ನಬಾರ್ಡ್ ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ ಸಾಲದ ಮಿತಿ ನಿಗದಿ ಷರತ್ತು ಸಡಿಲಿಕೆ ಒತ್ತಾಯ
ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ತಂಡದಿಂದ ಮನವಿ
(Shirva) ಶಿರ್ವ: ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳನ್ನು ಮರು ಪರಿಶೀಲಿಸುವಂತೆ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದ ನಿಯೋಗ SCDCC ಬ್ಯಾಂಕ್ ನ ಗೌರವಾನ್ವಿತ ಅಧ್ಯಕ್ಷರಾದ ಡಾ. ಎನ್.ಎಂ.ರಾಜೇಂದ್ರಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳ ಅನ್ವಯ ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತದೃಷ್ಟಿಯಿಂದ ಈ ಹಿಂದಿನಂತೆಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆಎನ್.ಎಂ. ರಾಜೇಂದ್ರಕುಮಾರ್ ಅವರನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಲಾಯಿತು.
ನಿಯೋಗದಲ್ಲಿ ಸಂಘದ ನಿರ್ದೇಶಕರಾದ ಹರಿಣಾಕ್ಷ ಶೆಟ್ಟಿ ಪಿಲಾರು ಉಪಸ್ಥಿತರಿದ್ದರು.

