• Home  
  • ಎ.12-19 ಮೂಡಬಿದ್ರಿ ಆಳ್ವಾಸ್ “ಚಿಣ್ಣರಮೇಳ” (A.12-19 Moodabidri Alwas “Chinnaramela”)
- ಶಾಲಾ ಕಾಲೇಜು

ಎ.12-19 ಮೂಡಬಿದ್ರಿ ಆಳ್ವಾಸ್ “ಚಿಣ್ಣರಮೇಳ” (A.12-19 Moodabidri Alwas “Chinnaramela”)

Share: ಎ.12-19 ಮೂಡಬಿದ್ರಿ ಆಳ್ವಾಸ್ “ಚಿಣ್ಣರಮೇಳ” ಮೂಡುಬಿದಿರೆಯ ಕನ್ನಡ ಭವನದಲ್ಲಿ ಅಭಿನಯ ಪ್ರಧಾನ ಶಿಬಿರ (Moodabidri) ಮೂಡುಬಿದ್ರಿ : ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19ರ ವರೆಗೆ ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಅಭಿನಯ ಪ್ರಧಾನ ಚಿಣ್ಣರಮೇಳ 2026 ರಾಜ್ಯಮಟ್ಟದ ಮಕ್ಕಳಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.    ಪ್ರತಿದಿನ ಪೂ.9.00 ರಿಂದ ಸಂಜೆ 4.30ರ ವರೆಗೆ ನಡೆಯಲಿರುವ ಈ ಶಿಬಿರವು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ […]

(Moodabidri) ಮೂಡುಬಿದ್ರಿ : ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಎಪ್ರಿಲ್ 12 ರಿಂದ 19ರ ವರೆಗೆ ಮೂಡುಬಿದಿರೆಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಅಭಿನಯ ಪ್ರಧಾನ ಚಿಣ್ಣರಮೇಳ 2026 ರಾಜ್ಯಮಟ್ಟದ ಮಕ್ಕಳಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.

   ಪ್ರತಿದಿನ ಪೂ.9.00 ರಿಂದ ಸಂಜೆ 4.30ರ ವರೆಗೆ ನಡೆಯಲಿರುವ ಈ ಶಿಬಿರವು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

   ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಇವರ ರಂಗ ಬದುಕಿನ 35ನೇ ವರ್ಷದ ಶಿಬಿರ ಇದಾಗಿದ್ದು,
ಮಕ್ಕಳ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಂದ ಕೂಡಿರುತ್ತದೆ. ಈ ಶಿಬಿರದಲ್ಲಿ ವಯೋಮಿತಿ 7 ರಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.

  ಸಂಪನ್ಮೂಲ ವ್ಯಕ್ತಿಗಳಾಗಿ ಪ್ರತಿಭಾನ್ವಿತ ನೀನಾಸಂ ಮತ್ತು ರಂಗಾಯಣದ ರಂಗ ಪದವೀಧರರು ಭಾಗವಹಿಸಲಿದ್ದಾರೆ. ಊಟ, ಉಪಹಾರ ಹಾಗೂ ಅಗತ್ಯ ಇರುವ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
  ಆಸಕ್ತರು ಕೂಡಲೇ:
9448989382 (ವಿದುಷಿ ಸುಮನಾ ಪ್ರಸಾದ್)
9448215946 (ಡಾ. ಜೀವನ್ ರಾಂ ಸುಳ್ಯ)
9108238937 (ಗೀತಾಕುಮಾರಿ ಸುಳ್ಯ)
ಈ ನಂಬರಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.
   “ಇದು ಅಭಿನಯ ಪ್ರಧಾನ ಚಿಣ್ಣರಮೇಳ. ಪ್ರತಿಯೊಬ್ಬರಿಗೂ ಬದುಕಿನ ಸಂವಹನಕ್ಕೆ ಅಗತ್ಯವಾಗಿ ಅಭಿನಯ ಕಲೆ ಬೇಕೇ ಬೇಕು. ಆ ಮೂಲಕ ಮಾತಾಡದವರು ಮಾತಾಡುವಂತೆ, ಕುಣಿಯುವಂತೆ, ಬೆರೆಯುವಂತೆ, ಆತ್ಮಸ್ಥೈರ್ಯದಿಂದ ನಾಟಕದಲ್ಲಿ ಅಭಿನಯಿಸುವಂತೆ ಮತ್ತು ಜೀವನ ಪಾಠ, ಶಿಸ್ತನ್ನು ಕಲಿಸುವ ಶಿಬಿರ ಇದಾಗಿದ್ದು ಭಾಗವಹಿಸುವ ಪ್ರತಿಯೊಬ್ಬ ಮಗುವಿನ ಪ್ರತಿಭೆಗೂ ವೇದಿಕೆಯಾಗಲಿದೆ.”
ಡಾ| ಜೀವನ್ ರಾಂ ಸುಳ್ಯ.

Leave a comment

Your email address will not be published. Required fields are marked *

eMedia Kannada  @2025. All Rights Reserved.