ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ಉಳಿತಾಯಗಾರರ ಸೊಸೈಟಿಯ ಕಚೇರಿ ಉದ್ಘಾಟನೆ
ಪಡುಬಿದ್ರಿಯ ಅಗ್ರಜ ಮಂಜುಶ್ರೀ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ಪ್ರಾರಂಭಗೊಂಡ ಕಛೇರಿ
(Padubidri) ಪಡುಬಿದ್ರಿ: ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಿಲ್ಲಬೇಕು. ಈ ಬ್ಯಾಂಕುಗಳು ಲಾಭಗಳಿಸುವುದಕ್ಕಿಂತ ಹೆಚ್ಚಾಗಿ ಜನರಿಗೆ ಸೇವೆ ಸಲ್ಲಿಸುವುದನ್ನು ಪ್ರಮುಖ ಗುರಿಯಾಗಿ ಹೊಂದಬೇಕು. ಎಂದು ಡಿ.ಕೆ ಗ್ರೂಫ್ ಅಫ್ ಕಂಪನಿಸ್ ಅಡಳಿತ ನಿರ್ದೇಶಕ ಅಲ್ವಿನ್ ಜೋಯಲ್ ನೊರಾನ್ಹಾ ಹೇಳಿದರು.
ಅವರು ಪಡುಬಿದ್ರಿಯ ಅಗ್ರಜ ಮಂಜುಶ್ರೀ ಬಿಲ್ಡಿಂಗ್ ನ ಪ್ರಥಮ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಮಹಮ್ಮಾಯಿ ತೆರಿಗೆ ಪಾವತಿದಾರರ ಮತ್ತು ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೂ-ಅಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ನವೀನ್ ಚಂದ್ರ ಜೆ. ಶೆಟ್ಟಿಯವರು ಸಂಸ್ಥೆಗೆ ಶುಭಹಾರೈಸಿದರು.
ಡಿ.ಕೆ ಟ್ರಾನ್ಸ್ ಪೋರ್ಟ್ ಕಂಪನಿಯ ಮಾಲಕಿ ಲಿಜ್ಜಿ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಉದ್ಯಮಿ ದೀಪಕ್ ಎರ್ಮಾಳು, ರೋಟರಿ ವಲಯ ಪೂರ್ವ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ, ರಾಗ್ ರಂಗ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಸೆಂಟ್ರಲ್ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ರವೀಂದ್ರ ಶೆಟ್ಟಿ ಮುಂಬಯಿ, ಕಾಪು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೀಜ್ ಹುಸೇನ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ, ಸಂಸ್ಥೆಯ ಪಾಲುದಾರ ಸಂತೋಷ್ ಪಡುಬಿದ್ರಿ, ವ್ಯವಸ್ಥಾಪಕ ಪಾಲುದಾರರಾದ ಪ್ರೇಮ ಕೋಟ್ಯಾನ್, ಸಂಸ್ಥೆಯ ಉಪಾಧ್ಯಕ್ಷ ಶರತ್ ಶೆಟ್ಟಿ ಎರ್ಮಾಳು ಉಪಸ್ಥಿತರಿದ್ದರು
ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಸುಧಾಕರ್. ಕೆ ನಿರೂಪಿಸಿ ವಂದಿಸಿದರು.

