• Home  
  • ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ (Indian Saree Fair inaugurated at Sri Kamakshi Temple hall)
- ವ್ಯವಹಾರ

ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ (Indian Saree Fair inaugurated at Sri Kamakshi Temple hall)

Share: ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಭಾರತೀಯ ಸೀರೆ ಮೇಳ ಉದ್ಘಾಟನೆ  ಶ್ರೀ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಉತ್ಸವ, ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ಸೀರೆ ಮೇಳ (Udupi) ಉಡುಪಿ: ಸೀರೆಗಳ ಮಾತೆ ಶ್ರೀ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವ ಮತ್ತು ನೇಕಾರರ ಮೂಲಪುರುಷ ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಭಾರತೀಯ ಸೀರೆ ಮೇಳವನ್ನು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಗೀತಾ ಕೇಶವ ಶೆಟ್ಟಿಗಾರ್ ಉದ್ಘಾಟಿಸಿದರು.    ಭಾರತೀಯ ಸೀರೆ ಮೇಳದಲ್ಲಿ ಕರ್ನಾಟಕದ […]

(Udupi) ಉಡುಪಿ: ಸೀರೆಗಳ ಮಾತೆ ಶ್ರೀ ಕಾಮಾಕ್ಷಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವ ಮತ್ತು ನೇಕಾರರ ಮೂಲಪುರುಷ ಜೇಡರ ದಾಸಿಮಯ್ಯ ಜಯಂತಿಯ ಪ್ರಯುಕ್ತ ನಡೆಯುತ್ತಿರುವ ಭಾರತೀಯ ಸೀರೆ ಮೇಳವನ್ನು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು ಗೀತಾ ಕೇಶವ ಶೆಟ್ಟಿಗಾರ್ ಉದ್ಘಾಟಿಸಿದರು.

   ಭಾರತೀಯ ಸೀರೆ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಹಾಗೂ ದೇಶದ ವಿವಿಧ ರಾಜ್ಯಗಳ ಸೀರೆಗಳು ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿದೆ. ಜೊತೆಗೆ ಹಳೆ ಜರಿ ಸೀರೆ ಖರೀದಿ ಮಳಿಗೆ, ಖಾದಿ, ಶೃಂಗಾರ ಸಾಧನಗಳು, ಆಯುರ್ವೇದ, ಗಿಡಮೂಲಿಕೆ ಉತ್ಪನ್ನಗಳು, ಚನ್ನಪಟ್ಟಣ ಆಟಿಕೆ, ಪುಸ್ತಕಗಳು, ಡ್ರೈ ಫ್ರೂಟ್ಸ್ ಸಿಹಿತಿಂಡಿ, ಐಸ್ ಕ್ರೀಮ್ ಮತ್ತಿತರ ಮಳಿಗೆಗಳು ಇವೆ.

  ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಮಾಕ್ಷಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜನಾರ್ದನ್ ಶೆಟ್ಟಿಗಾರ್, ನಾಗಬನದ ಅಧ್ಯಕ್ಷರಾದ ರಮೇಶ ಆಚಾರ್ಯ, ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿ, ಇಂದ್ರಾಣಿ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಸಂತಿ ನಾಯಕ್ ಗುಳ್ಮೆ, ಉಡುಪಿ ನೇಕಾರ ಸಂಘದ ನಿರ್ದೇಶಕರಾದ ಕೇಶವ ಶೆಟ್ಟಿಗಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಂದ್ರಕಲಾ ಸುರೇಶ್, ಸಂಸ್ಕೃತಿ ಇವೆಂಟ್ಸ್ ನ ಮಹಾವೀರ ಜೈನ್, ದಿವಾಕರ್ ಶೆಟ್ಟಿ, ನೇಕಾರರಾದ ಜಯಕರ್ ಶೆಟ್ಟಿಗಾರ್, ಜಯಲಕ್ಷ್ಮಿ, ಪ್ರತಿಮಾ ಮುಂತಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.