• Home  
  • ಪಡುಬಿದ್ರಿ ದೇವಳ ಬ್ರಹ್ಮಕಲಶೋತ್ಸವ (Padubidri Temple Brahma Kalashotsava)
- ಧಾರ್ಮಿಕ

ಪಡುಬಿದ್ರಿ ದೇವಳ ಬ್ರಹ್ಮಕಲಶೋತ್ಸವ (Padubidri Temple Brahma Kalashotsava)

Share: ಪಡುಬಿದ್ರಿ ದೇವಳ ಬ್ರಹ್ಮಕಲಶೋತ್ಸವ  ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಸಂಪನ್ನ. (ಚಿತ್ರ ಕೃಪೆ : ರವಿ ಡಿಜಿಟಲ್ಸ್‌, ಪಡುಬಿದ್ರಿ) (Padubiri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದೇವಳದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಋತ್ವಿಜರ ಸಹಭಾಗಿತ್ವದಲ್ಲಿ ಬುಧವಾರ ಅಷ್ಟೋತ್ತರ ಶತ ನಾರಿಕೇಳ ಗಣಯಾಗ, ಮಹಾರುದ್ರಯಾಗ, ಪ್ರತಿಷ್ಠಾ ಯಾಗ, ಪೀಠಿಕಾ ಯಾಗ, ಶಕ್ತಿಯಾಗ, ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಅಷ್ಟಬಂಧ ಲೇಪನ, ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಆಚಾರ್ಯ ದಕ್ಷಿಣಾ, ಪ್ರತಿಜ್ಞಾವಿಧಿ, […]

(Padubiri) ಪಡುಬಿದ್ರಿ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದೇವಳದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಋತ್ವಿಜರ ಸಹಭಾಗಿತ್ವದಲ್ಲಿ ಬುಧವಾರ ಅಷ್ಟೋತ್ತರ ಶತ ನಾರಿಕೇಳ ಗಣಯಾಗ, ಮಹಾರುದ್ರಯಾಗ, ಪ್ರತಿಷ್ಠಾ ಯಾಗ, ಪೀಠಿಕಾ ಯಾಗ, ಶಕ್ತಿಯಾಗ, ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಅಷ್ಟಬಂಧ ಲೇಪನ, ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಆಚಾರ್ಯ ದಕ್ಷಿಣಾ, ಪ್ರತಿಜ್ಞಾವಿಧಿ, ಮಹಾಪೂಜೆ, ಗಣಪತಿ ದೇವರ ಶುದ್ಧಿ ಪ್ರಕ್ರಿಯಾದಿಗಳು ಜರಗಿತು.

   ಅಪರಾಹ್ನ ಜೀರ್ಣೋದ್ಧಾರ ಮುಂಬೈ ಸಮಿತಿ ವತಿಯಿಂದ ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆಯಿಂದ ಅಷ್ಟದಿಕ್ಪಾಲ ಯಾಗ, ಬಲಿಶಿಲಾ ಪ್ರತಿಷ್ಠೆ, ಮಹಾಬಲಿಪೀಠ ಪ್ರತಿಷ್ಠೆ, ಧ್ವಜಾಧಿವಾಸ ಯಾಗ, ದುರ್ಗಾರಾಧನೆ, ಮುಹೂರ್ತ ಬಲಿ, ರಾತ್ರಿ ಪೂಜೆ, ಗಣಪತಿ ದೇವರ ಬಿಂಬ ಶಯ್ಯಾಕಲ್ಪನೆ, ಶಿರಸ್ತತ್ವ ಯಾಗ, ಅಧಿವಾಸ ಯಾಗ, ನಪುಂಸಕ ಶಿಲಾನ್ಯಾಸ ಯಾಗ, ರತ್ನನ್ಯಾಸ ಯಾಗ, ಭದ್ರಕಮಂಡಲ ಪೂಜೆ ದುರ್ಗಾರಾಧನೆ, ಅದಮಾರು ಮಠದ ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜೆ ಜರಗಿತು.

