• Home  
  • ಕಾಪು : ಪಾದಚಾರಿಗೆ ಕಾರು ಡಿಕ್ಕಿ ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು (Kaup: Pedestrian hit by car; treatment ineffective, dies)
- ಅಪಘಾತ

ಕಾಪು : ಪಾದಚಾರಿಗೆ ಕಾರು ಡಿಕ್ಕಿ ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು (Kaup: Pedestrian hit by car; treatment ineffective, dies)

Share: ಕಾಪು : ಪಾದಚಾರಿಗೆ ಕಾರು ಡಿಕ್ಕಿ ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು  ಉಳಿಯಾರಗೋಳಿ ನಿವಾಸಿ ಹರಿನಾರಾಯಣ ರಾವ್ (80) ಮೃತ ವ್ಯಕ್ತಿ. (Kaup)ಕಾಪು : ಪಾದಚಾರಿಯೋರ್ವರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರಾ.ಹೆ. 66ರ ಉಳಿಯಾರ ಗೋಳಿ ಗ್ರಾಮದ, ಕೊತಲಕಟ್ಟೆ ರಿಕ್ಷಾ ಸ್ಟ್ಯಾಂಡ್  ಸಮೀಪ ಗುರುವಾರ ಬೆಳಗ್ಗೆ ಘಟಿಸಿದೆ.  ಹರಿನಾರಾಯಣ ರಾವ್ (80) ಮೃತ ವ್ಯಕ್ತಿ.    ಇವರು ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋತಲಕಟ್ಟೆ ರಿಕ್ಷಾ ನಿಲ್ದಾಣದ ಬಳಿ  ಸಾರ್ವಜನಿಕ […]

(Kaup)ಕಾಪು : ಪಾದಚಾರಿಯೋರ್ವರಿಗೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ರಾ.ಹೆ. 66ರ ಉಳಿಯಾರ ಗೋಳಿ ಗ್ರಾಮದ, ಕೊತಲಕಟ್ಟೆ ರಿಕ್ಷಾ ಸ್ಟ್ಯಾಂಡ್  ಸಮೀಪ ಗುರುವಾರ ಬೆಳಗ್ಗೆ ಘಟಿಸಿದೆ.

 ಹರಿನಾರಾಯಣ ರಾವ್ (80) ಮೃತ ವ್ಯಕ್ತಿ.

   ಇವರು ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋತಲಕಟ್ಟೆ ರಿಕ್ಷಾ ನಿಲ್ದಾಣದ ಬಳಿ  ಸಾರ್ವಜನಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ.

   ಪರಿಣಾಮ ಹರಿನಾರಾಯಣ ರಾವ್ ರವರ ತಲೆ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

   ಆದರೆ ಚಿಕಿತ್ಸೆ ಪಡೆಯುತ್ತಿದ್ದ ಹರಿನಾರಾಯಣ ರಾವ್ ಅವರು ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  ಅಪಘಾತಕ್ಕೆ ಕಾರು ಚಾಲಕ ಸುಶಿತ್ ಎಸ್. ಬೋಳಾರ್ ಅವರ ಅಜಾಗರೂಕ ಹಾಗೂ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

  ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.