ಇಂದು ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷಾರಂಭ
ಅದಮಾರು ಪಿಪಿಸಿ ವಿದ್ಯಾ ಸಂಸ್ಥೆಯಲ್ಲಿ 235 ವಿದ್ಯಾರ್ಥಿಗಳಿಂದ ಭವಿಷ್ಯ ನಿರ್ಧಾರ
(Adamaru) ಅದಮಾರು : ಅದಮಾರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯಲ್ಲಿ 235 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಅದಮಾರು ಪಿಪಿಸಿ, ತೆಂಕ ಎರ್ಮಾಳಿನ ಕಿನಾರ ಶಾಲೆ, ಸರಕಾರಿ ಸಂಯುಕ್ತ ಶಾಲೆ, ಬಡಾ ವಿದ್ಯಾ ಪ್ರಬೋಧಿನಿ ಶಾಲೆ, ಪಡುಬಿದ್ರಿಯ ಲಯನ್ಸ್ ಶಾಲೆ ಹಾಗೂ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸಲಿದ್ದಾರೆ
235 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈಗಾಗಲೇ ಪರೀಕ್ಷೆಗಗಿ 10 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 10 ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಶಾಲೆಯ ಆವರಣ ಸಹಿತ ಪರೀಕ್ಷೆ ನಡೆಯುವ 10 ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾದ ಕಣ್ಗಾವಲಿದೆ. ವಿದ್ಯಾರ್ಥಿಗಳಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸೆಕೆ ನಿಯಂತ್ರಣಕ್ಕಾಗಿ ಎಲ್ಲಾ ಕೋಣೆಗಳಲ್ಲಿ ಫ್ಯಾನ್ ಅಳವಡಿಸಲಾಗಿದೆ. ಎಂದು ಶಾಲಾ ಮುಖ್ಯಸ್ಥ ಶ್ರೀಕಾಂತ್ ರಾವ್ ರವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

