ಹೆಜಮಾಡಿ : ಟಯರ್ ಪಂಕ್ಚರ್ ಅಂಗಡಿಯಲ್ಲಿ ಆಕಸ್ಮಿಕ ಅವಘಡ
ಬೆಂಕಿ ನಂದಿಸಲು ಟೋಲ್ ಸಿಬ್ಬಂದಿ, ಸ್ಥಳೀಯರಿಂದ ಹರಸಾಹಸ
(Hejamady) ಹೆಜಮಾಡಿ : ಹೆಜಮಾಡಿ ಟೋಲ್ ಬಳಿ ಟಯರ್ ಪಂಕ್ಚರ್ ಅಂಗಡಿಯಲ್ಲಿ ಬೆಂಕಿ ಅವಘಡ ಘಟನೆ ಘಟಿಸಿದ್ದು, ಅಂಗಡಿಯೊಘಗಿದ್ದ ಲಕ್ಷಾಂತರ ಮೌಲ್ಯದ ಟಯರ್ ಭಸ್ಮವಾದ ಘಟನೆ ಭಾನುವಾರ ಸಂಜೆ ಘಟಿಸಿದೆ.
ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಪರಿಸರದ ತುಂಬಾ ಹೊಗೆ ಆವರಿಸುತ್ತಿದ್ದಂತೆ ಸ್ಥಳೀಯರು ಹಾಗೂ ಟೋಲ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಹರ ಸಾಹಸ ಪಟ್ಟರು.
ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ಹತೋಟಿಗೆ ತಂದು, ಹತ್ತಿರದ ಅಂಗಡಿ ಮುಂಗಟ್ಟಿಗೆ ಬೆಂಕಿ ತಗಲುವುದನ್ನು ತಡೆಗಟ್ಟಲಾಯಿತು.
ಅಂಗಡಿ ಬಳಿಯಿದ್ದ ಮರಗಿಡಗಳು, ಶೇಖರಿಸಿಟ್ಟಿದ್ದ ಟಯರ್ ಸಹಿತ ಅಂಗಡಿಯೊಳಗಿದ್ದ ಸಾಮಾನುಗಳು ಬೆಂಕಿಗಾಹುತಿಯಾಗಿದೆ.
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

