ಅದಮಾರು: ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಟೈಲರಿಂಗ್ ತರಬೇತಿಯ ಸಮಾರೋಪ
ಅದಮಾರು ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮ
(Adamaru) ಅದಮಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜನೆಯ ನಡೆದ ಮೂರು ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪಕಾರ್ಯಕ್ರಮ ಅದಮಾರು ಸಮಾಜ ಮಂದಿರದಲ್ಲಿ ಭಾನುವಾರ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿಯವರು ಪ್ರಮಾಣ ಪತ್ರ ವಿತರಿಸಿ, ತರಬೇತಿ ಪಡೆದವರಿಗೆ ಶುಭ ಹಾರೈಸಿದರು.
ತರಬೇತಿ ನೀಡುವ ಶಿಕ್ಷಕಿಗೆ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಟೀಚರ್ ಸಂಭಾವನೆ ನೀಡಲಾಗುವುದು.
ಮೂರು ತಿಂಗಳಲ್ಲಿ ಉಚಿತ ಟೈಲರಿಂಗ್ ತರಬೇತಿಯನ್ನು ಶಿಕ್ಷಕಿ ಶ್ರೀಮತಿ ಅರುಂಧತಿಯವರು ನೀಡಿದ್ದಾರೆ.
ಈ ಸಂದರ್ಭ ಮುದರಂಗಡಿ ಪ್ರೌಡ ಶಾಲಾ ಶಿಕ್ಷಕಿ ಶ್ರೀಮತಿ ಶಕೀಲಾ, ಸೇವಾ ಪ್ರತಿನಿಧಿ ಪಾರ್ವತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸರಿತ, ಜ್ಞಾನ ವಿಕಾಸದ ಸದಸ್ಯರು ಹಾಗೂ ತರಬೇತಿ ಪಡೆದ ಮಹಿಳೆಯರು ಉಪಸ್ಥಿತರಿದ್ದರು.

