ಪಾರಾದೀಪ ತಂಡಕ್ಕೆ ಎಂ–11 ಟ್ರೋಫಿ: ಕಾರ್ಪೊರೇಟ್ ಸಂಸ್ಥೆಗಳ ಪಂದ್ಯಾಕೂಟ
ಹೆಜಮಾಡಿಯ ಬಸ್ತಿಪಡ್ಪು ರಾಜೀವ್ಗಾಂಧಿ ಮೈದಾನದಲ್ಲಿನಡೆದ ಕ್ರೀಡಾಕೂಟ
(Padubidri) ಪಡುಬಿದ್ರಿ: ಹೆಜಮಾಡಿಯ ಬಸ್ತಿಪಡ್ಪು ರಾಜೀವ್ಗಾಂಧಿ ಮೈದಾನದಲ್ಲಿ ಎಂ-11 ಎನರ್ಜಿ ಟ್ರಾನ್ಸಿಶನ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ನಡೆದ ಕಾರ್ಪೋರೇಟ್ ಕ್ರಿಕೆಟ್ ಲೀಗ್ನಲ್ಲಿ ಪಾರಾದೀಪ ತಂಡ ಎಂ-11 ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಮಂಗಳೂರು ಮತ್ತು ಉಡುಪಿಯ ವಿವಿಧ ಕಾರ್ಪೊರೇಟ್ ತಂಡಗಳಿಗಾಗಿ ನಡೆದ ಪಂದ್ಯಾಟದಲ್ಲಿ ಒಟ್ಟು 12ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಮಣಿಪಾಲ ಮಾಹೆ ತಂಡವನ್ನು ಪಾರಾದೀಪ್ ತಂಡ ಸೋಲಿಸಿ ಟ್ರೋಫಿ ಹಾಗೂ ರೂ. 33,333 ಹಾಗೂ ರನ್ನರ್ಅಪ್ ಪಡೆದ ಮಾಹೆ ತಂಡ ರೂ. 22, 222 ನಗದನ್ನು ಪಡೆದುಕೊಂಡಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮಾಹೆ ತಂಡದ ರಕ್ಷಿತ್, ಮ್ಯಾನ್ ಆಫ್ ದಿ ಮ್ಯಾಚ್ನ್ನು ಪಾರಾದೀಪ್ ತಂಡದ ಅರ್ಜುನ್, ಬೆಸ್ಟ್ ದಾಂಡಿಗನಾಗಿ ಪಾರಾದೀಪ್ ತಂಡದ ಶ್ರವಣ್, ಉತ್ತಮ ಫೀಲ್ಡರ್ ಆಗಿ ಸೆನ್ಝೈನ್ ತಂಡದ ಸಂತೋಷ್, ಬೆಸ್ಟ್ ಕೀಪರ್ ಆಗಿ ಎಂ-11 ತಂಡದ ಗುರು ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಸ್ಪೆನ್ ಎಸ್ಇಝೆಡ್ ಮುಖ್ಯಸ್ಥರಾದ ಅಶೋಕ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ. ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾಪು ತಾಲೂಕು ಅಧ್ಯಕ್ಷ ಹಮೀದ್ ಪಡುಬಿದ್ರಿ, ಎಂ11 ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಅನಿಲ್ ಪಾಲನ್, ಟರ್ಮಿನಲ್ ಮುಖ್ಯಸ್ಥ ಮಧು, ಯಶೋಧರ ಶೆಟ್ಟಿ, ಕಾರ್ತಿಕ್, ರಮ್ಯಾ, ಲತೇಶ್, ಕಬೀರ್, ಶರಣ್, ರಜತ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆ: ಪಡುಬಿದ್ರಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಅನಿಲ್, ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಕಿಣಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶೆಟ್ಟಿ, ಎಂ11 ಕಂಪೆನಿಯ ಅಧಿಕಾರಿಗಳಾದ ಡಾ. ಕುಮಾರ್ ಐಯ್ಯಾರ್, ಮುರ್ತುಜಾ ಖಾನ್, ಅನಿಲ್ ಪಾಲನ್, ಮಧು ಉಪಸ್ಥಿತರಿದ್ದರು.
ಕಾರ್ತಿಕಾ ಸ್ವಾಗತಿಸಿದರು. ಪ್ರಕಾಶ್ ಕೆರೆಮನೆ ಕಾರ್ಯಕ್ರಮ ನಿರ್ವಹಿಸಿದರು.

