• Home  
  • ನೇತ್ರ ಜ್ಯೋತಿ ಕಾಲೇಜಿನಲ್ಲಿ ವಸ್ತ್ರ ಸಂಗ್ರಹ ಅಭಿಯಾನ ಕಾರ್ಯಕ್ರಮ (Clothing collection campaign program at Netra Jyoti College)
- social service

ನೇತ್ರ ಜ್ಯೋತಿ ಕಾಲೇಜಿನಲ್ಲಿ ವಸ್ತ್ರ ಸಂಗ್ರಹ ಅಭಿಯಾನ ಕಾರ್ಯಕ್ರಮ (Clothing collection campaign program at Netra Jyoti College)

Share: ನೇತ್ರ ಜ್ಯೋತಿ ಕಾಲೇಜಿನಲ್ಲಿ ವಸ್ತ್ರ ಸಂಗ್ರಹ ಅಭಿಯಾನ ಕಾರ್ಯಕ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನೇತ್ರ ಜ್ಯೋತಿ ಕಾಲೇಜು ಸಂಸ್ಥಾಪಕ ಡಾ. ಕೃಷ್ಣಪ್ರಸಾದ್ ಕೂಡ್ಲು (Udupi) ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಉಡುಪಿ, ರಾಮ ಕ್ಷತ್ರಿಯ ಸಂಘ ಉಡುಪಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ದಂತ ವೈದ್ಯರ ಸಂಘ ಉಡುಪಿ ಸಹಯೋಗದೊಂದಿಗೆ ವಸ್ತ್ರ ಸಂಗ್ರಹ ಅಭಿಯಾನ ಕಾರ್ಯಕ್ರಮ ನಡೆಯಿತು.    ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನೇತ್ರ ಜ್ಯೋತಿ […]

(Udupi) ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ನೇತ್ರ ಜ್ಯೋತಿ ಚಾರಿಟಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಉಡುಪಿ, ರಾಮ ಕ್ಷತ್ರಿಯ ಸಂಘ ಉಡುಪಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ದಂತ ವೈದ್ಯರ ಸಂಘ ಉಡುಪಿ ಸಹಯೋಗದೊಂದಿಗೆ ವಸ್ತ್ರ ಸಂಗ್ರಹ ಅಭಿಯಾನ ಕಾರ್ಯಕ್ರಮ ನಡೆಯಿತು.

   ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್‌, ನಾವು ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಈ ರೀತಿಯ ಕಾರ್ಯ ಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಮಾನಸ ರವರು, ಇದೊಂದು ಒಳ್ಳೆಯ ಕಾರ್ಯಕ್ರಮ. ವೈದ್ಯರಾಗಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಕೈಜೋಡಿಸುವುದು ಸಂತೋಷವಾಗುತ್ತದೆ. ನಮ್ಮ ಕಡೆಯಿಂದ ಹೆಚ್ಚು ವಸ್ತ್ರಗಳನ್ನು ಸಂಗ್ರಹಿಸಿ ಕೊಡುತ್ತೇವೆ ಎಂದರು.

 ಉಡುಪಿ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ. ಪಾಯಶ್ ಅಹ್ಮದ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಜನರಲ್ಲಿ ಸಹಕಾರದ ಮನೋಭಾವನೆಯನ್ನು ಬೆಳೆಸುತ್ತದೆ ಎಂದರು.

  ರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆಯವರು ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಸೇರಿ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸಂತೋಷ ತಂದಿದೆ ಎಂದರು.

  ರಾಮ ಕ್ಷತ್ರಿಯ ಯುವ ಸಂಘದ ಅಧ್ಯಕ್ಷ ಸತೀಶ್ಚಂದ್ರ ಅವರು ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ಜನರ ಹೃದಯಕ್ಕೆ ಮುಟ್ಟುವಂತಂದು. ಇದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೇತ್ರ ಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ  ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ನಾವು ಸಂಗ್ರಹಿಸಿದ ವಸ್ತ್ರಗಳನ್ನು ನಮ್ಮ ಜಿಲ್ಲೆಯ ನಿರ್ಗತಿಕರಿಗೆ, ಅನಾಥರಿಗೆ ನೀಡುವುದಲ್ಲದೆ ಬೇರೆ ಜಿಲ್ಲೆಯ ಜನರಿಗೂ ನೀಡುವಂತಾಗಬೇಕು ಎಂದರು.

   ವೇದಿಕೆಯಲ್ಲಿ ರಾಮ ಕ್ಷತ್ರಿಯ ಯುವ ಘಟಕ ಉಡುಪಿ ಇದರ ಅಧ್ಯಕ್ಷ ಬ್ರಿಜೇಶ್, ನೇತ್ರ ಜ್ಯೋತಿ ಕಾಲೇಜಿನ ಸಿಓಓ ಡಾ. ಗೌರಿ ಪ್ರಭು ಉಪಸ್ಥಿತರಿದ್ದರು.

   ಉಪನ್ಯಾಸಕಿ ಅಶೆಲ್ ರಕ್ಷಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ವೈಷ್ಣವಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.