• Home  
  • ಬೆಳ್ತಂಗಡಿ : ಸ್ಕೂಟಿಗೆ ಕ್ರೇನ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು (Belthangady: Scooty hit by crane, rider dies on the spot)
- ಅಪಘಾತ

ಬೆಳ್ತಂಗಡಿ : ಸ್ಕೂಟಿಗೆ ಕ್ರೇನ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು (Belthangady: Scooty hit by crane, rider dies on the spot)

Share: ಬೆಳ್ತಂಗಡಿ : ಸ್ಕೂಟಿಗೆ ಕ್ರೇನ್ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು ಬಳಂಜ ನಿವಾಸಿ ಜಯ ಮೇಸ್ತ್ರಿ ಮೃತಪಟ್ಟ ದುರ್ದೈವಿ. (Belthangadi) ಬೆಳ್ತಂಗಡಿ : ಕ್ರೇನ್ ಸ್ಕೂಟಿಯೊಂದಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳ್ತಂಗಡಿ ತಾಲೂಕಿನ ಬೆಳಾಲು ಪೇಟೆಯಲ್ಲಿ ಸಂಭವಿಸಿದೆ.    ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ನಿವಾಸಿ ಜಯ ಮೇಸ್ತ್ರಿ(49) ಮೃತಪಟ್ಟ ದುರ್ದೈವಿ.    ಜಯರವರು ಬೆಳಾಲು ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿ ರಬ್ಬರ್ ಟ್ಯಾಪಿಂಗ್ […]

(Belthangadi) ಬೆಳ್ತಂಗಡಿ : ಕ್ರೇನ್ ಸ್ಕೂಟಿಯೊಂದಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳ್ತಂಗಡಿ ತಾಲೂಕಿನ ಬೆಳಾಲು ಪೇಟೆಯಲ್ಲಿ ಸಂಭವಿಸಿದೆ.

   ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಬಳಂಜ ನಿವಾಸಿ ಜಯ ಮೇಸ್ತ್ರಿ(49) ಮೃತಪಟ್ಟ ದುರ್ದೈವಿ.

   ಜಯರವರು ಬೆಳಾಲು ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.

   ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿಯವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

 ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.