  ಸಾಂಸ್ಕೃತಿಕ ಕಾರ್ಯಕ್ರಮದಡಿ ವನದುರ್ಗಾ ಟ್ರಸ್ಟ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಪಡುಬಿದ್ರಿ ಶ್ರೀವಾದಿರಾಜ ಸಂಕೀರ್ತನಾ ಮಂಡಳಿ ಇವರಿಂದ ಶ್ರೀ ತುಳಸೀನಾಮ ಸಂಕೀರ್ತನೆ, ಮೂಡಬಿದ್ರೆ ಆಳ್ವಾಸ್ ಮಹಾವಿದ್ಯಾಲಯದಿಂದ ನೃತ್ಯ ವೈವಿಧ್ಯ ನೆರವೇರಿತು.

  ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದೇವಳದ ಅನುವಂಶಿಕ ಮೊಕ್ತೇಸರರಾದ  ರತ್ನಾಕರ ರಾಜ ಅರಸು ಕಿನ್ನಕ್ಕ ಬಲ್ಲಾಳ್ ಪಡುಬಿದ್ರಿ ಬೀಡು, ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಪ್ರಕಾಶ್ ಶೆಟ್ಟಿ ಪಡುಹಿತ್ಲು, ವೈ ಎನ್ ರಾಮಚಂದ್ರ ರಾವ್, ಕೊರ್ನಾಯ ಪದ್ಮನಾಭ ರಾವ್, ವೈ ಸುಧೀರ್ ಕುಮಾರ್, ಗಣೇಶ್ ಕೋಟ್ಯಾನ್, ಲೋಕೇಶ್ ಶೆಟ್ಟಿ ಬಂಟ್ವಾಳ, ಸಾಂತೂರು ಭಾಸ್ಕರ್ ಶೆಟ್ಟಿ, ಗಣೇಶ್ ಗುಜರನ್, ಭಾಸ್ಕರ್ ಕೆ, ಬಾಲಾಜಿ ಯೋಗೀಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಮಮತಾ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ನವೀನ್ ಚಂದ್ರ ಜೆ ಶೆಟ್ಟಿ, ಕೃಷ್ಣ ಪ್ಯಾಲೇಸ್ ಕೃಷ್ಣ ಶೆಟ್ಟಿ, ಸಾಯಿನಾಥ ಶೆಟ್ಟಿ, ವೈ.ಸುಕುಮಾರ್, ಮುರಳೀನಾಥ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ರಂಗೋಲಿ, ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು, ಸುಧೀರ್ ಶೆಟ್ಟಿ, ಪುಚ್ಚೊಟ್ಟು ಬೀಡು ಚಂದ್ರಹಾಸ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಕಲ್ಯ ಶ್ರೀಕರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಹರೀಶ್ ರಾವ್, ಪ್ರಕಾಶ್ ದೇವಾಡಿಗ, ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಉಮೇಶ್ ಪೂಜಾರಿ, ನವೀನ್ ಎನ್ ಶೆಟ್ಟಿ, ಪ್ರೇಮ್ ನಾಥ್ ಶೆಟ್ಟಿ, ರಮಾಕಾಂತ ರಾವ್, ನಡಿಕೆರೆ ರತ್ನಾಕರ ಶೆಟ್ಟಿ, ಪ್ರಶಾಂತ್ ಶೆಣೈ, ಶಶಿಕಾಂತ್ ಪಡುಬಿದ್ರಿ, ವಿಶ್ವಾಸ್ ವಿ. ಅಮೀನ್,  ಅಶೋಕ್ ಸಾಲ್ಯಾನ್,  ಮನೋಹರ ಶೆಟ್ಟಿ, ಮಿಥುನ್ ಆರ್  ಹೆಗ್ಡೆ, ಹರೀಶ್ ಪುತ್ರನ್, ಕರುಣಾಕರ ಶೆಟ್ಟಿ, ರಚನ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಾಲಚಂದ್ರ ಶೆಟ್ಟಿ, ಬಾಲಗೋಪಾಲ್ ಬಲ್ಲಾಳ್, ವಿಶು ಕುಮಾರ್ ಶೆಟ್ಟಿ ಬಾಲ್,  ರಾಜೇಶ್ ಪಡುಬಿದ್ರಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.