ಎರ್ಮಾಳು ಕಂಬಳದ ಸಮಿತಿ ರಚಿಸಿ ಕಂಬಳಕ್ಕೆ ಸಹಕಾರ ನೀಡುತ್ತಿರುವುದು ಕಂಬಳದ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತಿದೆ.

  ಈಗಾಗಲೇ ಬೈಂದೂರಿನಿಂದ ಪುತ್ತೂರಿನವರೆಗಿನ ಎಲ್ಲಾ ಕಂಬಳ ಕೋಣಗಳ ಯಜಮಾನರಲ್ಲಿ ತಮ್ಮ ಕೋಣಗಳನ್ನು ತಂದು ಕಂಬಳ ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ‌ ಎಂದು ಹೇಳಿದ ರೋಹಿತ್ ಹೆಗ್ಡೆ, ಮಾಧ್ಯಮ‌ ಮಿತ್ರರು ಇನ್ನೂ‌ ಹೆಚ್ಚಿನ ಸಹಕಾರ ನೀಡಿವಂತೆ ಮನವಿ ‌ಮಾಡಿದರು.

  ಈ ಸಂದರ್ಭ ಪುಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಎರ್ಮಾಳು ಕಿಶೋರ್ ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳು, ಸದಾನಂದ ಶೆಟ್ಟಿ ಪುಚೊಟ್ಟು, ಕಿಶೋರ್ ಗಣೇಶ್ ಶೆಟ್ಟಿ ಬರ್ಪಾಣಿ, ಎಲ್ಲದಡಿ ಶಿವಪ್ರಸಾದ್ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ, ವಿನಯ ಶೆಟ್ಟಿ, ಜ್ಯೋತಿ ಶೆಟ್ಟಿ, ಕರ್ಣ ಪ್ರಭಾಕರ್ ಹೆಗ್ಡೆ, ಸದಾನಂದ ನಾಯಗರು, ಮಾಧವ ಆಚಾರ್ಯ, ಲಕ್ಷ್ಮಣ್ ಶೆಟ್ಟಿ, ಸತೀಶ್ ಆಚಾರ್ಯ, ಸಂತೋಷ್ ಶೆಟ್ಟಿ ಕುಂಜೂರು, ಹೇಮ ಶೆಟ್ಟಿ, ರೇಖಾ ಶೆಟ್ಟಿ, ಶಶಿಕಲಾ ನವೀನ್, ಯಶೋಧ, ದಿವಾಕರ್, ಮಮತಾ ಪೂಜಾರಿ, ಜ್ಯೋತಿ ಪೂಜಾರಿ, ಅಮೃತ ಕಲಾ, ವಸಂತ ಶೆಟ್ಟಿ, ಶ್ರೀಧರ ಬಂಗೇರ, ಸಂದೀಪ್ ಶೆಟ್ಟಿ, ಶ್ರೀನಿವಾಸ್‌ ಪೂಜಾರಿ, ರತ್ನಾಕರ್ ಕೋಟ್ಯಾನ್, ಮುರಳಿಧರ ಮಂಜಿತ್ತಾಯ, ಸುಕುಮಾರ್ ಉಚ್ಚಿಲ, ಗಿರೀಶ್ ಎರ್ಮಾಳು ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.