• Home  
  • ಶ್ವೇತಭವನದ ಬಳಿ ಶೂಟೌಟ್: ಬಂದೂಕುಧಾರಿ ಸಾವು, ಇಬ್ಬರಿಗೆ ಗಾಯ (Gunman fires 30 rounds near White House)
- ಅಪರಾಧ

ಶ್ವೇತಭವನದ ಬಳಿ ಶೂಟೌಟ್: ಬಂದೂಕುಧಾರಿ ಸಾವು, ಇಬ್ಬರಿಗೆ ಗಾಯ (Gunman fires 30 rounds near White House)

Share: ಶ್ವೇತಭವನದ ಬಳಿ ಶೂಟೌಟ್: ಬಂದೂಕುಧಾರಿ ಸಾವು, ಇಬ್ಬರಿಗೆ ಗಾಯ ಬಂದೂಕುಧಾರಿ ಸಾವನ್ನಪ್ಪಿದ್ದಾಗಿ ಅಧಿಕಾರಿಗಳಿಂದ ಮಾಹಿತಿ  (America) ಅಮೇರಿಕಾ: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ (White House) ಬಳಿ (ಮೇ 23, 2026ರ ಶನಿವಾರ ಸಂಜೆ) ನಡೆದ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯೊಬ್ಬ ಏಕಾಏಕಿ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.   ಶನಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ವಾಷಿಂಗ್ಟನ್‌ನ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ (Security Checkpoint) ಬಳಿ ​ಘಟನೆ ಘಟಿಸಿದೆ.   ತಕ್ಷಣ ಕಾರ್ಯಪ್ರವೃತ್ತರಾದ […]

 (America) ಅಮೇರಿಕಾ: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ (White House) ಬಳಿ (ಮೇ 23, 2026ರ ಶನಿವಾರ ಸಂಜೆ) ನಡೆದ ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯೊಬ್ಬ ಏಕಾಏಕಿ ಭದ್ರತಾ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. 

 ಶನಿವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ವಾಷಿಂಗ್ಟನ್‌ನ ಶ್ವೇತಭವನದ ಭದ್ರತಾ ತಪಾಸಣಾ ಕೇಂದ್ರದ (Security Checkpoint) ಬಳಿ ​ಘಟನೆ ಘಟಿಸಿದೆ.

  ತಕ್ಷಣ ಕಾರ್ಯಪ್ರವೃತ್ತರಾದ ಯುಎಸ್ ಸೀಕ್ರೆಟ್ ಸರ್ವೀಸ್ (Secret Service) ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದಾರೆ. ಎರಡೂ ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ದಾಳಿ ನಡೆಸಿದ ಶಂಕಿತ ಬಂದೂಕುಧಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

​ ಗಾಯಾಳುಗಳು: ಈ ಘಟನೆಯಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಅಧ್ಯಕ್ಷರು ಸುರಕ್ಷಿತ: ಗುಂಡಿನ ದಾಳಿ ನಡೆದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಒಳಗಡೆಯೇ ಇದ್ದು, ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ಶಾಂತಿ ಒಪ್ಪಂದದ ಮಾತುಕತೆಯ ಚರ್ಚೆಯಲ್ಲಿದ್ದರು. ಸೀಕ್ರೆಟ್ ಸರ್ವೀಸ್ ಅಧಿಕಾರಿಗಳ ಕಟ್ಟುನಿಟ್ಟಿನ ಭದ್ರತೆಯಿಂದಾಗಿ ಅಧ್ಯಕ್ಷರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.

​ ಪ್ರಸ್ತುತ ಈ ದಾಳಿಯ ಹಿಂದಿನ ಉದ್ದೇಶವೇನೆಂಬುದರ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿವೆ.

   ಶಂಕಿತನನ್ನು 21 ವರ್ಷದ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ.  

  ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಕಟ್ಟಡದ ಬಳಿಯ 17 ನೇ ಬೀದಿ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ  ನಲ್ಲಿರುವ ಶ್ವೇತಭವನದ ಹೊರಗೆ ಗುಂಡಿನ ದಾಳಿ ನಡೆದಿದೆ. ಸರಿಸುಮಾರು 15 ರಿಂದ 30 ಗುಂಡು ಹಾರಿಸಲಾಗಿದೆ ಎಂದು ಕಾನೂನು ಜಾರಿ ಮೂಲಗಳು   ತಿಳಿಸಿವೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.