• Home  
  • ಪೂಜಾರಿ, ರೈ ನಿವಾಸಕ್ಕೆ ಸಚಿವ ಯೂ. ಟಿ ಖಾದರ್ ಭೇಟಿ (Minister U T. Khader visits Pujari, Rai’s residence)
- ಸೌಹಾರ್ಧ

ಪೂಜಾರಿ, ರೈ ನಿವಾಸಕ್ಕೆ ಸಚಿವ ಯೂ. ಟಿ ಖಾದರ್ ಭೇಟಿ (Minister U T. Khader visits Pujari, Rai’s residence)

Share: ಪೂಜಾರಿ, ರೈ ನಿವಾಸಕ್ಕೆ ಸಚಿವ ಯೂ ಟಿ ಖಾದರ್ ಭೇಟಿ ಕುಶಲೋಪಚರಿ ನಡೆಸಿ,  ಆರೋಗ್ಯ ವಿಚಾರಿಸಿ ಮಾರ್ಗದರ್ಶನ ಪಡೆದ ಖಾದರ್ (Bantwala) ಬಂಟ್ವಾಳ; ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಭಾನುವಾರ ಸಂಜೆ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜ್ಯದ ನೂತನ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು.ಟಿ. ಖಾದರ್ ಅವರು  ಆಶೀರ್ವಾದ ಪಡೆದರು.  ಮಾಜಿ‌ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರಿಗೆ […]

(Bantwala) ಬಂಟ್ವಾಳ; ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಭಾನುವಾರ ಸಂಜೆ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ರಾಜ್ಯದ ನೂತನ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖಾ ಸಚಿವ ಯು.ಟಿ. ಖಾದರ್ ಅವರು  ಆಶೀರ್ವಾದ ಪಡೆದರು.
  ಮಾಜಿ‌ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರಿಗೆ ರಾಜಕೀಯವಾಗಿ ಗುರುವಿನ ಸ್ಥಾನ ನೀಡಿರುವ ಸಚಿವ ಯು.ಟಿ. ಖಾದರ್ ಅವರು ಒಂದಷ್ಟು ಹೊತ್ತು ಕುಶಲೋಪಚರಿ ನಡೆಸಿ ಅವರ ಆರೋಗ್ಯವನ್ನು ವಿಚಾರಿಸಿ ಮಾರ್ಗದರ್ಶನವನ್ನು ಪಡೆದರು.
  ರೈ ನಿವಾಸಕ್ಕೂ ಭೇಟಿ:
  ಇಲ್ಲಿಂದ ನೇರವಾಗಿ ಕಳ್ಳಿಗೆಯಲ್ಲಿರುವ  ಮಾಜಿ ಸಚಿವ ರಮಾನಾಥ ರೈ ಅವರ ಮನೆಗೂ ಸಚಿವ ಯು.ಟಿ. ಖಾದರ್ ಅವರು ನೀಡಿ ಆಶೀರ್ವಾದ ಪಡೆದರಲ್ಲದೆ, ರಾಜ್ಯ ಮತ್ತು ಜಿಲ್ಲಾ ರಾಜಕಾರಣದ ಬಗ್ಗೆಯು ಒಂದಷ್ಟು ಹೊತ್ತು ಚರ್ಚೆ ನಡೆಸಿದರಲ್ಲದೆ  ರೈ ನಿವಾಸದಲ್ಲೇ ಸಂಜೆಯ ಉಪಹಾರವನ್ನು ಮಾಡಿದರು.

  ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರನ್ನು ಸಚಿವ ಖಾದರ್ ಅವರನ್ನು ಸ್ವಾಗತಿಸಿ, ಗೌರವಿಸಿದರು.
  ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಬಂಟ್ಚಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ  ಬೇಬಿ ಕುಂದರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬೂಡಾ ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಬ್ಲಾಕ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ತಾ.ಪಂ.ಮಾಜಿ ಅಧ್ಯಕ್ಷ ಪದ್ಮನಾಭ ರೈ, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಣಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ರೈ, ಮಾಜಿ ಕಾರ್ಪೋರೇಟರ್ ಅಪ್ಪಿ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ಸಾಮಾಜಿಕ ಜಾಲತಾಣ ಮುಖಂಡ ಪ್ರವೀಣ್ ರೋಡ್ರಿಗಸ್  ಮತ್ತಿತರ ಪಕ್ಷದ ಮುಖಂಡರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.